ಬೆಂಗಳೂರು :ರಾಜಧಾನಿ ಬೆಂಗಳೂರಿನಲ್ಲಿ ರಸ್ತೆ ಗುಂಡಿಯದ್ದೇ ದೊಡ್ಡ ಸಮಸ್ಯೆಯಾಗಿದೆ. ಸರಿಯಾದ ರಸ್ತೆಯಿಲ್ಲದೇ ಬಹಳ ಸಲ ಅಪಘಾತ ಸಂಭವಿಸಿ ಮುಗ್ಧ ಜೀವಗಳ ಪ್ರಾಣ ಪಕ್ಷಿ ಹಾರಿ ಹೋಗಿವೆ.
ಇತ್ತ ರಸ್ತೆಗುಂಡಿ ಸಂಬಂಧ ಹೈಕೋರ್ಟ್ ಸಾಕಷ್ಟು ಬಾರಿ ಬಿಬಿಂಎಪಿಗೆ ಛೀಮಾರಿಯನ್ನೂ ಹಾಕಿದೆ. ನಿನ್ನೆಯೂ ಕೂಡ ರಸ್ತೆ ಗುಂಡಿ ವಿಚಾರವಾಗಿ ಹೈಕೋರ್ಟ್‌ನಲ್ಲಿ ವಿಚಾರಣೆ ನಡೆದಿದೆ.
ರಸ್ತೆಗಳಲ್ಲಿ ಗುಂಡಿ ತೋಡುವುದರ ಕುರಿತಂತೆ ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ ಎಚ್ಚರಿಕೆ ನೀಡಿರುವುದು.. ಈ ಕುರಿತು ಪ್ರತಿಕ್ರಿಯಿಸಿರುವ ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ, ರಸ್ತೆ ಗುಂಡಿ ವಿಚಾರವಾಗಿ ನಿನ್ನೆಯೇ ಹೈಕೋರ್ಟ್‌ಗೆ ಎಲ್ಲ ಅಂಕಿ-ಅಂಶಗಳನ್ನ ಅಫಿಡೆವಿಟ್ ನೀಡಲಾಗಿದೆ. ಸದ್ಯಕ್ಕೆ ಅಂಕಿ-ಅಂಶವನ್ನ ನಾನು ಹೇಳಲು ಆಗಲ್ಲ. ಸರ್ಕಾರ ಹಾಗೂ ಕೋರ್ಟ್ ನೀಡಿದ ನಿರ್ದೇಶನದಂತೆ ಪಾಲಿಕೆ ಕೆಲಸ ಮಾಡಲಿದೆ. ಇವತ್ತಿನ ಸಭೆಯಲ್ಲೂ ಗುಂಡಿ ವಿಚಾರವಾಗಿ ಇಂಜಿನಿಯರ್ಗಳಿಗೆ ಸೂಚನೆ ನೀಡಲಾಗಿದೆ ಎಂದರು.
ಬೆಂಗಳೂರು ರಸ್ತೆ ಗುಂಡಿಯನ್ನ ಮುಚ್ಚಲು ಡೆಡ್‌ಲೈನ್ ಯಾವಾಗ ಕೊಡ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಆಯುಕ್ತರು, ಈಗಾಗಲೇ ಹೈಕೋರ್ಟ್ ನಿರ್ದೇಶನವನ್ನ ನೀಡಿದೆ. ಅದರ ಪ್ರಕಾರ ಸಮಯ ಬದ್ಧವಾಗಿ ಗುಂಡಿಯನ್ನ ಮುಚ್ಚುವ ಕೆಲಸ ಮಾಡಲಾಗುತ್ತೆ. ಈಗಾಗಲೇ ಎಲ್ಲ ವಲಯಗಳ ಇಂಜಿನಿಯರ್ಗಳಿಗೂ ನಿರ್ದೇಶನವನ್ನ ಕೊಡಲಾಗಿದೆ.
ಕೆಲವು ಕಡೆ bwssb ನಗರದ ಹೊರವಲಯದಲ್ಲಿ ಪೈಪ್ ಲೈನ್ಸ್ ಹಾಕುತ್ತಿದೆ. ಕೆಲವು ಕಾಮಗಾರಿ ಪೂರ್ಣಗೊಂಡಿದ್ದರೆ, ಹಲವೆಡೆ ಇನ್ನು ಬಾಕಿ ಇದೆ. ಅದನ್ನ ಕೂಡಲೇ ಅವರಿಂದ ಹಿಂಪಡೆದು ಅದನ್ನ ದುರಸ್ತಿ ಮಾಡುವ ಕೆಲಸ ಮಾಡಬೇಕು. ಎಲ್ಲೆಲ್ಲಿ ಅವರು ಸಮಯ ಕಳೆದರು ಮುಕ್ತಾಯ ಮಾಡಲಿಲ್ಲ ಅಂದ್ರೆ ನೋಟಿಸ್ ಜಾರಿ ಮಾಡಲಾಗುತ್ತೆ. ಹಾಗೆ ಅಕ್ರಮವಾಗಿ ಯಾರೇ ರಸ್ತೆ ಕಡಿತ ಮಾಡಿದ್ರೂ ಅವ್ರ ಮೇಲೆ ಎಫ್ಐಆರ್ ದಾಖಲು ಮಾಡುವ ಕೆಲಸ ಮಾಡಲಾಗುತ್ತೆ ಎಂದರು.
ಕೆರೆಗಳ ಜಾಗದಲ್ಲಿ ಉದ್ಯಾನವನ ನಿರ್ಮಾಣ ಇಲ್ಲ :ನಗರಗಳಲ್ಲಿ ಕೆರೆಗಳ ಅಭಿವೃದ್ದಿಯನ್ನ ಬಹಳ ವರ್ಷಗಳಿಂದ ಮಾಡಿಕೊಂಡು ಬರಲಾಗುತ್ತಿದೆ. ಕೆರೆ ಜಾಗದಲ್ಲಿ ಇನ್ ಲೇಟ್ ನೀರು ಬರುವುದು, ಹೊರಗೆ ಹೋಗುವುದು ಒಳಚರಂಡಿ ನೀರು ಸೇರದ ರೀತಿಯಲ್ಲಿ ನೋಡಿಕೊಳ್ಳಲಾಗುತ್ತಿದೆ. ಕೆಲ ಕೆರೆಗಳು ತನ್ನ ಅಸ್ತಿತ್ವವನ್ನೇ ಕಳೆದುಕೊಂಡಿದ್ದು, ಕೆಲವೆಡೆ ನೀರು ಶೇಖರಣೆ ಆಗುತ್ತಿಲ್ಲ. ಇಂತಹ ಸಂದರ್ಭದಲ್ಲಿ ಅತಿಕ್ರಮಣವೂ ಆಗುತ್ತಿದೆ. ಹೀಗಾಗಿ, ಕೆರೆಗಳನ್ನ ಸರ್ವೇ ನಡೆಸಿ ಗಡಿ ಗುರುತುಗಳನ್ನ ಹಾಕಿ ವ್ಯವಸ್ಥಿತವಾಗಿ ಅಭಿವೃದ್ಧಿಪಡಿಸಲು ಕ್ರಮ ಕೈಗೊಳುತ್ತೇವೆ. ಕೆರೆ ಜಾಗವನ್ನ ಪಾರ್ಕ್ ಆಗಿ ಬದಲಾವಣೆ ಮಾಡೋಲ್ಲ. ಇಂತಹ ಯಾವುದೇ ಯೋಜನೆಯು ಬಿಬಿಎಂಪಿಯಲ್ಲಿ ಇಲ್ಲ ಅಂತಾ ತಿಳಿಸಿದ್ದರು.
ಗೂಡ್‌ಶೆಡ್ ರೋಡ್ ರಸ್ತೆ ಕಾಮಗಾರಿ :ಗೂಡ್ ಶೆಡ್ ರೋಡ್ ರಸ್ತೆ ಕಾಮಗಾರಿ ಇನ್ನು ಮೂರು ತಿಂಗಳು ತಡವಾಗಲಿದ್ಯಾ ಎಂಬುದಕ್ಕೆ ಉತ್ತರಿಸಿದ ಅವರು, ಗೂಡ್ ಶೆಡ್ ರೋಡ್ ವೈಟ್ ಟ್ಯಾಪಿಂಗ್ ನಡೆಯುತ್ತಿದ್ದು, ಅದಷ್ಟು ಬೇಗ ನಡೆಸಲು ಸೂಚನೆ ನೀಡಲಾಗಿದೆ. ಇಂಜಿನಿಯರ್ಗಳಿಗೆ ಬೇಗನೆ ಮುಕ್ತಾಯ ಮಾಡುವಂತೆ ತಿಳಿಸಲಾಗಿದೆ ಎಂದರು.