ಬೆಂಗಳೂರು :ನಗರದ ಸಾರ್ವಜನಿಕ, ಮಾರುಕಟ್ಟೆ ಸ್ಥಳಗಳಲ್ಲಿ ಜನಜಂಗುಳಿ ಹೆಚ್ಚಾಗುತ್ತಿದೆ. ನಿಧಾನವಾಗಿ ಕೋವಿಡ್ ಪಾಸಿಟಿವ್ ಹಾಗೂ ಮರಣ ಪ್ರಮಾಣ ಏರಿಕೆ ಕಾಣುತ್ತಿದೆ. ಹಾಗಾಗಿ, ತಾವು ವೈರಸ್ ನಿಯಂತ್ರಣಕ್ಕೆ ಕೈಗೊಂಡಿರುವ ಕ್ರಮಗಳ ಬಗ್ಗೆ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಮಾತನಾಡಿದರು.
ಕೋವಿಡ್ ಕುರಿತಂತೆ ಪ್ರತಿನಿತ್ಯ ನಿಗಾವಹಿಸಲಾಗ್ತಿದೆ. ಪ್ರತಿ ದಿನ ಹೊಸದಾಗಿ ಎಷ್ಟು ಸೋಂಕಿತರು, ಎಷ್ಟು ಜನ ಆಸ್ಪತ್ರೆಗೆ ದಾಖಲಾಗ್ತಿದ್ದಾರೆ ಅನ್ನೋದರ ಮಾಹಿತಿ ಪಡೆಯಲಾಗ್ತಿದೆ. ಸಾರ್ವಜನಿಕ ಹಾಗೂ ಖಾಸಗಿ ಆಸ್ಪತ್ರೆಗಳಿಂದಲೂ ಮಾಹಿತಿ ಪಡೆಯಲು ಈಗಾಗಲೇ ಒಂದು ಟೀಂ ರಚನೆಯಾಗಿದೆ. ಸದ್ಯ ಕೋವಿಡ್ ಪ್ರಮಾಣ ಹತೋಟಿಯಲ್ಲಿದೆ ಎಂದರು.
ಆದರೆ, ಕೋವಿಡ್ ಹೆಚ್ಚಾಗದಂತೆ, ಹೆಚ್ಚಾದರೆ ನಿಯಂತ್ರಣಕ್ಕೆ ನಾವು ಸಿದ್ಧತೆ ಮಾಡಿಕೊಳ್ಳಬೇಕಿದೆ. ಮಾಸ್ಕ್ ಇಲ್ಲದೆ ಇರೋದರಿಂದಲೇ ಸೋಂಕು ಹೆಚ್ಚು ಹರಡುತ್ತಿದೆ. ಈ ಎಲ್ಲಾ ವಿಷಯಗಳ ಬಗ್ಗೆ ನಿಗಾವಹಿಸಲು ಮಾರ್ಷಲ್ಗಳ 54 ಟೀಂ ನೇಮಕ ಮಾಡಲಾಗಿದೆ.
ಪ್ರತಿ ಟೀಂನಲ್ಲಿ 4 ಮಂದಿ ಮಾರ್ಷಲ್ಸ್, ಪೊಲೀಸ್, ಹೋಂಗಾರ್ಡ್ಸ್ ಇರಲಿದ್ದಾರೆ. ವಿಶೇಷವಾಗಿ ಸಿವಿಲ್ ಡಿಫೆನ್ಸ್ ನಿಯೋಜನೆ ಮಾಡಲಾಗಿದೆ. ಮಾರ್ಕೇಟ್ಗಳಲ್ಲಿ ಕೋವಿಡ್ ನಿಯಮ ಪಾಲನೆ ಆಗ್ತಿಲ್ಲ ಅನ್ನೋ ಆರೋಪ ಇದೆ. ಹೆಚ್ಚಿನ ಮಾನಿಟರ್ ಮಾಡುವ ಕೆಲಸ ಆಗ್ತಿದೆ ಎಂದು ತಿಳಿಸಿದರು.
ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಜಿನೋಮಿಕ್ ಸೀಕ್ವೆನ್ಸ್ ಮಾಡಲಾಗ್ತಿದೆ :ಬಿಬಿಎಂಪಿಯ ಆಸ್ಪತ್ರೆಗಳನ್ನು ಮಕ್ಕಳಿಗಾಗಿ ಸಜ್ಜು ಮಾಡಲಾಗುತ್ತಿದೆ. ಹೊಸ್ಕೆರೆ ಪದ್ಮನಾಭನಗರದ ಆಸ್ಪತ್ರೆ ಹಾಗೂ ಜೆಜೆನಗರದ ಆಸ್ಪತ್ರೆ ಸಿದ್ಧತೆ ಮಾಡಲಾಗುತ್ತಿದೆ. ತಜ್ಞರ ಸಮಿತಿ ಜತೆ ಆಗಾಗ ಸಭೆ ನಡೆಸಲಾಗ್ತಿದೆ. ಮನೆ ಮನೆ ಸರ್ವೇ ಕೂಡ ಈಗಾಗಲೇ ಆರಂಭವಾಗಿದೆ. ಸೆರೋ ಸರ್ವೇ ಆರಂಭವಾಗಿದೆ. ನಿತ್ಯ ನಮ್ಮಲ್ಲಿ ಜಿನೋಮಿಕ್ ಸೀಕ್ವೆನ್ಸ್ ಮಾಡಲಾಗ್ತಿದೆ ಎಂದರು.
ಹೀಗಾಗಿ, ಜನರು ಹೆಲ್ಮೆಟ್, ಸೀಟ್ ಬೆಲ್ಟ್ ರೀತಿಯಲ್ಲಿಯೇ ಮಾಸ್ಕ್ ಧರಿಸಬೇಕು. ಲಸಿಕೆ ಹಾಕಲು ಹಿಂದೇಟು ಹಾಕುವ ಕಡೆಗಳಲ್ಲಿ ಹೆಚ್ಚಿನ ನಿಗಾ ಇಡಲು ತೀರ್ಮಾನ ಮಾಡಲಾಗಿದೆ. ನಿನ್ನೆ ರಾಜ್ಯದ ಜತೆ ನಡೆದ ಸಭೆಯಲ್ಲಿ ಹೆಚ್ಚಿನ ಲಸಿಕೆಗೆ ಬೇಡಿಕೆ ಇಡಲಾಗಿದೆ. ಲಸಿಕೆ ನೀಡುವುದಕ್ಕೆ ಹೆಚ್ಚಿನ ಒತ್ತು ನೀಡಲು ತೀರ್ಮಾನ ಮಾಡಲಾಗಿದೆ ಎಂದರು.
ಲಸಿಕೆ ಪಡೆದ ಶಿಕ್ಷಕರಿಗೆ ಮಾತ್ರ ಅವಕಾಶ :ಯಾವುದೇ ಹಬ್ಬ, ಆಚರಣೆ ಇದ್ದರೂ ಸಾಧ್ಯವಾದಷ್ಟು ಕಡಿಮೆ ಮಾಡುವಂತೆ ಸಲಹೆ ನೀಡಲಾಗಿದೆ. ಇದೇ ಆಗಸ್ಟ್ 23ರಿಂದ ಶಾಲೆ ಆರಂಭವಾಗಲಿದೆ. ಹೀಗಾಗಿ, ಕಾಲೇಜಿಗೆ ತೆರಳುವವರಿಗೆ ಕಡ್ಡಾಯವಾಗಿ ವ್ಯಾಕ್ಸಿನ್ ನೀಡಲಾಗಿದೆ.
ಕೋವಿಡ್ ನಿಯಮ ಪಾಲನೆ ವಿಚಾರಕ್ಕೆ ಹೆಚ್ಚಿನ ಗಮನ ಹರಿಸಲಾಗಿದೆ. ಲಸಿಕೆ ಪಡೆದ ಶಿಕ್ಷಕರಿಗೆ ಮಾತ್ರ ಅವಕಾಶ ನೀಡುವಂತೆ ಸೂಚನೆ ನೀಡಲಾಗಿದೆ. ಶಾಲಾ ಬಸ್, ಖಾಸಗಿ ಶಾಲೆಗಳಲ್ಲಿ ಎಸ್ ಒಪಿ ಪಾಲನೆ ಕುರಿತಂತೆ ಸೂಚಿಸಲಾಗಿದೆ ಎಂದು ಹೇಳಿದರು.
ಓದಿ:ಮಾನ ಇದ್ದರೇ ಮಾನನಷ್ಟ ಮೊಕದ್ದಮೆ ಹಾಕಲಿ : ಸಿ ಟಿ ರವಿ ವಿರುದ್ಧ ಆರ್ ಧ್ರುವನಾರಾಯಣ ವಾಗ್ದಾಳಿ