ಕರ್ನಾಟಕ

karnataka

ETV Bharat / state

ಸಿಸಿಬಿ ಕಚೇರಿಗೆ ದಿಢೀರ್​​​​​ ಭೇಟಿ ನೀಡಿದ ಪೊಲೀಸ್​​ ಕಮೀಷನರ್​​ ಭಾಸ್ಕರ್​ ರಾವ್​ - police commissioner bhaskar rai

ಬೆಂಗಳೂರಿನ ಸಿಸಿಬಿ ಕಚೇರಿಗೆ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್​ ದಿಢೀರ್​ ಭೇಟಿ ಕೊಟ್ಟಿದ್ದು, ಪ್ರಮುಖ ಕೇಸ್​ಗಳ ಬಗ್ಗೆ ಚರ್ಚೆ ನಡೆಸಿದರು. ಕಚೇರಿ ಸುತ್ತಲೂ ಸ್ವಚ್ಛತೆ ಇಲ್ಲದೇ ಇರುವುದಕ್ಕೆ ಅಧಿಕಾರಿಗಳ ವಿರುದ್ಧ ಗರಂ ಆದರು. ತಕ್ಷಣ ಆಯುಕ್ತ ಸಂದೀಪ ಪಾಟೀಲ್​ ಸೂಕ್ತ ಕ್ರಮಕ್ಕೆ ತಾಕೀತು ಮಾಡಿದರು.

Baskar Rao visits CCB office
ಪೊಲೀಸ್ ಕಮೀಷನರ್ ಭಾಸ್ಕರ್

By

Published : Nov 30, 2019, 3:57 PM IST

ಬೆಂಗಳೂರು:ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ಸಿಸಿಬಿ ಕಚೇರಿಗೆ ದಿಢೀರ್​ ಭೇಟಿ ನೀಡಿದ್ದಾರೆ.

ಸಿಸಿಬಿ ಕಚೇರಿಗೆ ದಿಢೀರ್​ ಬೇಟಿ

ಕಚೇರಿಗೆ ಭೇಟಿ ನೀಡುತ್ತಿದ್ದಂತೆ ಸುತ್ತಮುತ್ತ ಕಸ, ಹಳೆ ವಾಹನ ನಿಲ್ಲಿಸಿರುವುದನ್ನು‌‌ ಕಂಡು ಅಧಿಕಾರಿಗಳ ವಿರುದ್ಧ ಗರಂ ಆದ ಘಟನೆಯೂ ನಡೆಯಿತು.

ಈ ವೇಳೆ ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್, ಕಚೇರಿಯ ಸುತ್ತಮುತ್ತ ಸ್ವಚ್ಛತೆ ಕಾಪಾಡಲು‌ ಸೂಕ್ತ ಕ್ರಮ ಕೈಗೊಳ್ಳುವಂತೆ ತಾಕೀತು ಮಾಡಿದರು.

ಗಂಭೀರ ಸ್ವರೂಪ ಪಡೆದುಕೊಂಡಿರುವ ಹನಿಟ್ರ್ಯಾಪ್ ಹಾಗೂ ಕೆಪಿಎಲ್ ಮ್ಯಾಚ್ ಫಿಕ್ಸಿಂಗ್‌ ಕೇಸ್​ಗಳ ತನಿಖಾ ಪ್ರಗತಿ ಬಗ್ಗೆ ಸಿಸಿಬಿ ಅಧಿಕಾರಿಳೊಂದಿಗೆ ಚರ್ಚೆ ನಡೆಸಿದರು.

ABOUT THE AUTHOR

...view details