ಕರ್ನಾಟಕ

karnataka

ETV Bharat / state

ಪ್ರತಿ ಮಂಗಳವಾರ, ಶುಕ್ರವಾರ ಪಾಲಿಕೆ ಮುಖ್ಯ ಆಯುಕ್ತರ ನಡೆ ವಲಯ ಕಚೇರಿಗಳ ಕಡೆ

ಇನ್ಮುಂದೆ ವಾರದಲ್ಲಿ ಪ್ರತಿ ಮಂಗಳವಾರ ಮತ್ತು ಶುಕ್ರವಾರ ಸೇರಿ ತಿಂಗಳಿಗೆ 8 ದಿನಗಳ ಕಾಲ ಎಂಟು ವಲಯಗಳ ಕಚೇರಿಗಳಲ್ಲಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಲಭ್ಯರಿರುತ್ತಾರೆ. ದೂರು ಸ್ವೀಕರಿಸಿ ಕಚೇರಿಗಳ ಕಾರ್ಯವೈಖರಿಯ ಪರಿಶೀಲನೆ ನಡೆಸಲಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಆಯುಕ್ತ ತುಷಾರ್ ಗಿರಿನಾಥ್
ಆಯುಕ್ತ ತುಷಾರ್ ಗಿರಿನಾಥ್

By

Published : Jun 19, 2022, 4:16 PM IST

ಬೆಂಗಳೂರು: ಬರುವ ವಾರದಿಂದ ರಾಜಧಾನಿ ವ್ಯಾಪ್ತಿಯ ಎಲ್ಲ ವಲಯಗಳಲ್ಲೂ ಸಾರ್ವಜನಿಕರಿಂದ ಸಮಸ್ಯೆಗಳ ಅಹವಾಲು ಆಲಿಸಲು ಪಾಲಿಕೆ ಮುಖ್ಯ ಆಯುಕ್ತರು ಖುದ್ದಾಗಿ ಪ್ರತಿ ಮಂಗಳವಾರ ಮತ್ತು ಶುಕ್ರವಾರ ಮಧ್ಯಾಹ್ನ 2 ರಿಂದ ಸಂಜೆ 5ರವರೆಗೆ ವಲಯ ಕಚೇರಿಗಳಲ್ಲಿ ಲಭ್ಯವಾಗಲಿದ್ದಾರೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.

ಇನ್ಮುಂದೆ ವಾರದಲ್ಲಿ ಪ್ರತಿ ಮಂಗಳವಾರ ಮತ್ತು ಶುಕ್ರವಾರ ಸೇರಿ ತಿಂಗಳಿಗೆ 8 ದಿನಗಳ ಕಾಲ ಎಂಟು ವಲಯಗಳ ಕಚೇರಿಗಳಲ್ಲಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಲಭ್ಯರಿರುತ್ತಾರೆ. ದೂರು ಸ್ವೀಕರಿಸಿ ಕಚೇರಿಗಳ ಕಾರ್ಯವೈಖರಿಯ ಪರಿಶೀಲನೆ ನಡೆಸಲಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಸಾರ್ವಜನಿಕರು ಸಮಸ್ಯೆಗಳ ಅಹವಾಲು ಸಲ್ಲಿಸಲು ಪಾಲಿಕೆ ಕೇಂದ್ರ ಕಚೇರಿಯ ಮುಖ್ಯ ಆಯುಕ್ತರ ಕಚೇರಿಗೆ ಬರುತ್ತಿದ್ದಾರೆ. ಹೀಗಾಗಿ, ಜನರು ದೂರದ ಪ್ರದೇಶಗಳಿಂದ ಬರುವುದನ್ನು ತಡೆಗಟ್ಟಲು ವಲಯ ವಾರದ 2 ದಿನಗಳು ವಲಯ ಕಚೇರಿಗಳಿಗೆ ಹೋಗಿ ಅಹವಾಲು ಸ್ವೀಕರಿಸಲು ನಿರ್ಧರಿಸಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪಾಲಿಕೆ ಮುಖ್ಯ ಆಯುಕ್ತರು ಯಾವ ವಲಯದಲ್ಲಿ ಎಂದು ಲಭ್ಯ ಎಂದು ನೋಡುವುದಾದರೆ:

ಮೊದಲ ಮಂಗಳವಾರ -ಪೂರ್ವ ವಲಯ
ಮೊದಲ ಶುಕ್ರವಾರ - ಪಶ್ಚಿಮ ವಲಯ
2ನೇಯ ಮಂಗಳವಾರ- ದಕ್ಷಿಣ ವಲಯ
2ನೇಯ ಶುಕ್ರವಾರ- ಆರ್. ಆರ್ ನಗರ
3ನೇಯ ಮಂಗಳವಾರ- ಬೊಮ್ಮನಹಳ್ಳಿ
3ನೇಯ ಶುಕ್ರವಾರ-ಮಹದೇವಪುರ
4ನೇಯ ಮಂಗಳವಾರ-ಯಲಹಂಕ
4ನೇಯ ಶುಕ್ರವಾರ- ದಾಸರಹಳ್ಳಿ

ಓದಿ:ಪಠ್ಯ ಪರಿಷ್ಕರಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿಲ್ಲ, ಬದಲಾವಣೆಗೆ ಮುಕ್ತವಾಗಿದ್ದೇವೆ: ಸಿಎಂ

For All Latest Updates

TAGGED:

ABOUT THE AUTHOR

...view details