ಕರ್ನಾಟಕ

karnataka

ETV Bharat / state

ಬೆಂಗಳೂರಲ್ಲಿ ಭಾರೀ ಮಳೆಗೆ ಹಲವೆಡೆ ಹಾನಿ: ಬಿಬಿಎಂಪಿ ಆಯುಕ್ತರಿಂದ ಪರಿಶೀಲನೆ - ಬೆಂಗಳೂರಲ್ಲಿ ಮಳೆ

ಕಳೆದ ಮೂರು ದಿನಗಳಿಂದ ಬೆಂಗಳೂರಿನಲ್ಲಿ ಮಳೆಯಾಗುತ್ತಿದೆ. ನಿನ್ನೆ ಮಳೆಯಿಂದ ಕೆಲ ಭಾಗಗಳಲ್ಲಿ ಹಾನಿ ಸಂಭವಿಸಿತ್ತು. ಈ ಸ್ಥಳಗಳಿಗೆ ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ಹಾಗೂ ವಿಶೇಷ ಆಯುಕ್ತ ಜಿ.ಮಂಜುನಾಥ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

BBMP Commissioner Anil Kumar visit and inquired city
ಮಳೆಯಿಂದ ಹಾನಿ ಸಂಭವಿಸಿದ ಸ್ಥಳ ಪರಿಶೀಲನೆ ನಡೆಸಿದ ಬಿಬಿಎಂಪಿ ಆಯುಕ್ತ ತಂಡ

By

Published : May 30, 2020, 10:19 AM IST

ಬೆಂಗಳೂರು:ನಿನ್ನೆ ರಾಜಧಾನಿಯಲ್ಲಿ ಧಾರಾಕಾರ ಮಳೆಯಾಗಿದ್ದು, ಮಳೆ ಗಾಳಿಯಿಂದ ನಗರದಲ್ಲಿ ಸಾಕಷ್ಟು ಹಾನಿ ಸಂಭವಿಸಿದೆ. ಈ ಸ್ಥಳಗಳಿಗೆ ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ಹಾಗೂ ವಿಶೇಷ ಆಯುಕ್ತ ಜಿ.ಮಂಜುನಾಥ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮಳೆಯಿಂದ ಹಾನಿ: ಸ್ಥಳ ಪರಿಶೀಲನೆ ನಡೆಸಿದ ಬಿಬಿಎಂಪಿ ಆಯುಕ್ತರು

ನಗರದಲ್ಲಿ ಮಳೆಯಿಂದ ಕೆಲವು ಕಡೆ ಮರಗಳು ಧರೆಗುರುಳಿದ್ದು, ಸಾಕಷ್ಟು ಹಾನಿ ಸಂಭವಿಸಿದೆ. ಈ ಕುರಿತಂತೆ ಪರಿಶೀಲನೆಗೆ ಮುಂದಾದ ಆಯುಕ್ತರ ತಂಡ, ಲಿ ಮೇರೇಡಿಯನ್ ಜಂಕ್ಷನ್, ವಿಂಡ್ಸರ್ ಮ್ಯಾನರ್ ಜಂಕ್ಷನ್, ಕಾವೇರಿ ಜಂಕ್ಷನ್, ಶೇಷಾದ್ರಿಪುರಂ, ಒಕಳಿಪುರಂ, ಡಾ. ರಾಜ್ ಕುಮಾರ್ ರಸ್ತೆ, ಸುಬ್ರಹ್ಮಣ್ಯನಗರ ಹಾಗೂ ಇನ್ನಿತರ ಸ್ಥಳಗಳಲ್ಲಿ ಪರಿಶೀಲಿಸಿ ಸಿಬ್ಬಂದಿಯಿಂದ ಕಾರ್ಯಾಚರಣೆ ಮಾಡಿಸಿದರು.

ಮಳೆ ಹಾನಿ ಸ್ಥಳ ಪರಿಶೀಲನೆ ನಡೆಸಿದ ಆಯುಕ್ತರು

ಎಲ್ಲೆಲ್ಲಿ, ಎಷ್ಟೆಷ್ಟು ಮಳೆಯಾಗಿದೆ:

  • ಪೂರ್ವ ವಿಭಾಗ-0.51ರಿಂದ 31.50 ಮಿ.ಮೀ.
  • ದಕ್ಷಿಣದಲ್ಲಿ- 5 ರಿಂದ 25.50 ಮಿ.ಮೀ.
  • ಆರ್​​ಆರ್ ನಗರ- 4.50 ರಿಂದ 67 ಮಿ.ಮೀ.
  • ಯಲಹಂಕ-33.50 ರಿಂದ 71.50 ಮಿ.ಮೀ
  • ದಾಸರಹಳ್ಳಿ- 35 ರಿಂದ 53 ಮಿ.ಮೀ.
  • ಮಹದೇವಪುರ- 2 ರಿಂದ 27 ಮಿ.ಮೀ.
  • ಬೊಮ್ಮನಹಳ್ಳಿ- 3.50 ರಿಂದ 26.50 ಮಿ.ಮೀ.
  • ಪಶ್ಚಿಮ ವಿಭಾಗ- 20.50 ರಿಂದ 55.50 ಮಿ.ಮೀ. ಮಳೆಯಾಗಿದೆ.
    ಮಳೆ ಹಾನಿ ಸ್ಥಳ ಪರಿಶೀಲನೆ ನಡೆಸಿದ ಆಯುಕ್ತರು

ಅಲ್ಲದೆ ಹೆಗಡೆನಗರ, ರಾಜಾಜಿನಗರ, ಮಾಗಡಿ ರಸ್ತೆ, ಚಾಮರಾಜಪೇಟೆ, ಜಯಮಹಲ್, ಸಂಜಯನಗರ, ವಿದ್ಯಾರಣ್ಯಪುರದಲ್ಲೂ ಮರಗಳು ಬಿದ್ದಿರುವ ಕುರಿತ ಮಾಹಿತಿ ಲಭ್ಯವಾಗಿದೆ.

ABOUT THE AUTHOR

...view details