ಬೆಂಗಳೂರು :21-22ನೇ ಸಾಲಿಗೆ ಎರಡು ಕೋಟಿ ರೂ. ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನಕ್ಕೆ ಕ್ರಿಯಾ ಯೋಜನೆ ಸಿದ್ಧಪಡಿಸಲು ಸಹಮತಿ ನೀಡಲಾಗಿದೆ. ಅಲ್ಲದೆ ಯಾವ ಶಾಸಕರಿಗೂ ಸಮಸ್ಯೆಯಾಗದಂತೆ ನೋಡಿಕೊಳ್ಳಲು ಸೂಚಿಸಲಾಗಿದೆ ಎಂದು ಸಭಾಪತಿ ಬಸವರಾಜ್ ಹೊರಟ್ಟಿ ತಿಳಿಸಿದರು. ಶಾಸಕರ ಅನುದಾನ ಬಿಡುಗಡೆ ಕುರಿತು ಮಹತ್ವದ ಸಭೆ ನಡೆಸಿದ ಬಳಿಕ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ವಿಧಾನ ಪರಿಷತ್ ಸದಸ್ಯರ ಅನುದಾನ ಬಿಡುಗಡೆ ಮಾಡದಿರುವ ಬಗ್ಗೆ ಅಸಮಾಧಾನ ಇತ್ತು. ಈ ಸಂಬಂಧ ಅಧಿಕಾರಿಗಳನ್ನ ಕರೆದು ಸಲಹೆ ನೀಡಲಾಗಿತ್ತು.
ಅಧಿಕಾರಿಗಳು ಕೆಲಸ ಮಾಡದಿದ್ರೆ ಕ್ರಮದ ಎಚ್ಚರಿಕೆ ನೀಡಲಾಗಿತ್ತು. ಈ ಸಂಬಂಧ ಐದು ಜನರ ಸಮಿತಿ ಮಾಡಲಾಗಿತ್ತು. ಇದೇ ಮೊದಲ ಬಾರಿಗೆ ಯಶಸ್ವಿಯಾಗಿ ನಿರ್ಣಯ ಕೈಗೊಳ್ಳಲಾಗಿದೆ ಎಂದರು. 2020-21ನೇ ಸಾಲಿನಲ್ಲಿ 300 ಕೋಟಿ ರೂ. ಹೆಚ್ಚುವರಿ ಬಿಡುಗಡೆ ಮಾಡಲಾಗಿದೆ. 2019-20ನೇ ಸಾಲಿನ ಬಿಡುಗಡೆಗೆ ಬಾಕಿ ಇರುವ 300 ಕೋಟಿ ರೂ. ಹೊಂದಾಣಿಕೆ ಮಾಡಿಕೊಳ್ಳುವುದಾಗಿ ಆರ್ಥಿಕ ಇಲಾಖೆ ತಿಳಿಸಿದೆ. 2018-19ನೇ ಸಾಲಿಗೆ ಕೂಡಲೇ 127.69 ಕೋಟಿ ಬಿಡುಗಡೆಗೆ ಪ್ರಸ್ತಾವನೆ ಸಲ್ಲಿಸಲು ಹೇಳಲಾಗಿದೆ. ಮೊದಲು ಕ್ಷೇತ್ರವಾರು ಬಿಡುಗಡೆ ಮಾಡಲಾಗುತ್ತಿತ್ತು.
ಆದರೆ, ಈಗ ಜಿಲ್ಲಾವಾರು ಬಿಡುಗಡೆಗೆ ಸೂಚನೆ ನೀಡಲಾಗಿದೆ. ಶಾಸನ ಸಭೆಯಿಂದ ಯಾವುದೇ ಸಮಸ್ಯೆ ಆಗದಂತೆ ಆಜ್ಞೆ ಹೊರಡಿಸಲಾಗುವುದು. ಯಾವುದೇ ಶಾಸಕರಿಗೂ ಸಮಸ್ಯೆ ಆಗದಂತೆ ಕ್ರಮವಹಿಸಲಾಗಿದೆ. ಒಂದು ವಾರದಲ್ಲಿ ಈ ಸಂಬಂಧ ಹೊಸ ಆದೇಶ ಹೊರಡಿಸಲಾಗುವುದು ಎಂದರು. ಕೋವಿಡ್, ಪ್ರವಾಹ ಯಾವುದೇ ಇದ್ರೂ ಅನುದಾನ ಬಳಕೆ ಮಾಡಲು ಹಣ ಮೀಸಲಿಡಬೇಕು. ಶಾಸಕರು ಸೂಚಿಸಿದ ಕಾಮಗಾರಿ ಮಾಡುವಂತೆ ಸೂಚಿಸಲಾಗುತ್ತದೆ. ಯಾವುದೇ ಜಿಲ್ಲಾಧಿಕಾರಿ ತಪ್ಪು ಮಾಡಿದ್ರೆ ಕ್ರಮಕೈಗೊಳ್ಳುವ ಕೆಲಸ ಮಾಡಲಾಗುವುದು. ಕಾಮಗಾರಿ ಮಾಡಲು ತೊಡಕು ಅಂತಾ ಅಧಿಕಾರಿಗಳು ನೆಪ ಹೇಳ್ತಾರೆ.