ಬೆಂಗಳೂರು: ನಗರದಲ್ಲಿಂದು 886 ಕೊರೊನಾ ಕೇಸ್ಗಳು ದಾಖಲಾಗಿದ್ದು, ಸೋಂಕಿತರ ಸಂಖ್ಯೆ ಕೊಂಚ ಇಳಿಮುಖವಾಗಿದೆ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಮಾಹಿತಿ ನೀಡಿದ್ದಾರೆ.
ಬೆಂಗಳೂರಲ್ಲಿ ಕೋವಿಡ್ ಪ್ರಕರಣ ಇಳಿಮುಖ: ಮಂಜುನಾಥ್ ಪ್ರಸಾದ್ - ಬೆಂಗಳೂರಿನಲ್ಲಿ ಕೋವಿಡ್ ಪ್ರಕರಣ ಇಳಿಮುಖ
ಬೆಂಗಳೂರಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತಿದೆ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಅವರು ಉದ್ಯಾನಗರಿಯ ಜನರಿಗೆ ಸಿಹಿ ಸುದ್ದಿ ನೀಡಿದ್ದಾರೆ. ಅಲ್ಲದೆ, ಕೊರೊನಾ ಕೇಸ್ ನಿಯಂತ್ರಿಸಲು ಬಸ್, ಟ್ರೈನ್, ವಿಮಾನಗಳ ಮೂಲಕ ಪ್ರಯಾಣಿಕರ ಮೇಲೆ ಕಣ್ಣಿಡಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಗರದಲ್ಲಿಂದು 886 ಕೋವಿಡ್ ಪ್ರಕರಣಗಳು ದೃಢಪಟ್ಟು ನಾಲ್ಕು ಮಂದಿ ಮೃತಪಟ್ಟಿದ್ದಾರೆ. ಕಳೆದ 3 ದಿನಗಳ ಹಿಂದೆ ಬೆಂಗಳೂರಲ್ಲಿ 1030 ಕೇಸ್ ದಾಖಲಾಗಿದ್ದವು. ಕೊರೊನಾ ಪ್ರಕರಣ ಕುರಿತಂತೆ ಸಿಎಂ ಜತೆ ಸಭೆ ನಡೆಸಲಾಗಿದ್ದು, ಗಡಿಭಾಗಗಳ ಜಿಲ್ಲಾಧಿಕಾರಿಗಳಿಗೆ ಕ್ರಮ ವಹಿಸುವಂತೆ ಅವರು ಸೂಚಿಸಿದ್ದಾರೆ. ಬಸ್, ಟ್ರೈನ್, ವಿಮಾನಗಳ ಮೂಲಕ ಬರುವ ಪ್ರಯಾಣಿಕರ ಮೇಲೆ ಕಣ್ಣಿಡಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಭಾನುವಾರ ನಗರದಲ್ಲಿ 50 ಸಾವಿರ ಕೋವಿಡ್ ಟೆಸ್ಟ್ ಮಾಡಲಾಗಿದೆ.
ಹೆಚ್ಎಎಲ್, ಹಜ್ ಭವನದಲ್ಲಿ ಕೋವಿಡ್ ಕೇರ್ ಸೆಂಟರ್ ತಯಾರಿವೆ. ಆದರೆ ಜನ ಉತ್ಸಾಹ ತೋರುತ್ತಿಲ್ಲ. ಮನೆಯಲ್ಲಿ ಹೋಂ ಐಸೊಲೇಷನ್ ಆಗುತ್ತಿದ್ದಾರೆ. ರಾಜ್ಯ ಸರ್ಕಾರದ ಆದೇಶದ ಪ್ರಕಾರ ಪ್ರತಿಭಟನೆ, ಱಲಿ, ಸಮಾವೇಶ ನಡೆಯಬೇಕು. ಜಿಮ್, ಪಾರ್ಕ್, ಚಿತ್ರಮಂದಿರಗಳಿಗೆ ನಿರ್ಬಂಧದ ಕುರಿತಂತೆ ಬಿಬಿಎಂಪಿ ಪ್ರಸ್ತಾವನೆಗಳಿಗೆ ಸಿಎಂ ಜತೆ ಚರ್ಚೆ ನಡೆದಿದೆ ಎಂದು ಆಯುಕ್ತರು ಮಾಹಿತಿ ನೀಡಿದರು.