ಬೆಂಗಳೂರು:ಬಿಬಿಎಂಪಿ ವ್ಯಾಪ್ತಿಯ ಸ್ವಯಂಘೋಷಿತ ಆಸ್ತಿ ತೆರಿಗೆ ವ್ಯವಸ್ಥೆ (ಎಸ್ಎಎಸ್)ಯು 2008ರಿಂದ ಜಾರಿಗೆ ಬಂದರು ಕೂಡ ಇದರ ಪರಿಶೀಲನೆ ಮಾಡುವಲ್ಲಿ ಅಧಿಕಾರಿಗಳು ಉದಾಸೀನ ಧೋರಣೆ ತೋರಿದ್ದರು ಎಂದು ಬಿಬಿಎಂಪಿ ಆಯುಕ್ತ ಬಿ. ಹೆಚ್. ಅನಿಲ್ ಕುಮಾರ್ ತಿಳಿಸಿದರು.
ಆಸ್ತಿ ತೆರಿಗೆ ಪರಿಶೀಲನೆಗೆ ಅಧಿಕಾರಿಗಳಿಂದ ಉದಾಸೀನ ಧೋರಣೆ: ಬಿಬಿಎಂಪಿ ಆಯುಕ್ತ - ಬೆಂಗಳೂರಿನಲ್ಲಿ ಮಾತನಾಡಿದ ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್
ಬಿಬಿಎಂಪಿ ವ್ಯಾಪ್ತಿಯ ಸ್ವಯಂ ಘೋಷಿತ ಆಸ್ತಿ ತೆರಿಗೆ ವ್ಯವಸ್ಥೆ (ಎಸ್ಎಎಸ್) 2008ರಿಂದ ಜಾರಿಗೆ ಬಂದರೂ ಕೂಡ ಇದರ ಪರಿಶೀಲನೆ ಮಾಡುವಲ್ಲಿ ಅಧಿಕಾರಿಗಳು ಉದಾಸೀನ ಧೋರಣೆ ತೋರಿದ್ದರು ಎಂದು ಬಿಬಿಎಂಪಿ ಆಯುಕ್ತ ಬಿ. ಹೆಚ್. ಅನಿಲ್ ಕುಮಾರ್ ತಿಳಿಸಿದರು.
ಕೌನ್ಸಿಲ್ ಸಭೆಯಲ್ಲಿ ಮಾತನಾಡಿದ ಅವರು, ನಗರ ಬೆಳೆಯುತ್ತಿದ್ದರೂ ಕೂಡ ಆದಾಯ ಮಾತ್ರ ಬಿಬಿಎಂಪಿ ಆದಾಯ ವೃದ್ಧಿಸುತ್ತಿಲ್ಲ. ಎಸ್ಎಎಸ್ನ್ನು ಪರಿಣಾಮಕಾರಿಯಾಗಿ ಜಾರಿ ಮಾಡುತ್ತೇವೆ. ನಿಯಮಗಳನ್ನು ಬಿಗಿಗೊಳಿಸುತ್ತೇವೆಂದು ತಿಳಿಸಿದರು.
2008ರಲ್ಲಿ ಎಸ್ಎಎಸ್ ಬಂದ ಬಳಿಕ ಬದಲಾವಣೆ ಮಾಡಬೇಕಿತ್ತು, ಆದರೆ ಅದು ಆಗಿಲ್ಲ. ಎಸ್ಎಎಸ್ನಲ್ಲಿ ಪುನರ್ ಪರಿಶೀಲಿಸುವ ಅವಕಾಶ ಇದ್ರೂ, ಪಾಲಿಕೆಯಿಂದ ಅದು ನಡೆಸದೇ ಇರೋದು ತಪ್ಪಾಗಿದೆ. ಟೋಟಲ್ ಸ್ಟೇಷನ್ ಸರ್ವೆಯಲ್ಲಿ 800ಕೋಟಿ ರೂ. ಹೆಚ್ಚುವರಿ ಆದಾಯದ ನಿರೀಕ್ಷೆಯಿತ್ತು, ಆದರೆ ವ್ಯವಸ್ಥೆಯ ಲೋಪದಿಂದ ಅಷ್ಟು ಆದಾಯ ಸಂಗ್ರಹವಾಗಿಲ್ಲ. ಇನ್ನು ಎಸ್ಎಎಸ್ನ್ನು ಬಿಗಿ ಮಾಡಿ ವಾಣಿಜ್ಯ ಹಾಗೂ ವಸತಿ ಕಟ್ಟಡಗಳ, ಆಸ್ತಿ ತೆರಿಗೆ ಪಾವತಿದಾರರ ಮೇಲೆ ಕಣ್ಣಿಡಲಾಗುವುದು ಎಂದು ತಿಳಿಸಿದರು.