ಕರ್ನಾಟಕ

karnataka

ETV Bharat / state

ಪಾಲಿಕೆ ಸಿಬ್ಬಂದಿಯ ರಜೆ ರದ್ದು.. ಸಾರ್ವಜನಿಕ ರಜಾ ದಿನಗಳಂದು ಕರ್ತವ್ಯಕ್ಕೆ ಹಾಜರಾಗುವಂತೆ ಬಿಬಿಎಂಪಿ ಸೂಚನೆ - no leave for bbmp employees

ಯಾವುದೇ ಕಾರಣಕ್ಕೂ ಕೇಂದ್ರಸ್ಥಾನವನ್ನು ಬಿಡದೆ, ಮೊಬೈಲ್ ದೂರವಾಣಿಯನ್ನು ಚಾಲ್ತಿಯಲ್ಲಿಟ್ಟುಕೊಂಡು, ತುರ್ತು ಸಂದರ್ಭವಿದ್ದಲ್ಲಿ ಕೂಡಲೇ ಕಾರ್ಯಪ್ರವೃತ್ತರಾಗುವಂತೆ ಪ್ರಕಟಣೆಯಲ್ಲಿ ತಿಳಿಸಿದೆ..

bbmp
bbmp

By

Published : Apr 23, 2021, 8:47 PM IST

ಬೆಂಗಳೂರು :ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಕೋವಿಡ್ -19 ವ್ಯಾಪಕವಾಗಿ ಹರಡುತ್ತಿದೆ. ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಪಾಲಿಕೆ ಸಿಬ್ಬಂದಿ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಈ ಸಂದರ್ಭದಲ್ಲಿ ಪಾಲಿಕೆಯಲ್ಲಿ ಈಗಾಗಲೇ ಕೋವಿಡ್ -19 ನಿಯಂತ್ರಣ ಕಾರ್ಯಗಳಿಗೆ ನಿಯೋಜನೆಗೊಂಡಿರುವ ಹಾಗೂ ಎಲ್ಲಾ ಅಧಿಕಾರಿ,ನೌಕರರ ಸಾರ್ವಜನಿಕ ರಜಾ ದಿನಗಳಂದು ಕರ್ತವ್ಯಕ್ಕೆ ಹಾಜರಾಗಿ ಕಾರ್ಯನಿರ್ವಹಿಸಲು ಖಡಕ್ ಸೂಚನೆ ನೀಡಿದೆ.

ಯಾವುದೇ ಕಾರಣಕ್ಕೂ ಕೇಂದ್ರಸ್ಥಾನವನ್ನು ಬಿಡದೆ, ಮೊಬೈಲ್ ದೂರವಾಣಿಯನ್ನು ಚಾಲ್ತಿಯಲ್ಲಿಟ್ಟುಕೊಂಡು, ತುರ್ತು ಸಂದರ್ಭವಿದ್ದಲ್ಲಿ ಕೂಡಲೇ ಕಾರ್ಯಪ್ರವೃತ್ತರಾಗುವಂತೆ ಪ್ರಕಟಣೆಯಲ್ಲಿ ತಿಳಿಸಿದೆ.

ABOUT THE AUTHOR

...view details