ಕರ್ನಾಟಕ

karnataka

By

Published : Jul 24, 2023, 9:09 PM IST

ETV Bharat / state

ನವ ಬೆಂಗಳೂರು ನಿರ್ಮಾಣ ಪರಿಕಲ್ಪನೆಗೆ ವರ್ಲ್ಡ್ ಡಿಸೈನ್ ಆರ್ಗನೈಸೇಷನ್ ಜೊತೆ ಸರ್ಕಾರದ ಒಪ್ಪಂದ

ಬೆಂಗಳೂರು ನಗರದ ಅಭಿವೃದ್ಧಿ ಸಂಬಂಧ ವರ್ಲ್ಡ್ ಡಿಸೈನ್ ಆರ್ಗನೈಸೇಷನ್ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿದೆ.

ಆಪರೇಷನ್ ಸಿಂಗಾಪುರ್ ಬಗ್ಗೆ ಡಿಕೆಶಿ ಪ್ರತಿಕ್ರಿಯೆ
ನವ ಬೆಂಗಳೂರು ನಿರ್ಮಾಣ ಪರಿಕಲ್ಪನೆಗೆ ವರ್ಲ್ಡ್ ಡಿಸೈನ್ ಆರ್ಗನೈಸೇಷನ್ ಜೊತೆ ಸರ್ಕಾರ ಒಪ್ಪಂದ

ಶತ್ರುವಿನ ಶತ್ರು ಮಿತ್ರ ಎಂಬಂತೆ ಬಿಜೆಪಿ ಮತ್ತು ಜೆಡಿಎಸ್ ಒಂದಾಗುತ್ತಿವೆ ಎಂದ ಡಿಸಿಎಂ

ಬೆಂಗಳೂರು: ಅಂತಾರಾಷ್ಟ್ರೀಯ ಮಟ್ಟಕ್ಕೆ ಬೆಂಗಳೂರು ನಗರವನ್ನು ಕೊಂಡೊಯ್ಯಲು ವರ್ಲ್ಡ್ ಕ್ಲಾಸ್ ಸಿಟಿ, ಗ್ಲೋಬಲ್ ಸಿಟಿ ಮಾಡಲು ಹೊಸ ರೂಪ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ. ವಿಧಾನಸೌಧದಲ್ಲಿ ಇಂದು ಸಂಜೆ ನಡೆದ ಕಾರ್ಯಕ್ರಮದಲ್ಲಿ ಸರ್ಕಾರದ ಪರವಾಗಿ ಬಿಬಿಎಂಪಿಯು ವರ್ಲ್ಡ್ ಡಿಸೈನ್ ಆರ್ಗನೈಸೇಷನ್ ಜೊತೆ ಒಪ್ಪಂದ ಮಾಡಿಕೊಂಡಿದೆ.

ಈ ಸಂದರ್ಭದಲ್ಲಿ ಮಾತನಾಡಿದ ನಗರಾಭಿವೃದ್ಧಿ ಸಚಿವರೂ ಆದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಈ ಹಿಂದೆ ಇದಕ್ಕಾಗಿ ಸ್ಪರ್ಧೆ ನಡೆದಿದ್ದು, ಅದರಲ್ಲಿ ಬೆಂಗಳೂರು ಪಾಸ್ ಆಗಿಲ್ಲ. ಮತ್ತೆ ಸಂಪರ್ಕ ಮಾಡಿ ಮುಂದಕ್ಕೆ ತೆಗೆದುಕೊಂಡು ಹೋಗಲು ಹೊಸ ಕಾರ್ಯಕ್ರಮವನ್ನು ವರ್ಲ್ಡ್ ಡಿಸೈನ್ ಪ್ರೊಟೋಪೊಲಿಸ್ ಮಾಡುತ್ತಿದ್ದು, ಕೆನಡಾದಲ್ಲಿ ಈ ಸಂಸ್ಥೆ ಇದೆ. ಇದಕ್ಕೆ 200ರಿಂದ 300 ಮಂದಿ ಇಂಜಿನಿಯರ್​ಗಳು ಕೆಲಸ ಮಾಡಲಿದ್ದಾರೆ ಎಂದು ತಿಳಿಸಿದರು.

ಬೆಂಗಳೂರು ಆಯ್ಕೆ ಮಾಡಿ ಮುಂದಿನ ಬೆಂಗಳೂರನ್ನು ಹೇಗೆ ಮಾಡಬೇಕು. ಈಗಿನ ಬೆಂಗಳೂರನ್ನು ಯಾವ ರೀತಿ ಬದಲಾವಣೆ ಮಾಡಬೇಕು. ರಸ್ತೆ, ಪಾದಚಾರಿ, ಪಾರ್ಕ್, ಜಂಕ್ಷನ್​ ಯಾವ ರೀತಿ ಬದಲಾವಣೆ ಸಾಧ್ಯ, ಸ್ಯಾಟ್​ಲೈಟ್ ಟೌನ್ ಯಾವ ರೀತಿ ಇರಬೇಕು. ಹೊಸ ಬೆಂಗಳೂರನ್ನು ನಿರ್ಮಾಣ ಮಾಡಲು ಯಾವ ರೀತಿ ಮಾಡಬೇಕು ಎಂಬ ಬಗ್ಗೆ ಸಲಹೆ ನೀಡಿದ ನಂತರ ಜಿಲ್ಲಾ ಕೇಂದ್ರಗಳಿಗೆ ವಿಸ್ತರಿಸಲು ಚಿಂತನೆ ಇದೆ. ಮೊದಲು ಬೆಂಗಳೂರು ಸಿಟಿ ಮಾಡಲು ಉದ್ದೇಶಿಸಲಾಗಿತ್ತು. ಆದರೆ, ಬೆಂಗಳೂರನ್ನು ಅಷ್ಟಾಗಿ ಬದಲಾವಣೆ ಮಾಡಲು ಸಾಧ್ಯವಿಲ್ಲ. ಬಿಎಂಆರ್​ಡಿ ವ್ಯಾಪ್ತಿಯಲ್ಲಿ ಈ ಡಿಸೈನ್ ಅಳವಡಿಸಲು ಚಿಂತನೆ ನಡೆಸಲಾಗಿದೆ. ಮುಂದಿನ ದಿನಗಳಲ್ಲಿ ನಗರಗಳೂ, ಟೌನ್​ಗಳು ಸೇರುತ್ತವೆ ಎಂದರು.

ಸರ್ಕಾರದ ನವ ಬೆಂಗಳೂರು ನಿರ್ಮಾಣ ಪರಿಕಲ್ಪನೆಗೆ ಸಹಾಯಕಾರಿಯಾಗುವಂತೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಬಿಬಿಎಂಪಿ ಹಾಗೂ ಬಿಎಂಆರ್‌ಡಿಎ ಇದರ ಡಿಸೈನ್ ಅಳವಡಿಸಿಕೊಳ್ಳುತ್ತಿರುವ ಮೊದಲ ಸಂಸ್ಥೆಯಾಗಿದೆ. ಇದು ವಿನ್ಯಾಸಕಾರರು, ನಾಗರಿಕರ ಸಹಕಾರದಲ್ಲಿ ನಡೆಯುವ ಯೋಜನೆಯಾಗಿದೆ. ಬೆಂಗಳೂರನ್ನು ಸುಂದರ ನಗರವಾಗಿಸುವ ಯೋಜನೆಯಾಗಿದ್ದು, ಜನರು ಪ್ರೀತಿಸುವಂತೆ ನಗರವನ್ನು ವಿನ್ಯಾಸ ಮಾಡಬೇಕು ಎಲ್ಲ ಸಾರ್ವಜನಿಕ ಸ್ಥಳಗಳನ್ನೂ ವಿನ್ಯಾಸ ಮಾಡಲಾಗುತ್ತದೆ ಎಂದು ಡಿಕೆಶಿ ಹೇಳಿದರು.

ಡಿಸಿಎಂ ಡಿಕೆಶಿ ಬಾಂಬ್:ಕಾರ್ಯಕ್ರಮದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಡಿಸಿಎಂ,ಶತ್ರುವಿನ ಶತ್ರು ಮಿತ್ರ ಎಂಬಂತೆ ಬಿಜೆಪಿ ಮತ್ತು ಜೆಡಿಎಸ್ ಒಂದಾಗುತ್ತಿದ್ದಾರೆ ಎಂದು ಮತ್ತೊಮ್ಮೆ ಬಾಂಬ್ ಸಿಡಿಸಿದ್ದಾರೆ. ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಮತ್ತು ಬಿಜೆಪಿ ನಾಯಕರು ಒಟ್ಟಾಗಿ ಆಪರೇಷನ್ ಸಿಂಗಾಪುರ ನಡೆಸ್ತಿದ್ದಾರೆ. ಬಿಜೆಪಿ ಹಾಗೂ ಜೆಡಿಎಸ್ ಸ್ನೇಹಿತರು ಸೇರಿ ಕೆಲವು ಕಾಂಗ್ರೆಸ್ ಶಾಸಕರಿಗೆ ವಿಮಾನದ ಟಿಕೆಟ್ ಬುಕ್ ಮಾಡಿದ್ದಾರೆ. ಬೆಂಗಳೂರು ಅಥವಾ ದೆಹಲಿಯಲ್ಲಿ ಸಭೆ ನಡೆಸಲು ಆಗಲಿಲ್ಲ. ಹಾಗಾಗಿ ಒಂದಷ್ಟು ವಿಮಾನದ ಟಿಕೆಟ್ ಬುಕ್ ಆಗಿರುವ ಮಾಹಿತಿ ಲಭಿಸಿದೆ ಎಂದು ಹೇಳಿದರು.

ಶತ್ರುವಿನ ಶತ್ರು ಮಿತ್ರರಾಗುತ್ತಿದ್ದಾರೆ. ಈ ಒಪ್ಪಂದದಲ್ಲಿ ಇಬ್ಬರೂ ಮುಂದುವರೆಯುವ ಸಾಧ್ಯತೆ ಇದೆ. ಕಾಂಗ್ರೆಸ್ ಪಕ್ಷ ಎಲ್ಲವನ್ನೂ ಟ್ರ್ಯಾಕ್ ಮಾಡುತ್ತಿದೆ ಎಂದ ಡಿಕೆ ಶಿವಕುಮಾರ್​, ಜೆಡಿಎಸ್-ಬಿಜೆಪಿ ನಾಯಕರ ನಡೆ ಟ್ರ್ಯಾಕ್ ಮಾಡುತ್ತಿದ್ದೇವೆ, ಮುಂದೆ ಏನು ಮಾಡುತ್ತಾರೆ ಎಂದು ನೋಡೊಣ ಎಂದರು.

ಇದನ್ನೂ ಓದಿ:ಮಳೆಗೆ ಜನ‌ಜೀವನ, ಆಸ್ತಿ-ಪಾಸ್ತಿ ಹಾನಿಯಾಗದಂತೆ ಮುನ್ನೆಚ್ಚರಿಕಾ ಕ್ರಮ ವಹಿಸಲು ಸೂಚನೆ: ಸಚಿವ ಕೃಷ್ಣ ಬೈರೇಗೌಡ

ABOUT THE AUTHOR

...view details