ಬೆಂಗಳೂರು: ಬೆಂಗಳೂರು ಲಾಕ್ಡೌನ್ ಬುಧವಾರಕ್ಕೆ ಕೊನೆಗೊಳ್ಳಲಿದೆ. ಈ ಹಿಂದೆ ಮೇಯರ್ ಹಾಗೂ ಹಿಂದಿನ ಆಯುಕ್ತರು ಲಾಕ್ ಡೌನ್ ಮುಂದುವರಿಸುವ ಬಗ್ಗೆ ಒಲವು ಹೊಂದಿದ್ದರು. ಆದ್ರೆ, ನೂತನ ಆಯುಕ್ತ ಮಂಜುನಾಥ್ ಪ್ರಸಾದ್ ಲಾಕ್ಡೌನ್ ಮುಂದುವರಿಸುವ ಅಗತ್ಯತೆಯನ್ನು ತಳ್ಳಿಹಾಕಿದ್ದಾರೆ.
ಮತ್ತೆ ಬೆಂಗಳೂರು ಲಾಕ್ ಡೌನ್ ಆಗುತ್ತಾ: ಬಿಬಿಎಂಪಿ ಆಯುಕ್ತರು ಏನಂತಾರೆ? - BBMP Commissioner
ಲಾಕ್ ಡೌನ್ ಮುಂದುವರಿಸುವ ಚಿಂತನೆಯಲ್ಲಿ ಇಲ್ಲ. ಮತ್ತೆ ಲಾಕ್ ಡೌನ್ ಮಾಡುವ ಅಗತ್ಯ ಇಲ್ಲ. ಎಲ್ಲಾ ಕೋವಿಡ್ ರೋಗಿಗಳನ್ನು ಸರ್ವೈಲೆನ್ಸ್ ಮಾಡಬೇಕಿದೆ ಎಂದು ಬಿಬಿಎಂಪಿ ನೂತನ ಆಯುಕ್ತ ಮಂಜುನಾಥ್ ಪ್ರಸಾದ್ ಲಾಕ್ಡೌನ್ ಕುರಿತು ಹೇಳಿದ್ದಾರೆ.
ಲಾಕ್ ಡೌನ್ ಮುಂದುವರಿಸುವ ಚಿಂತನೆಯಲ್ಲಿ ಇಲ್ಲ. ಮತ್ತೆ ಲಾಕ್ ಡೌನ್ ಮಾಡುವ ಅಗತ್ಯ ಇಲ್ಲ. ಎಲ್ಲಾ ಕೋವಿಡ್ ರೋಗಿಗಳನ್ನು ಸರ್ವೈಲೆನ್ಸ್ ಮಾಡಬೇಕಿದೆ. ಸೋಂಕಿನ ಲಕ್ಷಣ ಅಥವಾ ಉಸಿರಾಟದ ತೊಂದರೆ ಇರುವವರನ್ನು ಪತ್ತೆ ಹಚ್ಚಿ ಟೆಸ್ಟಿಂಗ್ ಮಾಡಬೇಕಿದೆ. ಕೊರೊನಾ ಪರೀಕ್ಷೆಗಳು ಹಾಗೂ ಕ್ಲಿನಿಕ್ಗಳನ್ನ ಹೆಚ್ಚಳ ಮಾಡ್ತೇವೆ. ಎಲ್ಲದಕ್ಕೂ ನಾವು ಸಿದ್ಧರಿದ್ದು, ಯಾವುದೇ ತೊಂದರೆ ಇಲ್ಲ ಅಂದ್ರೆ ಹೋಮ್ ಐಸೋಲೇಷನ್ ಮಾಡಲಾಗುವುದು ಎಂದಿದ್ದಾರೆ.
ಅಗತ್ಯ ಇದ್ದವರಿಗೆ ಮಾತ್ರ ಚಿಕಿತ್ಸೆ ಕೊಡಲಾಗುತ್ತೆ. ಜನ ಯಾವುದೇ ಕಾರಣಕ್ಕೂ ಆತಂಕ ಪಡುವ ಅಗತ್ಯ ಇಲ್ಲ. ಅಲ್ಲದೆ ಬೆಂಗಳೂರಿಗೆ 50 ಸಾವಿರಆ್ಯಂಟಿಜನ್ ಟೆಸ್ಟಿಂಗ್ ಕಿಟ್ ನೀಡಲಾಗಿದೆ. ಪ್ರತಿದಿನ 149 ಕಡೆ ಟೆಸ್ಟಿಂಗ್ ನಡೆಯುತ್ತಿದೆ ಎಂದು ಮಾಹಿತಿ ನೀಡಿದರು.