ಬೆಂಗಳೂರು:2020ರ ಜನವರಿ ತಿಂಗಳಿನಿಂದ ಜುಲೈ ತಿಂಗಳ ವರೆಗೆ 35,307 ಜನ ಮೃತಪಟ್ಟಿದ್ದಾರೆ ಎಂದು ಬಿಬಿಎಂಪಿಯ ಸಾಂಖ್ಯಿಕ ವಿಭಾಗ ತಿಳಿಸಿದೆ.
ಮಾಜಿ ಸಚಿವ ಹೆಚ್.ಕೆ. ಪಾಟೀಲ್ ಇತ್ತೀಚೆಗೆ ಬಿಡುಗಡೆ ಮಾಡಿದ್ದ ಪತ್ರಿಕಾ ಹೇಳಿಕೆಯಲ್ಲಿ ಬೆಂಗಳೂರು ನಗರದಲ್ಲಿ ಜನವರಿಯಿಂದ - ಜುಲೈ ವರೆಗೆ 49,135 ಜನರ ಸಾವಿನ ಪ್ರಕರಣ ವರದಿಯಾಗಿದೆ ಎಂದು ಹೇಳಲಾಗಿತ್ತು. ಕಳೆದ ವರ್ಷ ಇದೇ ಅವಧಿಯಲ್ಲಿ 37,001 ಸಾವು ಸಂಭವಿಸಿದೆ. ಒಟ್ಟಿನಲ್ಲಿ ಈ ವರ್ಷ 12,134 ಸಾವು ಪ್ರಕರಣ ಹೆಚ್ಚಾಗಿದೆ ಎಂದು ಉಲ್ಲೇಖಿಸಿದ್ದರು.
ಇದಕ್ಕೆ ಸ್ಪಷ್ಟನೆ ನೀಡಿರುವ ಬಿಬಿಎಂಪಿ, ಕಳೆದ ವರ್ಷ ಜನವರಿಯಿಂದ - ಜುಲೈ ವರೆಗೆ 37,004, ಈ ವರ್ಷ ಇದೇ ಅವಧಿಯಲ್ಲಿ 35,307 ಸಾವಿನ ಪ್ರಕರಣ ವರದಿಯಾಗಿದೆ ಎಂದು ತಿಳಿಸಿದೆ. ಒಟ್ಟಿನಲ್ಲಿ ಶಾಸಕ ಹೆಚ್.ಕೆ. ಪಾಟೀಲ್ ನೀಡಿರುವ ಅಂಕಿ-ಅಂಶಗಳು ಯಾವ ಮೂಲಗಳಿಂದ ಸಿಕ್ಕಿವೆ ಎಂಬ ಮಾಹಿತಿ ಇಲ್ಲ.