ಬೆಂಗಳೂರು: ಬಿಬಿಎಂಪಿ ಬಜೆಟ್ ಮಾರ್ಚ್ ತಿಂಗಳಲ್ಲಿ ಮಂಡನೆಯಾಗಲಿದ್ದು, ಈಗಾಗಲೇ ಜಾರಿಗೆ ತರಬೇಕಾದ ಯೋಜನೆಗಳ ಬಗ್ಗೆ ಆಡಳಿತ ಪಕ್ಷ ಬಿಜೆಪಿ ಚರ್ಚೆ ನಡೆಸುತ್ತಿದೆ.
ಪ್ರಸ್ತುತ ನಗರದ ಚಾಲುಕ್ಯ ವೃತ್ತದಲ್ಲಿ ಬಸವಣ್ಣನ ಇತಿಹಾಸ ಸಾರುವ ರೀತಿಯಲ್ಲಿ ಅಭಿವೃದ್ಧಿ ಯಾಗುತ್ತಿದ್ದು, ಏಪ್ರಿಲ್ ಮೂವತ್ತೊರಳಗೆ ಉದ್ಘಾಟನೆಗೊಳ್ಳಲಿದೆ. ಇದೇ ರೀತಿ ನಗರದ ಮಬೇಎ್ಕರ್ ಬೀದಿ, ಸಜ್ಜನ್ ರಾವ್ ಸರ್ಕಲ್, ಕಬ್ಬನ್ ಸರ್ಕಲ್ ಸೇರಿದಂತೆ 35 ಪ್ರಮುಖ ಜಂಕ್ಷನ್ಗಳ ಅಭಿವೃದ್ಧಿ ಮಾಡಲು 2020-21 ನೇ ಸಾಲಿನ ಬಜೆಟ್ನಲ್ಲಿ ಅನುದಾನ ಮೀಸಲಿಡಲು ಪಾಲಿಕೆ ಮುಂದಾಗಿದೆ.
ಇನ್ನು ಪಾಲಿಕೆಯ ಆಸ್ತಿಗಳನ್ನು ಪಾಲಿಕೆ ಹೆಸರಿಗೆ ನೋಂದಣಿ ಮಾಡಲು ಕ್ರಮ ಕೈಗೊಳ್ಳಲು ಮೇಯರ್ ಮುಂದಾಗಿದ್ದಾರೆ. ಪಾಲಿಕೆಯ ಆಸ್ತಿಗಳು ದಾಖಲೆಯಲ್ಲಿ ಮಾತ್ರ ಪಾಲಿಕೆ ಆಸ್ತಿ ಎಂದು ಗುರುತಿಸಲಾಗುತ್ತಿದೆ. ಇದನ್ನು ಪಾಲಿಕೆ ಹೆಸರಿನಲ್ಲಿ ನೋಂದಣಿ ಮಾಡಬೇಕಾಗಿದ್ದು, ಈ ನಿಟ್ಟಿನಲ್ಲಿ ಯೋಜನೆ ರೂಪಿಸಿಕೊಳ್ಳಲು ಪಾಲಿಕೆ ಮುಂದಾಗಿದೆ.
ಕಡಿಮೆ ಮೊತ್ತಕ್ಕೆ ಗುತ್ತಿಗೆ ನೀಡಿರುವ ಆಸ್ತಿಗಳ ದರ ಪರಿಶೀಲನೆಗೂ ಚಿಂತಿಸಲಾಗಿದೆ. ಇನ್ನು ಪಾಲಿಕೆಯ ಕಾನೂನು ಕೋಶದ ಮುಖ್ಯಸ್ಥ ಕೆ.ಡಿ ದೇಶಪಾಂಡೆ ಸ್ಥಾನಕ್ಕೆ ಬೇರೆಯವರನ್ನು ನೇಮಕ ಮಾಡಲು ಗಂಭೀರವಾಗಿ ಕ್ರಮಕೈಗೊಳ್ಳುವಂತೆ ಮೇಯರ್ ಆಯುಕ್ತರಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.