ಕರ್ನಾಟಕ

karnataka

ETV Bharat / state

ರಸ್ತೆಯಲ್ಲಿ ಮಳೆ ನೀರು ನಿಲ್ಲದಂತೆ ಕ್ರಮವಹಿಸಿ: ಅಧಿಕಾರಿಗಳಿಗೆ BBMP ಮುಖ್ಯ ಆಯುಕ್ತರ ತಾಕೀತು

ರಾಜಧಾನಿಯ ಹಲಸೂರು ವಾರ್ಡ್ ಸಂಖ್ಯೆ-90ರ ವ್ಯಾಪ್ತಿಯ ತಿರುವಳ್ಳುವರ್ ಪ್ರತಿಮೆ ವೃತ್ತದ ಗಂಗಾಧರ ಚೆಟ್ಟಿ ರಸ್ತೆಯಲ್ಲಿ ಮಳೆ ನೀರು ನಿಲ್ಲುತ್ತಿರುವ ಹಿನ್ನೆಲೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಿಬಿಎಂಪಿ ಮುಖ್ಯ ಆಯುಕ್ತರು ಅಧಿಕಾರಿಗಳಿಗೆ ನೀರು ನಿಲ್ಲದಂತೆ ಕ್ರಮವಹಿಸಲು ಸೂಚನೆ ನೀಡಿದರು.

bbmp-chief-commissioner
ಬಿಬಿಎಂಪಿ ಮುಖ್ಯ ಆಯುಕ್ತ

By

Published : Aug 7, 2021, 10:58 PM IST

ಬೆಂಗಳೂರು: ಹಲಸೂರಿನ ಗಂಗಾಧರ ಚೆಟ್ಟಿ ರಸ್ತೆಯಲ್ಲಿ ಮಳೆ ನೀರು ನಿಲ್ಲದಂತೆ ಸೂಕ್ತ ಕ್ರಮವಹಿಸಬೇಕೆಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಅಧಿಕಾರಿಗಳಿಗೆ ತಾಕೀತು ಮಾಡಿದರು.

ನಗರದ ಹಲಸೂರು ವಾರ್ಡ್ ಸಂಖ್ಯೆ-90ರ ವ್ಯಾಪ್ತಿಯ ತಿರುವಳ್ಳುವರ್ ಪ್ರತಿಮೆ ವೃತ್ತದ ಗಂಗಾಧರ ಚೆಟ್ಟಿ ರಸ್ತೆಯಲ್ಲಿ ಮಳೆ ನೀರು ನಿಲ್ಲುತ್ತಿರುವ ಬಗ್ಗೆ ದೂರು ಕೇಳಿ ಬಂದ ಹಿನ್ನೆಲೆಯಲ್ಲಿ ಶನಿವಾರ ಖುದ್ದು ಸ್ಥಳಕ್ಕೆ ಭೇಟಿ ನೀಡಿ ಮುಖ್ಯ ಆಯುಕ್ತರು ಪರಿಶೀಲನೆ ನಡೆಸಿದ ಬಳಿಕ, ರಸ್ತೆಯಲ್ಲಿ ನೀರು ನಿಲ್ಲದಂತೆ ಕ್ರಮವಹಿಸುವ ಜತೆಗೆ ಇಲ್ಲಿರುವ ಸಣ್ಣ ನೀರುಗಾಲುವೆಯಲ್ಲಿನ ಹೂಳು ತೆರವು ಮಾಡಬೇಕು. ರಸ್ತೆ ಬದಿಯಲ್ಲಿ ನಡೆಯುತ್ತಿರುವ ಸೈಡ್ ಡ್ರೈನ್ ಕಾಮಗಾರಿಯನ್ನು ಶೀಘ್ರವಾಗಿ ಪೂರ್ಣಗೊಳಿಸಿ, ವೈಟ್ ಟಾಪಿಂಗ್ ಕಾಮಗಾರಿ ಕೈಗೆತ್ತಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಮಳೆಯಾದರೆ ರಸ್ತೆ ಮಾರ್ಗಗಳಲ್ಲಿ ನೀರು ನಿಲ್ಲುತ್ತಿದೆ. ಇದರಿಂದ ಸಾರ್ವಜನಿಕರ ಓಡಾಟ ಹಾಗೂ ವಾಹನ ಸವಾರರಿಗೆ ಸಮಸ್ಯೆಯಾಗಲಿದೆ. ಹೀಗಾಗಿ, ಡಿಕನ್ಸನ್ ರಸ್ತೆೆ ಕಡೆಯಿಂದ ಹಲಸೂರು ಕೆರೆ ಬಳಿಯಿರುವ ಪ್ರಮುಖ ರಾಜಕಾಲುವೆಗೆ ಸಂಪರ್ಕವಿರುವ ಡ್ರೈನೇಜ್​ನಲ್ಲಿ ತುಂಬಿರುವ ಹೂಳನ್ನು ತೆರವುಗೊಳಿಸಿ, ಮಳೆಯಾದರೆ ಸರಾಗವಾಗಿ ನೀರು ಹರಿಯುವಂತೆ ಕ್ರಮವಹಿಸಬೇಕು ಎಂದು ಹೇಳಿದರು.

ವೈಟ್ ಟಾಪಿಂಗ್ ಕಾಮಗಾರಿ ಪೂರ್ಣಗೊಳಿಸಿ:ಅಣ್ಣ ಸ್ವಾಮಿ ಮೊದಲಿಯಾರ್ ರಸ್ತೆಯ ವೈಟ್ ಟಾಪಿಂಗ್ ಕಾಮಗಾರಿ ಪೂರ್ಣಗೊಂಡಿದೆ. ಸೆಂಟ್ ಜಾನ್‌ಸ್‌ ರಸ್ತೆಗೆ ಸೇರುವ ಉಳಿಕೆ 150 ಮೀಟರ್ ರಸ್ತೆಯನ್ನು ವೈಟ್ ಟಾಪಿಂಗ್ ಅಳವಡಿಸುವ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಿ, ಸುಗಮ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಬೇಕು. ಗುರುದ್ವಾರದ ಮುಂಭಾಗ ರಸ್ತೆ ಕೆಳಭಾಗದಲ್ಲಿ ಹಾದು ಹೋಗಿರುವ ರಾಜಕಾಲುವೆಯಲ್ಲಿ ಹೂಳನ್ನು ತೆರವುಗೊಳಿಸಿ, ಸರಾಗವಾಗಿ ನೀರು ಹರಿಯುವಂತೆ ಮಾಡಬೇಕು ಎಂದು ಅಧಿಕಾರಿಗೆ ತಿಳಿಸಿದರು.

ಇದೇ ವೇಳೆ ಆರ್.ಕೆ. ಮಠ ರಸ್ತೆಯಲ್ಲಿರುವ ಪಾಲಿಕೆಯ ಕಟ್ಟಡ ಬಳಕೆಯಾಗದೇ ಇರುವುದನ್ನು ಗಮನಿಸಿ, ಆರೋಗ್ಯ ಸಂಬಂಧಿತ ಯೋಜನೆಗಳಿಗೆ ಕಟ್ಟಡವನ್ನು ಉಪಯೋಗಿಸಿಕೊಳ್ಳುವಂತೆ ವಲಯ ಜಂಟಿ ಆಯುಕ್ತೆ ಪಲ್ಲವಿಯವರಿಗೆ ಸೂಚಿಸಿದರು.

For All Latest Updates

TAGGED:

ABOUT THE AUTHOR

...view details