ಕರ್ನಾಟಕ

karnataka

ETV Bharat / state

ನಗರದಲ್ಲಿ ಸಾಮೂಹಿಕ ಗಣೇಶ ಹಬ್ಬ ಆಚರಣೆ ಮಾಡುವಂತಿಲ್ಲ: ಬಿಬಿಎಂಪಿ - Ganesh festival in mass

ಗಣೇಶ ಚತುರ್ಥಿಗೆ ದಿನಗಣನೆ ಆರಂಭವಾಗಿದೆ. ಕೊರೊನಾ ಹಿನ್ನೆಲೆಯಲ್ಲಿ ಈ ಬಾರಿ ಬೆಂಗಳೂರಿನಲ್ಲಿ ಸಾಮೂಹಿಕ ಗಣೇಶ ಹಬ್ಬ ಆಚರಣೆಗೆ ಬಿಬಿಎಂಪಿ ಕಡಿವಾಣ​ ಹಾಕಿದೆ.

Ganesh festival in mass
ಸಾಮೂಹಿಕ ಗಣೇಶ ಹಬ್ಬ ಆಚರಣೆ ಮಾಡುವಂತಿಲ್ಲ

By

Published : Aug 11, 2020, 7:47 PM IST

ಬೆಂಗಳೂರು: ಕೊರೊನಾ ನಡುವೆ ಸಾಮೂಹಿಕವಾಗಿ ಗಣೇಶ ಹಬ್ಬ ಆಚರಿಸಬೇಕೇ?, ಬೇಡವೇ? ಎಂಬ ಗೊಂದಲ ಬೆಂಗಳೂರಿಗರಲ್ಲಿ ಶುರುವಾಗಿದೆ. ಈ ಮಧ್ಯೆ ಸಾರ್ವಜನಿಕವಾಗಿ ಸೇರಿ ಗಣೇಶ ಹಬ್ಬವನ್ನು ಆಚರಿಸುವುದನ್ನು ಬೃಹತ್‌ ಬೆಂಗಳೂರು ನಗರ ಪಾಲಿಕೆ ನಿರ್ಬಂಧಿಸಿದೆ.

ಕೊರೊನಾ ಹಿನ್ನೆಲೆಯಲ್ಲಿ ಈ ಬಾರಿ ಸಾಮೂಹಿಕ ಗಣೇಶ ಹಬ್ಬ ಆಚರಣೆ ಮಾಡುವಂತಿಲ್ಲ- ಬಿಬಿಎಂಪಿ

ಬಿಬಿಎಂಪಿ ಕಮಿಷನರ್ ಮಂಜುನಾಥ್ ಪ್ರಸಾದ್, ನಗರದಲ್ಲಿ ಈ ಸಲ ಸಾಮೂಹಿಕ ಗಣೇಶ ಹಬ್ಬ ಆಚರಣೆ ಇಲ್ಲ. ಅಲ್ಲದೇ ಈ ನಿರ್ಣಯದಲ್ಲಿ ಯಾವುದೇ ಬದಲಾವಣೆಯೂ ಇರುವುದಿಲ್ಲ. ಗಣೇಶ ಮೂರ್ತಿ ತಯಾರಿಸುವವರು ಈ ವರ್ಷ ಮಾರಾಟವಾಗದಿರುವ ಮೂರ್ತಿಗಳನ್ನು ಮುಂದಿನ ವರ್ಷ ಮಾರಾಟ ಮಾಡಬಹುದು ಎಂದು ಹೇಳಿದ್ದಾರೆ.

ಮಾರಾಟಕ್ಕಿಟ್ಟಿರುವ ಗಣೇಶನ ಮೂರ್ತಿಗಳು

ನಗರದಲ್ಲಿ ಗಣೇಶ ಮೂರ್ತಿ ವಿಸರ್ಜನೆಗೆ ಅವಕಾಶ ಮಾಡಿಕೊಡಲಾಗುತ್ತಿದ್ದ ಕೆರೆಗಳು ಮತ್ತು ಪುಷ್ಕರಣಿಗಳನ್ನು ಮುಚ್ಚಲಾಗಿದೆ.

ABOUT THE AUTHOR

...view details