ಬೆಂಗಳೂರು:ಕೊರೊನಾ ವೈರಸ್ ಹರಡುವ ಭೀತಿ ಹೆಚ್ಚಾಗುತ್ತಿದ್ದಂತೆ, ಕಿಡಿಗೇಡಿಗಳು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಯ ಹರಡುವಿಕೆಯೂ ಹೆಚ್ಚಾಗುತ್ತಿದೆ.
ವದಂತಿಗಳಿಂದ ದೂರವಿರುವುದು ಉತ್ತಮ: ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ಸಲಹೆ.. - BBMP Commissioner BH Anil Kumar
ಬೆಂಗಳೂರಲ್ಲಿ ಗಾಳಿಯಲ್ಲಿ ಕೊರೊನಾ ಮೆಡಿಸಿನ್ ಸ್ಪ್ರೇ ಮಾಡಲಾಗುತ್ತಿದೆ ಎಂಬುದು ಸುಳ್ಳು ಸುದ್ದಿ ಎಂದು ಬಿಬಿಎಂಪಿ ಕಮಿಷನರ್ ಹೇಳಿದ್ದು, ವದಂತಿಗಳಿಗೆ ಕಿವಿಗೊಡದಂತೆ ಮನವಿ ಮಾಡಿದ್ದಾರೆ.
ಬಿಬಿಎಂಪಿ ಆಯುಕ್ತ ಬಿ.ಹೆಚ್.ಅನಿಲ್ ಕುಮಾರ್
ಈ ಕುರಿತು ಬಿಬಿಎಂಪಿ ಆಯುಕ್ತ ಬಿ.ಹೆಚ್.ಅನಿಲ್ ಕುಮಾರ್ ಟ್ವೀಟ್ ಮಾಡಿದ್ದು, ಆತ್ಮೀಯ ನಾಗರಿಕರೇ, ವಾಟ್ಸ್ಆ್ಯಪ್ ಮತ್ತು ಇತರ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿನ ವದಂತಿಗಳಿಗೆ ಬಲಿಯಾಗಬೇಡಿ. ಕೋವಿಡ್ -19ಗಾಗಿ ಯಾವುದೇ ಔಷಧವನ್ನು ಸಿಂಪಡಿಸುವ ಯೋಜನೆಯನ್ನು ಬಿಬಿಎಂಪಿ ಹೊಂದಿಲ್ಲ. ವದಂತಿಗಳಿಂದ ದೂರವಿರುವುದು ಉತ್ತಮ ಎಂದಿದ್ದಾರೆ
ಇನ್ನು ಕೆಆರ್ ಮಾರುಕಟ್ಟೆ ಮತ್ತು ಸುತ್ತಮುತ್ತಲಿನ ಪ್ರದೇಶಗಳನ್ನು ಸ್ವಚ್ಚಗೊಳಿಸಲಾಗಿದ್ದು, ಬಿಬಿಎಂಪಿ ಅಧಿಕಾರಿಗಳು ಮಾರುಕಟ್ಟೆ ಪರಿಶೀಲನೆ ನಡೆಸಿದ್ದಾರೆ.