ಕರ್ನಾಟಕ

karnataka

ETV Bharat / state

ಕೊರೊನಾ ನಡುವೆಯೂ ಏಪ್ರಿಲ್ 20 ಕ್ಕೆ ಬಿ.ಬಿ.ಎಂ.ಪಿ ಬಜೆಟ್: ಸಚಿವ ಆರ್​.ಅಶೋಕ್

ಹಣಕಾಸು ಆಯವ್ಯಯ ಅನಿವಾರ್ಯವಾಗಿದ್ದು, ಏಪ್ರಿಲ್ 20 ರಂದು ಬಿ.ಬಿ.ಎಂ.ಪಿ ಬಜೆಟ್ ಮಂಡನೆಯಾಗಲಿದೆ ಎಂದು ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.

dwsde
ಏಪ್ರಿಲ್ 20 ಕ್ಕೆ ಬಿ.ಬಿ.ಎಂ.ಪಿ ಬಜೆಟ್:ಸಚಿವ ಆರ್​.ಅಶೋಕ್

By

Published : Apr 17, 2020, 2:20 PM IST

ಬೆಂಗಳೂರು:ಈ ಬಾರಿಯ ಬಿ.ಬಿ.ಎಂ.ಪಿ ಬಜೆಟ್ ಏಪ್ರಿಲ್ 20 ರಂದು ಮಧ್ಯಾಹ್ನ 12 ಗಂಟೆಗೆ ಮಂಡನೆಯಾಗಲಿದ್ದು ಸಾಮಾಜಿಕ ಅಂತರ ಪಾಲನೆ ಮಾಡಲಾಗುತ್ತದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.

ಏಪ್ರಿಲ್ 20 ಕ್ಕೆ ಬಿ.ಬಿ.ಎಂ.ಪಿ ಬಜೆಟ್:ಸಚಿವ ಆರ್​.ಅಶೋಕ್

ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಿಬಿಎಂಪಿ ಬಜೆಟ್ ಅನುಮೋದನೆ ಬಹಳ ಮುಖ್ಯವಾದ ವಿಷಯ, ಕೊರೊನಾ ಕಾರಣದಿಂದ ಮುಂದೂಡಿಕೆ ಮಾಡಿದ್ದೆವು. ಸದಸ್ಯರಿಗೆ ವೀಡಿಯೋ ಕಾನ್ಫರೆನ್ಸ್ ಮೂಲಕ ಮಾಹಿತಿ ನೀಡುತ್ತೇವೆ. ಲಾಕ್​ಡೌನ್ ಮತ್ತೆ ಮುಂದುವರೆದ ಕಾರಣ ಈಗ ಅನಿವಾರ್ಯವಾಗಿ ಮಂಡನೆ ಮಾಡಲೇಬೇಕು. ಹಾಗಾಗಿ ಸಿಎಂ, ಮೇಯರ್, ಸ್ಥಾಯಿ ಸಮಿತಿ ಅಧ್ಯಕ್ಷರ ಜೊತೆ ಚರ್ಚೆ ನಡೆಸಿದ್ದು, ಕೌನ್ಸಿಲ್ ಸಭೆಯಲ್ಲಿ ಮಂಡನೆಗೆ ಒಪ್ಪಿಗೆ ನೀಡಲಾಗಿದೆ ಎಂದರು.

ಬಜೆಟ್​ ಸಂದರ್ಭದಲ್ಲಿ ಕೆಲವೇ ಸದಸ್ಯರು ಮಾತ್ರ ಭಾಗಿಯಾಗಲಿದ್ದಾರೆ. ಮೇಯರ್, ಉಪ ಮೇಯರ್, ಸ್ಥಾಯಿ ಸಮಿತಿ ಸದಸ್ಯರು, ಪ್ರತಿಪಕ್ಷ ನಾಯಕ, ಆಡಳಿತ ಪಕ್ಷದ ನಾಯಕ, ಕೆಲ ಮಂತ್ರಿ, ಆಯುಕ್ತರು ಮಾತ್ರ ಭಾಗಿಯಾಗಲಿದ್ದು, ಸಾಮಾಜಿಕ ಅಂತರ ಕಾಯ್ದುಕೊಳ್ಳಲಾಗುತ್ತದೆ, ಈ ರೀತಿ ಬಜೆಟ್ ಮಂಡಿಸಲು ಕಾನೂನಾತ್ಮಕ ಅನುಮೋದನೆ ಪಡೆಯಲು ಮಾತುಕತೆ ನಡೆಸಿ ಅಂತಿಮವಾಗಿ ನಿರ್ಧಾರ ಕೈಗೊಳ್ಳಲಾಗಿದೆ ಎಂದರು.

ಕಳೆದ ಬಾರಿ 16 ಸಾವಿರ ಕೋಟಿ ಇತ್ತು, ಅಷ್ಟು ಬೇಡ ಕಡಿಮೆ ಮಾಡಿ ಎಂದು‌ ಸಲಹೆ ನೀಡಿದ್ದೇವೆ ಎಂದರು. ಪ್ರತಿ ವಾರ್ಡ್​​ಗೆ ಕೋವಿಡ್ -19 ಗಾಗಿ 25 ಲಕ್ಷ ಮೀಸಲು ಇಡಲಾಗಿದೆ. ಒಟ್ಟು 50 ಕೋಟಿ ಆಗಲಿದೆ, ಅದಕ್ಕೆ ಈಗಾಗಲೇ ಒಪ್ಪಿಗೆ ನೀಡಲಾಗಿದೆ ಔಷಧಿ, ಕೂಲಿ ಕಾರ್ಮಿಕರಿಗಾಗಿ ಮೀಸಲಿರಿಸಲಾಗಿದೆ ಉಳಿದದ್ದು ಬಜೆಟ್​ನಲ್ಲಿ ಬರಲಿದೆ ಎಂದರು.

ABOUT THE AUTHOR

...view details