ಬೆಂಗಳೂರು:ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯ ದಕ್ಷಿಣ ವಲಯ ವ್ಯಾಪ್ತಿಯಲ್ಲಿ ರಸ್ತೆ ಗುಂಡಿಗಳನ್ನು ಸಂಪೂರ್ಣವಾಗಿ ಮುಚ್ಚಲಾಗಿದೆ ಎಂದು ವಲಯ ಆಯುಕ್ತ ಜಯರಾಮ್ ರಾಯಪುರ ತಿಳಿಸಿದ್ದಾರೆ. ದಕ್ಷಿಣ ವಲಯ ವ್ಯಾಪ್ತಿಯ ಒಟ್ಟು 6 ವಿಧಾನಸಭಾ ಕ್ಷೇತ್ರಗಳಾದ ಜಯನಗರ, ಬಿಟಿಎಂ ಲೇಔಟ್, ಪದ್ಮನಾಭನಗರ, ಬಸವನಗುಡಿ, ವಿಜಯನಗರ ಹಾಗು ಚಿಕ್ಕಪೇಟೆಗಳಲ್ಲಿ 48 ಹೊಸ ವಾರ್ಡ್ಗಳಿವೆ. ಈ ವಾರ್ಡ್ಗಳ ವ್ಯಾಪ್ತಿಯಲ್ಲಿರುವ ಎಲ್ಲಾ ಆರ್ಟೀರಿಯಲ್, ಸಬ್-ಆರ್ಟೀರಿಯಲ್ ಮತ್ತು ವಾರ್ಡ್ ರಸ್ತೆಗಳಲ್ಲಿದ್ದ ರಸ್ತೆ ಗುಂಡಿಗಳನ್ನು ಮುಚ್ಚಲಾಗಿದೆ ಎಂದಿದ್ದಾರೆ.
ಬೆಂಗಳೂರಿನ ದಕ್ಷಿಣ ವಲಯ ರಸ್ತೆಗಳು ಗುಂಡಿ ಮುಕ್ತ: ಬಿಬಿಎಂಪಿ ಘೋಷಣೆ - ವಲಯ ಆಯುಕ್ತರಾದ ಜಯರಾಮ್ ರಾಯಪುರ
ಬೆಂಗಳೂರಿನ ದಕ್ಷಿಣ ವಲಯದ ರಸ್ತೆಗಳು ಗುಂಡಿ ಮುಕ್ತ ಎಂದು ಬಿಬಿಎಂಪಿ ಘೋಷಿಸಿದೆ.
ದಕ್ಷಿಣ ವಲಯ ವ್ಯಾಪ್ತಿಯ ಪ್ರಮುಖ ರಸ್ತೆಗಳಾದ ಆರ್ಟೀರಿಯಲ್ (ಮುಖ್ಯ ರಸ್ತೆ), ಸಬ್-ಆರ್ಟೀಯಲ್ (ಉಪ ಮುಖ್ಯರಸ್ತೆ) ಹಾಗೂ ವಾರ್ಡ್ ರಸ್ತೆಗಳಲ್ಲಿ ರಸ್ತೆ ಗುಂಡಿಗಳು ಕಂಡುಬಂದಲ್ಲಿ ನೇರವಾಗಿ ದಕ್ಷಿಣ ವಲಯದ ನಿಯಂತ್ರಣ ಕೊಠಡಿಯ ದೂರವಾಣಿ ಸಂಖ್ಯೆ: 26566362/ 22975703 ಗೆ ಸಾರ್ವಜನಿಕರು ಕರೆ ಮಾಡಿ ದೂರು ದಾಖಲಿಸುವಂತೆ ತಿಳಿಸಿದ್ದಾರೆ. ಅಲ್ಲದೇ, ದಕ್ಷಿಣ ವಲಯದ ನಿಯಂತ್ರಣ ಕೊಠಡಿಯ ವಾಟ್ಸಪ್ ಸಂಖ್ಯೆ: 9480685704ಗೆ ಜಿಯೋ ಲೊಕೇಷನ್/ವಿಳಾಸ ಇರುವ ರಸ್ತೆ ಗುಂಡಿಗಳ ಫೋಟೋಗಳನ್ನು ಕಳುಹಿಸುವಂತೆಯೂ ದಕ್ಷಿಣ ವಲಯ ಆಯುಕ್ತ ಜಯರಾಮ್ ರಾಯಪುರ ನಾಗರಿಕರಲ್ಲಿ ಮನವಿ ಮಾಡಿದ್ದಾರೆ.
ಇದನ್ನೂ ಓದಿ:ಜಾಮೀನಿನ ಮೇಲೆ ಹೊರಬಂದು ಹೊಟೇಲ್ ರೂಂನಲ್ಲಿ ಗೆಳತಿಗೆ ಗುಂಡಿಕ್ಕಿ ಕೊಂದ ವಿವಾಹಿತ