ಕರ್ನಾಟಕ

karnataka

ETV Bharat / state

ಕೆಲ ಮಾರ್ಪಾಡುಗಳೊಂದಿಗೆ ಬಿಬಿಎಂಪಿ ಬಜೆಟ್​​ಗೆ ಅನುಮೋದನೆ ನೀಡಿದ ಸರ್ಕಾರ

2020-21 ನೇ ಸಾಲಿನ ಬಿಬಿಎಂಪಿ ಬಜೆಟ್​​ಗೆ ಸರ್ಕಾರ ಕೆಲವು ಮಾರ್ಪಾಡುಗಳೊಂದಿಗೆ ಅನುಮೋದನೆ ನೀಡಿದೆ.

bbmp-budget-approval
ಬಿಬಿಎಂಪಿ ಬಜೆಟ್​​ಗೆ ಅನುಮೋದನೆ ನೀಡಿದ ಸರ್ಕಾರ

By

Published : May 14, 2020, 10:49 AM IST

ಬೆಂಗಳೂರು: ಬಿಬಿಎಂಪಿಯ 2020-21 ನೇ ಸಾಲಿನ ಬಜೆಟ್ ಗೆ ಸರ್ಕಾರ ಕೆಲವು ಮಾರ್ಪಾಡುಗಳೊಂದಿಗೆ ಅನುಮೋದನೆ ನೀಡಿದೆ.

ಬಿಬಿಎಂಪಿ ಬಜೆಟ್​​ಗೆ ಅನುಮೋದನೆ ನೀಡಿದ ಸರ್ಕಾರ

ಒಟ್ಟು 11,969.5 ಕೋಟಿ ಮೊತ್ತದ ಬಜೆಟ್​​ನಲ್ಲಿ 254 ಕೋಟಿ ರೂ ಕಡಿತ ಮಾಡಿ, 11,715 ಕೋಟಿ ರೂ ಆಯವ್ಯಯಕ್ಕೆ ಅನುಮೋದನೆ ನೀಡಿದೆ.
ರಸ್ತೆಗುಂಡಿ ಮುಚ್ಚಲು ನೀಡಿದ್ದ 120 ಕೋಟಿ ರೂಗಳನ್ನು, ಐದು ಕೋಟಿ ರೂ.ಗೆ ಇಳಿಸಲಾಗಿದೆ. ಮಳೆ ನೀರುಗಾಲುವೆ ನಿರ್ವಹಣೆಯ 75 ಕೋಟಿ ರೂ. ಗಳನ್ನು 25 ಕೋಟಿ ರೂಪಾಯಿಗೆ ಕಡಿತಗೊಳಿಸಲಾಗಿದೆ. ಜೊತೆಗೆ ವಿಧಾನಸಭಾ ಕ್ಷೇತ್ರಗಳಲ್ಲಿ ಅಭಿವೃದ್ಧಿ ಕಾಮಗಾರಿಗೆ 75 ಕೋಟಿ ರೂ ನೀಡಲಾಗಿತ್ತು. ಅದನ್ನು 50 ಕೋಟಿಗೆ ಇಳಿಸಲಾಗಿದೆ.

ಬಿಬಿಎಂಪಿ ಬಜೆಟ್​​ಗೆ ಅನುಮೋದನೆ ನೀಡಿದ ಸರ್ಕಾರ

ಬೆಳ್ಳಂದೂರು ,ವರ್ತೂರು ಕೆರೆ ಅಭಿವೃದ್ಧಿಗೆ ಬಿಬಿಎಂಪಿ ಅನುದಾನ ಮೀಸಲಿಟ್ಟಿರಲಿಲ್ಲ, ಆದರೆ ಸರ್ಕಾರ ಈಗ ಕ್ರಮವಾಗಿ 25 ಕೋಟಿ ಹಾಗೂ 20 ಕೋಟಿ ಮೀಸಲಿಟ್ಟು ಪರಿಷ್ಕರಣೆಗೊಳಿಸಿದೆ.

ABOUT THE AUTHOR

...view details