ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಕಾನೂನು ಗಾಳಿಗೆ ತೂರಿ, ಪ್ಲಾಸ್ಟಿಕ್ ಬಳಸುತ್ತಿದ್ದವರಿಂದ ಕೋಟ್ಯಂತರ ರೂ. ದಂಡ ವಸೂಲಿ ಮಾಡಲಾಗಿದೆ. ಕಳೆದ ಏಪ್ರಿಲ್ ನಿಂದ, ಡಿಸೆಂಬರ್ ವರೆಗೆ 1.84 ಕೋಟಿ ರೂ. ದಂಡ ವಿಧಿಸಿ, 47 ಸಾವಿರ ಕೆಜಿ ಪ್ಲಾಸ್ಟಿಕ್ ವಶಕ್ಕೆ ಪಡೆಯಲಾಗಿದೆ.
ಪ್ಲಾಸ್ಟಿಕ್ ಬಳಕೆದಾರರಿಂದ ಬಿಬಿಎಂಪಿ 1.84 ಕೋಟಿ ರೂ. ದಂಡ ಸಂಗ್ರಹ.. - ಪ್ಲಾಸ್ಟಿಕ್ ಬಳಕೆದಾರರಿಂದ ಬಿಬಿಎಂಪಿ ದಂಡ ಸಂಗ್ರಹ..
ಬಿಬಿಎಂಪಿ ವ್ಯಾಪ್ತಿಯಲ್ಲಿ ಕಾನೂನು ಗಾಳಿಗೆ ತೂರಿ, ಪ್ಲಾಸ್ಟಿಕ್ ಬಳಸುತ್ತಿದ್ದವರಿಂದ ಕೋಟ್ಯಂತರ ರೂ. ದಂಡ ವಸೂಲಿ ಮಾಡಲಾಗಿದೆ. ಕಳೆದ ಏಪ್ರಿಲ್ ನಿಂದ, ಡಿಸೆಂಬರ್ ವರೆಗೆ 1.84 ಕೋಟಿ ರೂ. ದಂಡ ವಿಧಿಸಿ, 47 ಸಾವಿರ ಕೆಜಿ ಪ್ಲಾಸ್ಟಿಕ್ ವಶಕ್ಕೆ ಪಡೆಯಲಾಗಿದೆ.
ಇದೇ ಅವಧಿಯಲ್ಲಿ ಕಸ ವಿಂಗಡನೆ ಮಾಡದ ಬಾರ್, ಹೋಟೆಲ್, ವಾಣಿಜ್ಯ ಉದ್ಯಮಗಳಿಗೆ 28.95 ಲಕ್ಷ ರೂ. ದಂಡ ವಿಧಿಸಲಾಗಿದೆ. ಒಟ್ಟು 55,371 ಮಳಿಗೆಗಳಿಗೆ ದಾಳಿ ಮಾಡಿರುವ ಆರೋಗ್ಯ ಅಧಿಕಾರಿಗಳು 30.85 ಲಕ್ಷ ದಂಡ ವಿಧಿಸಿದ್ದು, 28.95 ಲಕ್ಷ ರೂ. ಸಂಗ್ರಹಿಸಲಾಗಿದೆ.
ಕಸ ಸಂಗ್ರಹಿಸುವ ವಿಧಾನದಲ್ಲಿ ಬದಲಾವಣೆ :ಈ ವರೆಗೆ ಉದ್ಯಮ ಅಥವಾ ಹೋಟೆಲ್ಗಳಲ್ಲಿ 10 ಕೆಜಿ ಗಿಂತ ಹೆಚ್ಚು ಕಸ ಉತ್ಪತ್ತಿಯಾದರೆ, ಬಿಬಿಎಂಪಿ ಕಸ ತೆಗೆದುಕೊಳ್ಳದೆ ಬಲ್ಕ್ ಕಸ ಉತ್ಪಾದಕರು ಎಂದು ವಿಂಗಡಿಸಿ, ಖಾಸಗಿ ಗುತ್ತಿಗೆದಾರರು ಸಂಗ್ರಹಿಸುತ್ತಿದ್ದರು. ಆದರೆ ಇನ್ನು ಮುಂದೆ ನೂರು ಕೆಜಿ ಯಷ್ಟು ಕಸವನ್ನು ಬಿಬಿಎಂಪಿಯೇ ಸಂಗ್ರಹಿಸಲಿದ್ದು, ಈ ಬಗ್ಗೆ ಕೌನ್ಸಿಲ್ ಸಭೆಯಲ್ಲಿ ಘನತ್ಯಾಜ್ಯ ನಿರ್ವಹಣೆ ನಿಯಮ-2016 ಕ್ಕೆ ತಿದ್ದುಪಡಿ ತರಲು ಬಿಬಿಎಂಪಿ ಮುಂದಾಗಿದೆ.