ಬೆಂಗಳೂರು: ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಅವರ ಟ್ವಿಟರ್ ಹೆಸರು, ಫೋಟೋ ಅಳಿಸಿ ಹ್ಯಾಕ್ ಮಾಡಲಾಗಿದೆ. ಈ ಅಕೌಂಟ್ನಲ್ಲಿ ಸದ್ಯ ಖಾಸಗಿ ವ್ಯಕ್ತಿಗಳು ಟ್ವೀಟ್ ಮಾಡುತ್ತಿರುವುದು ಕಂಡುಬಂದಿದೆ.
ಬಿಬಿಎಂಪಿ ಮುಖ್ಯ ಆಯುಕ್ತರ ಹಳೆಯ ಅಥವಾ ಹೊಸ ಟ್ವೀಟ್ಗಳು ಕಾಣಿಸುತ್ತಿಲ್ಲ. ಈ ಹಿಂದೆ ಅವರು ನಗರದ ಅಭಿವೃದ್ಧಿ ಕಾರ್ಯಗಳು, ಕೋವಿಡ್ ಕುರಿತ ಮಾಹಿತಿಗಳನ್ನು ಟ್ವೀಟ್ ಮಾಡುತ್ತಿದ್ದರು. ಸಾಕಷ್ಟು ಜನ ಇವರ ಅಕೌಂಟ್ನ್ನು ಫಾಲೋ ಕೂಡಾ ಮಾಡುತ್ತಿದ್ದರು. ಆದರೆ ಮುಖ್ಯ ಆಯುಕ್ತರ ಫೋಟೋ ಹೆಸರು ಎರಡೂ ಟ್ವಿಟರ್ ನಲ್ಲಿಯೂ ಲಭ್ಯವಿಲ್ಲ.