ಬೆಂಗಳೂರು: ಬಿಬಿಎಂಪಿ ಖಜಾನೆ ಭರ್ತಿ ಮಾಡಲು ಮತ್ತೆ ಜಾಹೀರಾತಿನ ಮೊರೆ ಹೋಗಿದ್ದು, ಜಾಹೀರಾತು ಬೈಲಾಗೆ ತಿದ್ದುಪಡಿಗೆ ತರಲು ಬಿಬಿಎಂಪಿ ಮುಂದಾಗಿದೆ. ಮುಂದಿನ ಬಜೆಟ್ನಲ್ಲಿ ಹೊಸ ಜಾಹೀರಾತು ನಿಯಮ ಜಾರಿಗೆ ಬಿಬಿಎಂಪಿ ಚಿಂತನೆ ಮಾಡಿದೆ. ಈ ಸಂಬಂಧ ಸರ್ಕಾರಕ್ಕೆ ವರದಿಯನ್ನು ಪಾಲಿಕೆ ಸಲ್ಲಿಸಿದೆ.
ಹೊಸ ಜಾಹೀರಾತು ನೀತಿಯಲ್ಲಿ ನಗರದಲ್ಲಿ ಯಾವ ಯಾವ ಪ್ರದೇಶದಲ್ಲಿ ಅವಕಾಶ ನೀಡಬೇಕು. ಎಷ್ಟು ದರ ನಿಗದಿ ಮಾಡಬೇಕು. ಸದ್ಯ ಇರೋ ಪಿಪಿಪಿ ಮಾಡೆಲ್ ಯಾವ ನೀತಿ ಇರಬೇಕು. ಹೋಲ್ಡಿಂಗ್ಗಳಿಗೆ ಪ್ರತ್ಯೇಕ ನಿಯಮ ಜಾರಿ. ಬಿಬಿಎಂಪಿಯಿಂದಲೇ ಜಾಹೀರಾತು ಸ್ಥಳ ನಿಗದಿ ಮಾಡಬೇಕು ಎಂದು ವರದಿಯಲ್ಲಿ ಕೇಳಲಾಗಿದೆ.
ಹೋರ್ಡಿಂಗ್ ಗಳಿಗೆ ಜಿಪಿಎಸ್ ಅಳವಡಿಕೆ:ಪಾಲಿಕೆಯು ಸರ್ಕಾರಕ್ಕೆ ಈ ಬಗ್ಗೆ ಸಲ್ಲಿಸಿರುವ ವರದಿಯಲ್ಲಿ ಪ್ರತಿ ಜಾಹೀರಾತು ಹೋರ್ಡಿಂಗ್‌ಗೂ ಪ್ರತ್ಯೇಕ ಆರ್‌ಎಫ್‌ಐಡಿ ಸಂಖ್ಯೆ ನಿಗದಿ ಮಾಡಬೇಕು. ಹಾಗೆ ನಿಗದಿತ ಹೋರ್ಡಿಂಗ್ ಗೆ ಜಿಪಿಎಸ್ ಅಳವಡಿಕೆಗೆ ತೀರ್ಮಾನ ಜೊತೆಗೆ ನಿರ್ದಿಷ್ಟ ಜಾಹೀರಾತು ಫಲಕಕ್ಕೆ ಮಾತ್ರ ಅನುಮತಿಗೆ ತೀರ್ಮಾನ ಮಾಡುವಂತೆ ವರದಿಯಲ್ಲಿ ಉಲ್ಲೇಖಿಸಿದೆ. ಮತ್ತು ಹರಾಜಿನ ಮೂಲಕ ಜಾಹೀರಾತು ಪ್ರದರ್ಶಕರಿಗೆ ಅನುಮತಿ ನೀಡುವ ಕುರಿತು ಉಲ್ಲೇಖಿಸಲಾಗಿದೆ.
ಇದನ್ನೂ ಓದಿ;ನಕಲಿ ನಂಬರ್ ಪ್ಲೇಟ್ ಬಳಸಿದ್ರೆ ಕ್ರಿಮಿನಲ್ ಕೇಸ್ : ವಿಶೇಷ ಸಂಚಾರ ಆಯುಕ್ತರ ಖಡಕ್ ಎಚ್ಚರಿಕೆ
ಇದನ್ನೂ ಓದಿ:ಟರ್ಕಿ ಭೂಕಂಪದಲ್ಲಿ ಸಿಲುಕಿರುವ ಕನ್ನಡಿಗರ ಸುರಕ್ಷತೆಗೆ ಎಲ್ಲ ಕ್ರಮ ಕೈಗೊಳ್ಳುತೇವೆ: ಸಿಎಂ ಬೊಮ್ಮಾಯಿ