ಕರ್ನಾಟಕ

karnataka

ETV Bharat / state

ದಾಸಪ್ಪ ಆಸ್ಪತ್ರೆಯಿಂದ 148 ಕೇಂದ್ರಗಳಿಗೆ ಲಸಿಕೆ ರವಾನೆ.. ವ್ಯಾಕ್ಸಿನೇಶನ್​ಗೆ ಸಕಲ ಸಿದ್ಧತೆ - ಬಿಬಿಎಂಪಿ ಆಯುಕ್ತ ಮಂಜುನಾಥ್​ ಪ್ರಸಾದ್​ ಲೇಟೆಸ್ಟ್​ ಸುದ್ದಿಗೋಷ್ಟಿ

ಬೆಂಗಳೂರಿನಲ್ಲಿ ಪ್ರಥಮ ಹಂತದ ಕೊರೊನಾ ವ್ಯಾಕ್ಸಿನ್ ನೀಡಲು ಬಿಬಿಎಂಪಿ ತಯಾರಿ ನಡೆಸಿದೆ.ದಾಸಪ್ಪ ಆಸ್ಪತ್ರೆಯಿಂದ 148 ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ವ್ಯಾಕ್ಸಿನ್​ ರವಾನೆಯಾಗಲಿದೆ. ಅಲ್ಲಿಂದ ಒಂದೊಂದು ಲಸಿಕಾ ಕೇಂದ್ರಕ್ಕೂ ಲಸಿಕೆ ತಲುಪಲಿದೆ. ಇಂದಿನಿಂದ ಪ್ರತಿದಿನ ವಿಶೇಷ ಆಯುಕ್ತರು ತಮ್ಮ- ತಮ್ಮ ವಲಯದ ಲಸಿಕಾ ಕೇಂದ್ರಗಳಿಗೆ ಭೇಟಿ ಕೊಟ್ಟು, ಸಿದ್ಧತೆ ಬಗ್ಗೆ ಪರಿಶೀಲಿಸಲಿದ್ದಾರೆ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್​ ಮಾಹಿತಿ ನೀಡಿದ್ದಾರೆ.

bbmp commissioner order to monitor Preparation  at vaccine centers
ಮಂಜುನಾಥ್ ಪ್ರಸಾದ್

By

Published : Jan 11, 2021, 3:16 PM IST

ಬೆಂಗಳೂರು:ನಗರದಲ್ಲಿ ಮೊದಲ ಹಂತದಲ್ಲಿ ಕೋವಿಡ್​ ಲಸಿಕೆ ನೀಡಲು ಬಿಬಿಎಂಪಿ ಸಜ್ಜುಗೊಂಡಿದೆ. ಈಗಾಗಲೇ ನಿಗದಿಯಾಗಿರುವ ಲಸಿಕಾ ಕೇಂದ್ರಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಆಯಾ ವಲಯದ ವಿಶೇಷ ಆಯುಕ್ತರು ದಿನನಿತ್ಯ ಭೇಟಿ ನೀಡಿ ಸಿದ್ಧತೆ ಬಗ್ಗೆ ಪರಿಶೀಲನೆ ನಡೆಸಬೇಕೆಂದು ಆಯುಕ್ತ ಮಂಜುನಾಥ್ ಪ್ರಸಾದ್ ತಿಳಿಸಿದರು.

ಮಂಜುನಾಥ್ ಪ್ರಸಾದ್

ಈ ಬಗ್ಗೆ ಮಾತನಾಡಿದ ಅವರು, ಲಸಿಕೆ ವಿಚಾರವಾಗಿ ಈಗಾಗಲೇ ಚರ್ಚೆ, ಸಭೆಗಳು ನಡೆದಿವೆ. ಲಸಿಕಾ ಕೇಂದ್ರಗಳಲ್ಲಿ ಇರಬೇಕಾದ ಮೂಲಭೂತ ಸೌಕರ್ಯಗಳ ಬಗ್ಗೆಯೂ ಗಮನ ವಹಿಸಲಾಗುವುದು. ಇದನ್ನು ಹೊರತುಪಡಿಸಿ ಬೇರೆ ಆಸ್ಪತ್ರೆಗಳು, ಮೆಡಿಕಲ್ ಕಾಲೇಜು, ನರ್ಸಿಂಗ್ ಕಾಲೇಜು ಗುರುತಿಸಲಾಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಮೂರು ಕೋಣೆಗಳು ಇರದಿದ್ದರೂ ನಡೆಯುತ್ತದೆ. ಆದರೆ ಐದು ಸಿಬ್ಬಂದಿ ಇರುವುದು ಕಡ್ಡಾಯ, ಜೊತೆಗೆ ವೈ-ಫೈ ಕನೆಕ್ಟಿವಿಟಿ, ಆ್ಯಂಬುಲೆನ್ಸ್​ ಸೇವೆ ಇರಲಿದೆ. ಐದೈದು ಕೇಂದ್ರಗಳಿಗೆ ಒಬ್ಬರು ಹಿರಿಯ ಅಧಿಕಾರಿಯನ್ನು ಸೆಕ್ಟರ್ ಆಫೀಸರ್ ಆಗಿ ನೇಮಕ ಮಾಡಲಾಗುತ್ತದೆ. ಖಾಸಗಿ ಆಸ್ಪತ್ರೆ, ಖಾಸಗಿ ಮೆಡಿಕಲ್ ಕಾಲೇಜುಗಳಲ್ಲಿ ಫಲಾನುಭವಿಗಳು ನೂರಕ್ಕಿಂತ ಹೆಚ್ಚು ಜನ ಇದ್ದರೆ, ಅವರ ಸಂಖ್ಯೆಗೆ ಅನುಗುಣವಾಗಿ ಲಸಿಕಾ ಕೇಂದ್ರ ನಿರ್ಮಾಣ ಮಾಡಿ, ಒಬ್ಬರು ಸೂಪರ್​ ವೈಸರ್ ಅನ್ನು ನೇಮಕ ಮಾಡಲಾಗುವುದು ಎಂದು ಮಾಹಿತಿ ನೀಡಿದ್ರು.

ದಾಸಪ್ಪ ಆಸ್ಪತ್ರೆಯಿಂದ 3 ಶೀತಲ ವ್ಯವಸ್ಥೆ ಇರುವ ವಾಹನಗಳ ಮೂಲಕ 148 ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ವ್ಯಾಕ್ಸಿನ್​ ರವಾನೆಯಾಗಲಿದೆ. ಅಲ್ಲಿಂದ ಒಂದೊಂದು ಲಸಿಕಾ ಕೇಂದ್ರಕ್ಕೂ ಲಸಿಕೆ ತಲುಪಲಿದೆ. ಇಂದಿನಿಂದ ಪ್ರತಿದಿನ ವಿಶೇಷ ಆಯುಕ್ತರು ತಮ್ಮ- ತಮ್ಮ ವಲಯದ ಲಸಿಕಾ ಕೇಂದ್ರಗಳಿಗೆ ಭೇಟಿ ಕೊಟ್ಟು, ಸಿದ್ಧತೆ ಬಗ್ಗೆ ಪರಿಶೀಲಿಸಲಿದ್ದಾರೆ, ರಾಜ್ಯ ಸರ್ಕಾರದ ಮಾರ್ಗಸೂಚಿಯಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಮಂಜುನಾಥ್​ ಪ್ರಸಾದ್​ ಹೇಳಿದ್ರು.

ಇದನ್ನೂ ಓದಿ:ಪದವಿ, ಸ್ನಾತಕೋತ್ತರ‌ ಕೋರ್ಸ್​ಗಳಿಗೆ ಜ.15 ರಿಂದ‌ ಆಫ್​ಲೈನ್ ತರಗತಿ ಆರಂಭ: ಡಿಸಿಎಂ ಅಶ್ವತ್ಥ ನಾರಾಯಣ

For All Latest Updates

TAGGED:

ABOUT THE AUTHOR

...view details