ಕರ್ನಾಟಕ

karnataka

ETV Bharat / state

ಕೋವಿಡ್ ರೋಗಿಗಳು 108ಗೆ ಕರೆ ಮಾಡಬೇಕಾ?, ಬಿಬಿಎಂಪಿ ಸಂಪರ್ಕಿಸಬೇಕಾ?: ಆಯುಕ್ತರ ಸ್ಪಷ್ಟನೆ

ಕೊರೊನಾ ಸೋಂಕು ಪರೀಕ್ಷೆ ಮಾಡಿದ ನಂತರ ಕೊರೊನಾ ಪಾಸಿಟಿವ್ ದೃಢಪಟ್ಟ ಮೇಲೆ, ಆಸ್ಪತ್ರೆಗೆ ಸೇರಿಸುವ ಕೆಲಸವನ್ನು ಬಿಬಿಎಂಪಿ ಮಾಡುತ್ತದೆ. 108 ಆ್ಯಂಬುಲೆನ್ಸ್ ಹಾಗೂ ಬಿಬಿಎಂಪಿ ಜವಾಬ್ದಾರಿಯನ್ನು ಸ್ಪಷ್ಟವಾಗಿ ವಿವರಿಸಲಾಗಿದೆ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ತಿಳಿಸಿದರು.

bbmp-commissioner-manjunath-prasad-talk-about-ambulance-issue
ಕೋವಿಡ್ ರೋಗಿಗಳು 108ಗೆ ಕರೆ ಮಾಡಬೇಕಾ?, ಬಿಬಿಎಂಪಿ ಸಂಪರ್ಕಿಸಬೇಕಾ?: ಆಯುಕ್ತರ ಸ್ಪಷ್ಟನೆ

By

Published : Oct 15, 2020, 4:51 PM IST

ಬೆಂಗಳೂರು:ಕೋವಿಡ್ ರೋಗಿಗಳು 108 ಆ್ಯಂಬುಲೆನ್ಸ್​​ಗೆ ಕರೆ ಮಾಡಿದರೆ ಬಿಬಿಎಂಪಿ ಕಂಟ್ರೋಲ್ ರೂಂ ನಂಬರ್ ಕೊಡುತ್ತಾರೆ. ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ತಿದ್ದಾರೆ ಎಂಬ ಅನೇಕ ದೂರುಗಳು ಕೇಳಿ ಬಂದಿದ್ದು, ಈ ವಿಚಾರವಾಗಿ ಆಯುಕ್ತ ಮಂಜುನಾಥ್ ಪ್ರಸಾದ್ ಮಾಹಿತಿ ನೀಡಿದ್ದಾರೆ.

ಕೋವಿಡ್ ರೋಗಿಗಳು 108ಗೆ ಕರೆ ಮಾಡಬೇಕಾ?, ಬಿಬಿಎಂಪಿ ಸಂಪರ್ಕಿಸಬೇಕಾ?: ಆಯುಕ್ತರ ಸ್ಪಷ್ಟನೆ

108 ಆ್ಯಂಬುಲೆನ್ಸ್ ಆಡಳಿತಾಧಿಕಾರಿಯಾಗಿ ಆರೋಗ್ಯ ಇಲಾಖೆಯ ಡಾ.ರಜನಿ ಅವರ ಜೊತೆ ಈ ವಿಚಾರವಾಗಿ ನಿರಂತರವಾಗಿ ಸಂಪರ್ಕದಲ್ಲಿದ್ದೇವೆ. ಟೆಸ್ಟ್ ಮಾಡಿಸದವರಿಗೂ ಉಸಿರಾಟದ ತೊಂದರೆ ಆಗುತ್ತದೆ. ಐಎಲ್​ಐ, ಅಥವಾ ಸಾರಿ ಕೇಸ್ ಬಂದಾಗ 108ಗೆ ಫೋನ್ ಮಾಡಿದಾಗ, ಆ ವ್ಯಕ್ತಿಗಳನ್ನು ಆಸ್ಪತ್ರೆಗೆ ಕರೆದೊಯ್ಯಲಾಗುತ್ತದೆ.

ಡಿಸ್ಟ್ರೆಸ್ ಕಾಲ್ ಅಂದರೆ, ತುರ್ತುಪರಿಸ್ಥಿತಿಯಲ್ಲಿ ತಕ್ಷಣ ಆಸ್ಪತ್ರೆ ಬೇಕೆಂದಾಗ 108ಗೆ ಕಾಲ್ ಮಾಡಬಹುದು. ಮೂರನೇದಾಗಿ, ಇಂಟರ್ ಫೆಸಿಲಿಟಿ ಟ್ರಾನ್ಸ್ ಫರ್, ಜನರಲ್ ವಾರ್ಡ್ ನಿಂದ ಐಸಿಯುಗೆ ಕರೆದೊಯ್ಯುವ ಕೆಲಸ, ಅಧಿಕಾರ ಕೂಡಾ 108ಗೆ ಕೊಡಲಾಗಿದೆ ಎಂದರು.

ಕೊರೊನಾ ಸೋಂಕು ಪರೀಕ್ಷೆ ಮಾಡಿದ ನಂತರ ಕೊರೊನಾ ಪಾಸಿಟಿವ್ ದೃಢಪಟ್ಟ ಮೇಲೆ, ಆಸ್ಪತ್ರೆಗೆ ಸೇರಿಸುವ ಕೆಲಸವನ್ನು ಬಿಬಿಎಂಪಿ ಮಾಡುತ್ತದೆ. 108 ಆ್ಯಂಬುಲೆನ್ಸ್ ಹಾಗೂ ಬಿಬಿಎಂಪಿ ಜವಾಬ್ದಾರಿಯನ್ನು ಸ್ಪಷ್ಟವಾಗಿ ವಿವರಿಸಲಾಗಿದೆ ಎಂದರು.

ABOUT THE AUTHOR

...view details