ಬೆಂಗಳೂರು:ಬಿಬಿಎಂಪಿ ಆಯುಕ್ತರಾಗಿದ್ದ ಮಂಜುನಾಥ್ ಪ್ರಸಾದ್ ವರ್ಗಾವಣೆಯಾಗಿದ್ದು, ನೂತನ ಆಯುಕ್ತರಾಗಿ ಆಡಳಿತಗಾರರಾಗಿದ್ದ ಗೌರವ್ ಗುಪ್ತಾರನ್ನು ನೇಮಕಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ.
ಗೌರವ್ ಗುಪ್ತಾ ಅವರಿಗೆ ಹೆಚ್ಚುವರಿಯಾಗಿ ಕಂದಾಯ ಇಲಾಖೆ ವಿಪತ್ತು ನಿರ್ವಹಣೆಗೆ ಪ್ರಧಾನ ಕಾರ್ಯದರ್ಶಿಯಾಗಿ ಹೊಣೆ ನೀಡಲಾಗಿದೆ. ಬಿಬಿಎಂಪಿ ನೂತನ ಆಡಳಿತಗಾರರಾಗಿ ರಾಕೇಶ್ ಸಿಂಗ್ ಅವರಿಗೆ ಹೆಚ್ಚುವರಿ ಹೊಣೆಗಾರಿಕೆ ನೀಡಲಾಗಿದ್ದು, ಇವರು ಜಲಸಂಪನ್ಮೂಲ ಇಲಾಖೆ ಎಸಿಎಸ್ ಕೂಡಾ ಆಗಿದ್ದಾರೆ.