ಬೆಂಗಳೂರು :ಮಾಜಿ ಸಚಿವ ವರ್ತೂರು ಪ್ರಕಾಶ್ ಅಪಹರಣ ಮತ್ತು ಹಲ್ಲೆ ಪ್ರಕರಣ ಸಂಬಂಧ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದಾರೆ.
ಮಾಜಿ ಸಚಿವ ವರ್ತೂರು ಪ್ರಕಾಶ್ ಅಪಹರಣ ಪ್ರಕರಣ ; ತನಿಖೆ ಮುಂದುವರೆದಿದೆ ಎಂದ ಬೊಮ್ಮಾಯಿ - ಮಾಜಿ ಸಚಿವ ವರ್ತೂರ್ ಪ್ರಕಾಶ್ಗೆ ರಕ್ಷಣೆ ನೀಡುವಂತೆ ಬೊಮ್ಮಾಯೊ ಸೂಚನೆ
ಸಚಿವ ಸಂಪುಟ ಪುನಾರಚನೆ ವಿಚಾರ ಮಾತನಾಡಿ, ಅದು ಹೈಕಮಾಂಡ್ ಹಾಗೂ ವರಿಷ್ಠರಿಗೆ ಬಿಟ್ಟ ವಿಚಾರ. ಅದನ್ನು ಸಿಎಂ ನಿರ್ಧಾರ ಮಾಡ್ತಾರೆ. ಅದರ ಬಗ್ಗೆ ನಾನು ಯಾವುದೇ ಪ್ರತಿಕ್ರಿಯೆ ನೀಡಲ್ಲ. ಯು ಆರ್ ಆಸ್ಕಿಂಗ್ ವ್ರಾಂಗ್ ಪರ್ಸನ್..
ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿಕೆ
ಇಂದು ಮಾಜಿ ಸಚಿವ ವರ್ತೂರು ಪ್ರಕಾಶ್ ಬಂದಿದ್ದರು. ಅವರ ಕಿಡ್ನ್ಯಾಪ್ ವಿಚಾರ ಕುರಿತು ಮಾತಾಡಿ ಪೊಲೀಸರಿಗೆ ಗೊತ್ತಾದ್ರೆ ಜೀವ ಬೆದರಿಕೆ ಇದೆ.. ಕಳೆದ ಬುಧವಾರ ಕಿಡ್ನ್ಯಾಪ್ ಮಾಡಿ ಅವರಿಗೆ ಹಲ್ಲೆ ಮಾಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ ಎಂದು ತಿಳಿಸಿದ್ದಾರೆ.
ಸದ್ಯ ಕೋಲಾರ ಎಸ್ಪಿ ಹಾಗೂ ಬೆಂಗಳೂರು ಕಮಿಷನರ್ಗೆ ರಕ್ಷಣೆ ಕೊಡಲು, ಹಾಗೆಯೇ ಆದಷ್ಟು ಬೇಗ ಆರೋಪಿಗಳನ್ನ ಬಂಧಿಸಲು ಸೂಚಿಸಿದ್ದೇನೆ. ಕೋಲಾರ ಪೊಲೀಸರು ಹಾಗೂ ಬೆಂಗಳೂರು ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಆದಷ್ಟು ಬೇಗ ಆರೋಪಿಗಳನ್ನ ಬಂಧಿಸ್ತಾರೆ ಎಂದ್ರು.