ಕರ್ನಾಟಕ

karnataka

ETV Bharat / state

ಅಡಮಾನವಿಟ್ಟ ಪಾಲಿಕೆಯ ಆಸ್ತಿ ಋಣಮುಕ್ತಕ್ಕೆ ಬಿಬಿಎಂಪಿ ನಿರ್ಧಾರ

ಅಡಮಾನವಿಟ್ಟ ಐದು ಕಟ್ಟಡಗಳ ಪೈಕಿ ಕೆ.ಆರ್ ಮಾರುಕಟ್ಟೆಯ ಕಟ್ಟಡ ಹೊರತುಪಡಿಸಿ ಉಳಿದ ನಾಲ್ಕು ಕಟ್ಟಡಗಳನ್ನು ಋಣಮುಕ್ತಗೊಳಿಸಲು ಬಿಬಿಎಎಂಪಿ ತಯಾರಿ ನಡೆಸಿದೆ ಎಂದು ಮೇಯರ್ ಗಂಗಾಂಬಿಕೆ ಅವರು ಭರವಸೆ ನೀಡಿದ್ದಾರೆ.

ಮೇಯರ್ ಗಂಗಾಂಬಿಕೆ

By

Published : Aug 4, 2019, 4:11 AM IST

ಬೆಂಗಳೂರು :ಹಿಂದಿನ ಕೌನ್ಸಿಲ್ ಅವಧಿಯಲ್ಲಿ ಅಡಮಾನವಿಟ್ಟು ಸಾಲ ಪಡೆದಿದ್ದ ಪಾಲಿಕೆ ಆಸ್ತಿಗಳನ್ನು ಋಣಮುಕ್ತಗೊಳಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ನಿರ್ಧರಿಸಿದೆ.

ಬಿಬಿಎಂ​ಪಿ ಒಡೆತನದ 11 ಆಸ್ತಿಗಳ ಪೈಕಿ ಈಗಾಗಲೇ 6 ಆಸ್ತಿಗಳು ಋಣಮುಕ್ತವಾಗಿವೆ. ಅಡಮಾನವಿಟ್ಟ 5 ಆಸ್ತಿಗಳಲ್ಲಿ‌ 4 ಆಸ್ತಿಗಳನ್ನು ಋಣ ಮುಕ್ತಗೊಳಿಸಲು ಪಾಲಿಕೆ ತಯಾರಿ ನಡೆಸಿದೆ. ಪಿಯುಬಿ ಕಟ್ಟಡ, ಕೆ. ಆರ್. ಮಾರುಕಟ್ಟೆ, ಬಿಬಿಎಂಪಿಯ ಪಶ್ಚಿಮ ವಲಯ ಕಚೇರಿ, ದಾಸಪ್ಪ ಆಸ್ಪತ್ರೆ ಮತ್ತು ಕಲಾಸಿ ಪಾಳ್ಯ ಮಾರುಕಟ್ಟೆ ಕಟ್ಟಡಗಳನ್ನು ಬ್ಯಾಂಕ್​ಗಳಿಗೆ ಅಡಮಾನಕ್ಕೆ ಇಡಲಾಗಿದೆ.

ಇದರಲ್ಲಿನ ನಾಲ್ಕು ಕಟ್ಟಡಗಳನ್ನು 2016-17ರಲ್ಲಿ ಹುಡ್ಕೋ ಸಂಸ್ಥೆಯಿಂದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ (ಎಸ್​ಬಿಐ) 871 ಕೋಟಿ ರೂ.ಗೆ ಅಡಮಾನ ಮುಂದುವರೆಸಿ ಕಡಿಮೆ ಬಡ್ಡಿ ದರಕ್ಕೆ ವರ್ಗಾಹಿಸಲಾಗಿತ್ತು. ಇದೀಗ ಎಸ್​ಬಿಐಗೆ 871 ಕೋಟಿ ರೂ. ಸಂದಾಯ ಮಾಡಿ, ಅಡಮಾನವಿಟ್ಟ ಕಟ್ಟಡಗಳನ್ನು ಋಣಮುಕ್ತಗೊಳಿಸಲು ಬಿಬಿಎಂ​ಪಿ ಮುಂದಾಗಿದೆ.

'ಕೆ. ಆರ್. ಮಾರುಕಟ್ಟೆ ಕಟ್ಟಡ ಹೊರತುಪಡಿಸಿ ಪಿಯುಬಿ, ಬಿಬಿಎಂಪಿಯ ಪಶ್ಚಿಮ ವಲಯ ಕಚೇರಿ, ದಾಸಪ್ಪ ಆಸ್ಪತ್ರೆ ಮತ್ತು ಕಲಾಸಿ ಪಾಳ್ಯ ಮಾರುಕಟ್ಟೆಯ ಕಟ್ಟಡಗಳು ಋಣಮುಕ್ತಗೊಳ್ಳಲಿವೆ ಎಂದು ಮೇಯರ್ ಗಂಗಾಂಬಿಕೆ ಭರವಸೆ ನೀಡಿದ್ದಾರೆ.

ABOUT THE AUTHOR

...view details