ಬೆಂಗಳೂರು:ಶಿವಾಜಿನಗರದ ರಿಜೆಂಟಾ ಹೋಟೆಲ್ನ ಪರಿಚಾರಕರಿಂದ ಕ್ವಾರಂಟೈನ್ನಲ್ಲಿದ್ದ 29 ಜನರಿಗೆ ಕೊರೊನಾ ಹರಡಿದೆ. ಆದರೆ, ಇದರ ಬಗ್ಗೆ ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ ಎಂದು ಬಿಬಿಎಂಪಿ ಆಯುಕ್ತ ಬಿ.ಹೆಚ್.ಅನಿಲ್ ಕುಮಾರ್ ತಿಳಿಸಿದ್ದಾರೆ.
ಶಿವಾಜಿನಗರ ಹೋಟೆಲ್ನಲ್ಲಿ ಕ್ವಾರಂಟೈನ್ ಆಗಿದ್ದ 29 ಮಂದಿಗೆ ಪರಿಚಾರಕನಿಂದ ಸೋಂಕು: ಬಿಬಿಎಂಪಿ ಸ್ಪಷ್ಟನೆ
ಸೋಂಕಿತ ಸಿಬ್ಬಂದಿಯೊಂದಿಗೆ ಪ್ರಾಥಮಿಕ ಸಂಪರ್ಕದಲ್ಲಿದ್ದ 14 ಮತ್ತು ದ್ವೀತಿಯ ಸಂಪರ್ಕದಲ್ಲಿದ್ದವರನ್ನು ಹಂತ ಹಂತವಾಗಿ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ನಿನ್ನೆ ಪರೀಕ್ಷೆಗೆ ಒಳಾಗಾದ 14 ಜನರಿಗೆ ಕೊರೊನಾ ಪಾಸಿಟಿವ್ ಬಂದಿದ್ದು,ಒಟ್ಟು 29 ಜನರಿಗೆ ಸೋಂಕು ತಗುಲಿದೆ.
ಶಿವಾಜಿನಗರದಲ್ಲಿ ಸಾರ್ವಜನಿಕವಾಗಿ ಕೊರೊನಾ ಹರಡಿಲ್ಲ..ಬಿಬಿಎಂಪಿ ಆಯುಕ್ತರ ಸ್ಪಷ್ಟನೆ
ಸೋಂಕಿತ ಸಿಬ್ಬಂದಿಯೊಂದಿಗೆ ಪ್ರಾಥಮಿಕ ಸಂಪರ್ಕದಲ್ಲಿದ್ದ 14 ಮತ್ತು ದ್ವೀತಿಯ ಸಂಪರ್ಕದಲ್ಲಿದ್ದವರನ್ನು ಹಂತ ಹಂತವಾಗಿ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ನಿನ್ನೆ ಪರೀಕ್ಷೆಗೆ ಒಳಾಗಾದ 14 ಜನರಿಗೆ ಕೊರೊನಾ ಪಾಸಿಟಿವ್ ಬಂದಿದ್ದು,ಒಟ್ಟು 29 ಜನರಿಗೆ ಸೋಂಕು ತಗುಲಿದೆ.
ಇವರೆಲ್ಲರೂ ಕ್ವಾರಂಟೈನ್ನಲ್ಲಿದ್ದವರು, ಹೀಗಾಗಿ ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ. ಸಾರ್ವಜನಿಕವಾಗಿ ಕೊರೊನಾ ಹರಡಿಲ್ಲ ಎಂದು ಸ್ಪಷ್ಟಪಡಿಸಿದರು.