ಕರ್ನಾಟಕ

karnataka

ETV Bharat / state

ಪೆಗಾಸಸ್ ವಿವಾದದಲ್ಲಿ ವಿದೇಶಿ ಮಾಧ್ಯಮಗಳ ಕೈವಾಡ: ಬೊಮ್ಮಾಯಿ

ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಮುಂದುವರೆಯಲಿದ್ದಾರೆ. ಈ ಬಗ್ಗೆ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಈಗಾಗಲೇ ಸ್ಪಷ್ಟನೆ ನೀಡಿದ್ದಾರೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.

Basavaraj-bommai
ಗೃಹ ಸಚಿವ ಬಸವರಾಜ್ ಬೊಮ್ಮಾಯಿ

By

Published : Jul 21, 2021, 9:24 PM IST

ಬೆಂಗಳೂರು: ಪೆಗಾಸಸ್ ವಿವಾದದಲ್ಲಿ ವಿದೇಶಿ ಮಾಧ್ಯಮಗಳ ಕೈವಾಡವಿದೆ. ಇವುಗಳು ಭಾರತದ ವಿರುದ್ಧ ತಪ್ಪು ಮಾಹಿತಿಗಳನ್ನು ರವಾನಿಸುತ್ತಿವೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.

ಪೆಗಾಸಸ್ ವಿವಾದ ಸಂಬಂಧ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ವಿದೇಶಿ ಮಾಧ್ಯಮಗಳು ಭಾರತದ ವಿರುದ್ಧ ತಪ್ಪು ಮಾಹಿತಿಗಳ ಅಭಿಯಾನ ಆರಂಭಿಸಿವೆ. ಈ ಹಿಂದೆಯೂ ಕೂಡ ಸ್ವಿಸ್ ಬ್ಯಾಂಕ್ ಖಾತೆ ಕುರಿತಂತೆ ಕೂಡ ಇದೇ ರೀತಿ ಆಗಿತ್ತು ಎಂದು ತಿಳಿಸಿದರು.

ರಾಜ್ಯದಲ್ಲಿ ಸಿಎಂ ಬಲಶಾಲಿ: ಈ ವೇಳೆ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರ ಕುರಿತು ಮಾತನಾಡಿ, ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಮುಂದುವರೆಯಲಿದ್ದಾರೆ. ಈ ಬಗ್ಗೆ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಈಗಾಗಲೇ ಸ್ಪಷ್ಟನೆ ನೀಡಿದ್ದಾರೆ. ರಾಜ್ಯದಲ್ಲಿ ರಾಜಕೀಯ ಅಸ್ಥಿರತೆ ಉಂಟು ಮಾಡಲು ಈ ರೀತಿಯ ವದಂತಿ ಹಾಗೂ ಊಹಾಪೋಹಗಳನ್ನು ಸೃಷ್ಟಿಸಲಾಗುತ್ತಿದೆ. ರಾಜ್ಯದಲ್ಲಿರುವ ಸಿಎಂ ಬಲಶಾಲಿಯಾಗಿದ್ದಾರೆ. ಅವರೇ ನಮ್ಮ ನಾಯಕರಾಗಿದ್ದಾರೆ ಎಂದು ತಿಳಿಸಿದರು.

ಇದನ್ನೂ ಓದಿ:ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಚರ್ಚೆ: ಸಂಪುಟ ಸಹೋದ್ಯೋಗಿಗಳಲ್ಲಿ ಆತಂಕ

ABOUT THE AUTHOR

...view details