ಬೆಂಗಳೂರು:ಈದ್ಗಾ ಮೈದಾನದ ಒಡೆತನದ ಬಗ್ಗೆ ಎದ್ದಿದ್ದ ಗೊಂದಲಕ್ಕೆ ಅಂತ್ಯ ಕಾಣಿಸುವ ಉದ್ದೇಶದಿಂದ ಬಿಬಿಎಂಪಿ ವಕ್ಫ್ ಬೋರ್ಡ್‌ಗೆ ನೋಟಿಸ್ ಜಾರಿ ಮಾಡಿದೆ. ಅಲ್ಲದೇ ದಾಖಲೆಗಳನ್ನು ಒದಗಿಸಲು ಸೂಚಿಸಿದೆ ಎಂದು ಬಿಬಿಎಂಪಿ ವಿಶೇಷ ಆಯುಕ್ತ ರಾಮಪ್ರಸಾದ್ ಮನೋಹರ್ ತಿಳಿಸಿದ್ದಾರೆ.
ಈದ್ಗಾ ಮೈದಾನದ ಗೊಂದಲದ ಅಂತ್ಯ ಹಾಡಲು ಮುಂದಾದ ಪಾಲಿಕೆ: ವಕ್ಫ್ ಬೋರ್ಡ್‌ಗೆ ನೋಟಿಸ್ - ಬಿಬಿಎಂಪಿಯಿಂದ ವಕ್ಫ್ ಬೋರ್ಡ್‌ಗೆ ನೋಟಿಸ್
ಈದ್ಗಾ ಮೈದಾನಕ್ಕೆ ಸಂಬಂಧಿಸಿದಂತೆ ಮೈದಾನ ತಮ್ಮದು ಎಂಬುವುದಕ್ಕೆ ಸೂಕ್ತ ದಾಖಲೆ ನೀಡುವಂತೆ ಬಿಬಿಎಂಪಿ ವಕ್ಫ್ ಬೋರ್ಡ್‌ಗೆ ನೋಟಿಸ್ ನೀಡಿದೆ.
ವಕ್ಫ್ ಬೋರ್ಡ್‌ಗೆ ನೋಟಿಸ್
ಕೇಂದ್ರ ಕಚೇರಿಯಲ್ಲಿ ಮಾಧ್ಯಮದೊಂದಿಗೆ ಅವರು ಮಾತನಾಡಿ, "ಈದ್ಗಾ ಮೈದಾನಕ್ಕೆ ಸಂಬಂಧಿಸಿದಂತೆ ಮೈದಾನ ತಮ್ಮದು ಎಂಬುವುದಕ್ಕೆ ಸೂಕ್ತ ದಾಖಲೆ ನೀಡುವಂತೆ ನೋಟಿಸ್ ಜಾರಿ ಮಾಡಲಾಗಿದೆ. ನೋಟಿಸ್ ನೀಡಿ ಮೂರು ದಿನ ಕಾಲಾವಕಾಶ ನೀಡಲಾಗಿದೆ. ಇನ್ನೂ ಒಂದು ದಿನ ಕಾಲಾವಕಾಶ ಬಾಕಿ ಇದ್ದು, ಬಿಬಿಎಂಪಿ ಉತ್ತರದ ನಿರೀಕ್ಷೆಯಲ್ಲಿದೆ" ಎಂದು ಹೇಳಿದರು.
TAGGED:
Notice to Wakf Board by BBMP