ಬೆಂಗಳೂರು: ಬಿಬಿಎಂಪಿ ಬಜೆಟ್ ಮಂಡನೆಗೆ ಕೊನೆಗೂ ಮುಹೂರ್ತ ಫಿಕ್ಸ್ ಆಯ್ತು, ಗ್ರೀನ್ ಸಿಗ್ನಲ್ ಸಿಕ್ತು ಎನ್ನುತ್ತಿರುವಾಗಲೇ ಸದ್ಯ ರೆಡ್ ಸಿಗ್ನಲ್ ಬಿದ್ದಿದೆ. ಹೌದು, 2022-23 ನೇ ಸಾಲಿನ ಬಜೆಟ್ ಮಂಡನೆಗೆ ಸಿದ್ಧತೆ ನಡೆದಿತ್ತು. ನಾಳೆಯೇ ಮಲ್ಲೇಶ್ವರಂನಲ್ಲಿರುವ ಐಪಿಪಿ ಸೆಂಟರ್ ನಲ್ಲಿ ಮಂಡನೆ ಆಗುವುದಾಗಿ ಮೂಲಗಳು ತಿಳಿಸಿದ್ದವು. ಆದರೆ, ಇದೀಗ ಬುಧವಾರ ಬಜೆಟ್ ಮಂಡನೆ ಆಗುವುದು ಬಹುತೇಕ ಅನುಮಾನ ಎನ್ನಲಾಗ್ತಿದೆ.
ಬೆಂಗಳೂರು ನಗರ ಉಸ್ತುವಾರಿ ಆಗಿರುವ ಸಿಎಂ ಬಸವರಾಜ ಬೊಮ್ಮಾಯಿ, ಅಳೆದು ತೂಗಿ ಲೆಕ್ಕ ಮಾಡಿ ಬಜೆಟ್ಗೆ ಒಪ್ಪಿಗೆ ಸೂಚಿಸಿದ್ದರು. ಈ ಬಾರಿ 9 ಸಾವಿರ ಕೋಟಿ ರೂಪಾಯಿ ಗಾತ್ರದ ಬಜೆಟ್ ಮಂಡನೆಗೆ ಪಾಲಿಕೆ ತಯಾರಿ ನಡೆದಿತ್ತು. ಈ ಬಾರಿಯೂ ಕೂಡ ಸಾರ್ವಜನಿಕರ ವೀಕ್ಷಣೆಗೆ ಬ್ರೇಕ್ ಹಾಕಿ ಕಳೆದ ವರ್ಷದಂತೆ ಈ ವರ್ಷವೂ ಪೇಪರ್ ರಹಿತ ಬಜೆಟ್ ಮಂಡನೆಗೆ ಸಿದ್ಧತೆ ನಡೆದಿತ್ತು.