ಕರ್ನಾಟಕ

karnataka

ETV Bharat / state

ಬೆಂಗಳೂರಲ್ಲಿ ಇನ್ಮುಂದೆ ದಿನಕ್ಕೆ 1 ಲಕ್ಷ ವ್ಯಾಕ್ಸಿನ್ ವಿತರಣೆಗೆ ಬಿಬಿಎಂಪಿ ಗುರಿ - bengaluru vaccination camp

ಬೆಂಗಳೂರಲ್ಲಿ ಇನ್ಮುಂದೆ ದಿನಕ್ಕೆ 1 ಲಕ್ಷ ವ್ಯಾಕ್ಸಿನ್ ವಿತರಣೆ ಗುರಿ ಹೊಂದಿರುವ ಬಿಬಿಎಂಪಿಯು ಜನನಿಬಿಡ ಪ್ರದೇಶ, ಮಾರುಕಟ್ಟೆ ಬಸ್ ನಿಲ್ದಾಣಗಳಲ್ಲೂ ಲಸಿಕೆ ವಿತರಣೆಗೆ ಯೋಜನೆ ರೂಪಿಸಿದೆ.

bbmp-action-to-intensify-vaccination-process-in-bengaluru
ಬೆಂಗಳೂರಲ್ಲಿ ಇನ್ಮುಂದೆ ದಿನಕ್ಕೆ 1 ಲಕ್ಷ ವ್ಯಾಕ್ಸಿನ್ ವಿತರಣೆಗೆ ಬಿಬಿಎಂಪಿ ಗುರಿ

By

Published : Sep 1, 2021, 7:42 AM IST

ಬೆಂಗಳೂರು:ಬಿಬಿಎಂಪಿ, ವ್ಯಾಪ್ತಿಯ ಎಲ್ಲ ವಲಯಗಳ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವ್ಯಾಪ್ತಿಯಲ್ಲಿ ರಾಜ್ಯ ಸರ್ಕಾರದ ಮಾರ್ಗಸೂಚಿಯಂತೆ ಹೆಚ್ಚಿನ ತಂಡಗಳನ್ನು ರಚಿಸಿಕೊಂಡು, ಕೋವಿಡ್ -19 ಲಸಿಕಾಕರಣವನ್ನು ಯಶಸ್ವಿಯಾಗಿ ನಡೆಸಲು ಪಾಲಿಕೆ ನಿರ್ಧರಿಸಿದೆ. ಮುಂದಿನ ದಿನಗಳಲ್ಲಿ ಪಾಲಿಕೆ ವ್ಯಾಪ್ತಿಯಲ್ಲಿ ಎಲ್ಲ ಸಾರ್ವಜನಿಕರಿಗೆ ಕಡ್ಡಾಯವಾಗಿ ಕನಿಷ್ಠ ಒಂದು ಡೋಸ್ ಕೋವಿಡ್ -19 ಲಸಿಕೆ ನೀಡುವ ಗುರಿ ಹೊಂದಿದೆ.

ಲಸಿಕಾಕರಣದ ಪ್ರಕ್ರಿಯೆ ತೀವ್ರಗೊಳಿಸಲು ಬಿಬಿಎಂಪಿ ಈ ಎಲ್ಲ ಕ್ರಮಕ್ಕೆ ಮುಂದಾಗಿದೆ:

1. ಪಾಲಿಕೆಯ ಲಸಿಕಾಕರಣದ ಗುರಿಯನ್ನು ನಿತ್ಯ ಒಂದು ಲಕ್ಷಕ್ಕೆ ಪರಿಷ್ಕರಿಸಲಾಗಿದ್ದು, ಎಲ್ಲ ವಲಯಗಳಿಗೆ ಒಂದು ಲಕ್ಷದ ಗುರಿ ಹಾಗೂ ಬೇಡಿಕೆಗನುಗುಣವಾಗಿ ಹಂಚಿಕೆ ಮಾಡಲು ತೀರ್ಮಾನಿಸಿದೆ.

2. ನಗರ ಪ್ರಾಥಮಿಕ ಕೇಂದ್ರಗಳ ವ್ಯಾಪ್ತಿಯಲ್ಲಿ ಗುರುತಿಸಿರುವ ಸ್ಥಿರ ಲಸಿಕಾ ಕೇಂದ್ರಗಳು ಇಂದಿನಿಂದ (01-09-2021) ಅನ್ವಯವಾಗುವಂತೆ ಬೆಳಗ್ಗೆ 8.00ರಿಂದ ಮಧ್ಯಾಹ್ನ 2.30ರವರೆಗೆ ಕಾರ್ಯ ನಿರ್ವಹಿಸಲಿವೆ. ಒಂದು ವೇಳೆ, ಮಧ್ಯಾಹ್ನ 2.30ರ ನಂತರವೂ ಸಾರ್ವಜನಿಕರು ಸರತಿ ಸಾಲಿನಲ್ಲಿ ಕಾಯುತ್ತಿದ್ದರೆ ಲಸಿಕಾರಣದ ಅವಧಿ ಮುಂದುವರೆಸಲು ತೀರ್ಮಾ‌ನ.

ಬಿಬಿಎಂಪಿ ಸುತ್ತೋಲೆ

3. ಒಂದು ವೇಳೆ, ನಗರ ಪ್ರಾಥಮಿಕ ಕೇಂದ್ರಗಳ ವ್ಯಾಪ್ತಿಯಲ್ಲಿ ಲಸಿಕಾ ದಾಸ್ತಾನು ಮಧ್ಯಾಹ್ನ 2.30ರೊಳಗೆ ಖಾಲಿಯಾಗಿದ್ದಲ್ಲಿ ನಿಗದಿತ ತಂಡಗಳು ಸಾರ್ವಜನಿಕರಿಗೆ ಮರುದಿನದ ಲಸಿಕೆಗಾಗಿ ಟೋಕನ್‌ ನೀಡಲಿವೆ.

4. ಪ್ರತಿ ವಿಧಾನಸಭಾ ಕ್ಷೇತ್ರವಾರು ಗುರುತಿಸಿರುವ 2 ಲಸಿಕಾ ಕೇಂದ್ರಗಳು ಪ್ರತಿ ದಿನ ಬೆಳಗ್ಗೆ 8.00ರಿಂದ ರಾತ್ರಿ 9.00 ಗಂಟೆಯವರೆಗೆ ಕಾರ್ಯ ನಿರ್ವಹಿಸುವಂತೆ ಕ್ರಮ.

5. ಬಿಬಿಎಂಪಿ‌ ವ್ಯಾಪ್ತಿಯಲ್ಲಿ ಬೃಹತ್ ಲಸಿಕಾ ಶಿಬಿರಗಳಲ್ಲಿ ಪ್ರಾಯೋಗಿಕವಾಗಿ ಮೊದಲ ಹಂತದಲ್ಲಿ 3 ಕೇಂದ್ರಗಳಲ್ಲಿ ಬೆಳಗ್ಗೆ 8.00ರಿಂದ ರಾತ್ರಿ 9.00 ಗಂಟೆಯವರೆಗೆ ಲಸಿಕೆ ನೀಡಲಾಗುವುದು. ಅವಶ್ಯಕವಿದ್ದಲ್ಲಿ ಸಮಯ ವಿಸ್ತರಣೆ.

6. ಎಲ್ಲ ವಿಭಾಗದ ಆರೋಗ್ಯ ವೈದ್ಯಾಧಿಕಾರಿಗಳು ತಮ್ಮ ವ್ಯಾಪ್ತಿಯ ಕೊಳಗೇರಿ ನಿವಾಸಿಗಳು/ಕಡಿಮೆ ಆದಾಯ ಗುಂಪುಗಳು ಹಾಗೂ ಲಸಿಕಾಕರಣ ವಂಚಿತ ಪ್ರದೇಶದಲ್ಲಿ ವಿಶೇಷ ಕ್ಯಾಂಪ್‌ಗಳನ್ನು (ಮನೆಯ ಹತ್ತಿರ) ಎಲ್ಲ ಲಸಿಕೆಯನ್ನು ಅವಶ್ಯಕತೆಗೆ ಅನುಗುಣವಾಗಿ ಸಮಯ ನಿಗದಿಪಡಿಸಿಕೊಳ್ಳಲು ಕ್ರಮ.

7. ಹಿರಿಯ ನಾಗರಿಕರಿಗೆ, ಮನೆಯಲ್ಲಿ ಹಾಸಿಗೆ ಹಿಡಿದ ರೋಗಿಗಳಿಗೆ, ಎಇಎಫ್‌ಐ ಪ್ರಕರಣಗಳಿಗೆ ಸಮರ್ಪಕ ವೈದ್ಯಕೀಯ ಸೇವೆಗಳೊಂದಿಗೆ ವಿಶೇಷ ಲಸಿಕಾಕರಣದ (ಮನೆಯ ಹತ್ತಿರ) ಸೌಲಭ್ಯವನ್ನು ಒದಗಿಸಲು ಕ್ರಮ ವಹಿಸುವುದು.

ಬಿಬಿಎಂಪಿ ಸುತ್ತೋಲೆ

8. ಬಸ್ ನಿಲ್ದಾಣಗಳು, ರೈಲ್ವೆ ನಿಲ್ದಾಣಗಳು, ಮಾರುಕಟ್ಟೆಗಳು, ಸರ್ಕಾರಿ ಕಚೇರಿಗಳು, ಟೆಕ್ ‌ಪಾರ್ಕ್‌ಗಳು ಇತ್ಯಾದಿ ಸ್ಥಳಗಳಲ್ಲಿ ಪ್ರಮುಖ ಮೊಬೈಲ್ ಲಸಿಕಾ ಕೇಂದ್ರಗಳ ಮುಖಾಂತರ ಸಾರ್ವಜನಿಕರಿಗೆ ಲಸಿಕೆ ನೀಡಲು ಕ್ರಮ.

9. ವಾರದಲ್ಲಿ ಒಂದು ದಿನ ಲಸಿಕಾ ಮೇಳ ದಿನವೆಂದು ನಿಯೋಜಿಸಿ, ಸದರಿ ಮೇಳದಲ್ಲಿ ಕನಿಷ್ಠ 1.5 ರಿಂದ 2 ಲಕ್ಷ ಲಸಿಕಾಕರಣ ಗುರಿ ಸಾಧಿಸುವಂತೆ ಕ್ರಮ.

10. ಲಸಿಕಾ ಕೇಂದ್ರಕ್ಕೆ ಆಗಮಿಸುವ ಸಾರ್ವಜನಿಕರಿಗೆ ಕೋವಿಡ್ -19 ರೋಗಲಕ್ಷಣಗಳು ಕಂಡು ಬಂದಲ್ಲಿ ಮಾತ್ರ ಕೋವಿಡ್-19 ಪರೀಕ್ಷೆಗೆ ಒಳಪಡಿಸುವುದು. ಉಳಿದಂತೆ ಯಾವುದೇ ಕಾರಣಕ್ಕೂ ಕೋವಿಡ್-19 ಪರೀಕ್ಷೆ ಮಾಡಿಸಿಕೊಳ್ಳುವಂತೆ ಸಾರ್ವಜನಿಕರನ್ನು ಒತ್ತಾಯಿಸುವಂತಿಲ್ಲ.

ಇದನ್ನೂ ಓದಿ:ಜಗತ್ತಿನ ಭೂಪಟದಲ್ಲಿ ದೇಶವೊಂದು ಅಸ್ತಿತ್ವದಲ್ಲಿ ಇರುವುದಿಲ್ಲವೆಂದು ಮೊದಲೇ ಭವಿಷ್ಯ ನುಡಿದಿದ್ದೆ: ಕೋಡಿಮಠ ಶ್ರೀ

ABOUT THE AUTHOR

...view details