ಕರ್ನಾಟಕ

karnataka

ETV Bharat / state

KAS ಅಧಿಕಾರಿಗಳನ್ನು IAS​ಗೆ ಸೇರ್ಪಡಿಸಿವಂತೆ ರಾಜ್ಯ ಕೇಡರ್ ಪರಿಶೀಲಿಸಲು ಕೇಂದ್ರಕ್ಕೆ ಸಿಎಂ ಮನವಿ - jitendra singh talk about karnataka

ದೆಹಲಿಯ ಭೇಟಿಯಲ್ಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ (ಸ್ವತಂತ್ರ ನಿರ್ವಹಣೆ),ಬಾಹ್ಯಾಕಾಶ ಖಾತೆ ರಾಜ್ಯ ಸಚಿವ ಡಾ. ಜಿತೇಂದ್ರ ಸಿಂಗ್ ಅವರನ್ನು ಭೇಟಿ ಮಾಡಿ ಅರ್ಧಗಂಟೆಗಳ ಕಾಲ ರಾಜ್ಯದ ಬಗ್ಗೆ ಚರ್ಚೆ ನಡೆಸಿದ್ದಾರೆ.

basavaraj-bommai-met-jitendra-singh-in-delhi
KAS ಅಧಿಕಾರಿಗಳನ್ನು IAS​ಗೆ ಸೇರ್ಪಡಿಸಿವಂತೆ ರಾಜ್ಯ ಕೇಡರ್ ಪರಿಶೀಲಿಸಲು ಕೇಂದ್ರಕ್ಕೆ ಸಿಎಂ ಮನವಿ

By

Published : Sep 9, 2021, 2:20 AM IST

ಬೆಂಗಳೂರು: ಕರ್ನಾಟಕ ಆಡಳಿತ ಸೇವೆಯ ಅಧಿಕಾರಿಗಳನ್ನು ಐ.ಎ.ಎಸ್‌.ಗೆ ಸೇರ್ಪಡೆ ಮಾಡಿಕೊಳ್ಳುವ ವಿಚಾರ ಕುರಿತಂತೆ ಕೇಂದ್ರ ಸಚಿವ ಡಾ. ಜಿತೇಂದ್ರ ಸಿಂಗ್ ಜೊತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಹತ್ವದ ಮಾತುಕತೆ ನಡೆಸಿದ್ದಾರೆ.

ಪ್ರಸ್ತುತ ದೆಹಲಿಯ ಭೇಟಿಯಲ್ಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ (ಸ್ವತಂತ್ರ ನಿರ್ವಹಣೆ),ಬಾಹ್ಯಾಕಾಶ ಖಾತೆ ರಾಜ್ಯ ಸಚಿವ ಡಾ. ಜಿತೇಂದ್ರ ಸಿಂಗ್ ಅವರನ್ನು ಭೇಟಿ ಮಾಡಿ ಅರ್ಧಗಂಟೆಗಳ ಕಾಲ ಸಭೆ ನಡೆಸಿ, ಸಿಬ್ಬಂದಿ ಮತ್ತು ವಿಜ್ಞಾನ ಸಚಿವಾಲಯಗಳಿಗೆ ಸಂಬಂಧಿಸಿದ ವಿಚಾರಗಳ ಬಗ್ಗೆ ಚರ್ಚಿಸಿದರು.ಈ ಚರ್ಚೆಯ ವೇಳೆ, ಮುಖ್ಯಮಂತ್ರಿಯವರು ರಾಜ್ಯ ಸರ್ಕಾರ ಮಾಡಿದ ಎಲ್ಲ ಮನವಿಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸಿದ ಸಿಬ್ಬಂದಿ ಮತ್ತು ತರಬೇತಿ ಇಲಾಖೆ (ಡಿಓಪಿಟಿ)ಯನ್ನು ಪ್ರಶಂಸಿಸಿದರು. ಹಾಗೆ ಅವರು ರಾಜ್ಯ ಕೇಡರ್ ಪರಿಶೀಲನೆ ನಡೆಸಲು ನೆರವು ಕೋರಿದರು. ಕರ್ನಾಟಕ ಆಡಳಿತ ಸೇವೆಯ ಅಧಿಕಾರಿಗಳನ್ನು ಐ.ಎ.ಎಸ್‌.ಗೆ ಸೇರ್ಪಡೆಮಾಡಿಕೊಳ್ಳುವ ವಿಚಾರ ಕುರಿತಂತೆಯೂ ಬೊಮ್ಮಾಯಿ ಚರ್ಚಿಸಿದರು.

ಡಾ. ಜಿತೇಂದ್ರ ಸಿಂಗ್ ಸಿಎಂಗೆ ಪ್ರತಿಕ್ರಿಯಿಸಿ, ವಿವಿಧ ರಾಜ್ಯಗಳಿಗೆ ಸಂಬಂಧಿಸಿದ ಎಲ್ಲಾ ಸೇವಾ ವಿಚಾರಗಳ ವಿಲೇವಾರಿ ಮಾಡುವಲ್ಲಿ ಡಿಒಪಿಟಿ ಪ್ರಾಮಾಣಿಕವಾಗಿದ್ದು, ಅಗತ್ಯವಿರುವ ಪ್ರಕ್ರಿಯೆಗಳು ಮತ್ತು ಅವಶ್ಯಕತೆಗಳನ್ನು ಆಯಾ ರಾಜ್ಯ ಸರ್ಕಾರಗಳು ಪೂರೈಸಿದ ತಕ್ಷಣ, ಡಿಒಪಿಟಿ ಪ್ರಕ್ರಿಯೆಯನ್ನು ತ್ವರಿತವಾಗಿ ಮುಂದುವರಿಸುತ್ತದೆ ಎಂದು ಅವರು ಮುಖ್ಯಮಂತ್ರಿಗೆ ಭರವಸೆ ನೀಡಿದರು.

ಬೆಂಗಳೂರಿನಲ್ಲಿ ತನ್ನ ಪ್ರಧಾನ ಕಚೇರಿಯನ್ನು ಹೊಂದಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಯ ವಿವಿಧ ಚಟುವಟಿಕೆಗಳ ಕುರಿತು ಸಿಎಂ ಮಾತನಾಡಿದ ಸಿಂಗ್​ , ಕ್ಷೇತ್ರವಾರು ಮತ್ತು ಅಭಿವೃದ್ಧಿ ಯೋಜನೆಗಳಲ್ಲಿ ಬಳಸಬಹುದಾದ ಬಾಹ್ಯಾಕಾಶ ತಂತ್ರಜ್ಞಾನದ ವಿವಿಧ ಅನ್ವಯಿಕಗಳನ್ನು ಅವರು ಮುಖ್ಯಮಂತ್ರಿಗಳಿಗೆ ವಿವರಿಸಿದರು. ಬೆಂಗಳೂರು ಪ್ರಮುಖ ಬಾಹ್ಯಾಕಾಶ ಸಂಶೋಧನಾ ಕೇಂದ್ರಗಳಲ್ಲಿ ಒಂದಾಗಿರುವ ಹೆಮ್ಮೆಯನ್ನು ಹೊಂದಿದೆ ಮತ್ತು ವಿಶ್ವದಾದ್ಯಂತದ ವೈಜ್ಞಾನಿಕ ಸಮುದಾಯದ ಮನ್ನಣೆಯನ್ನು ಪಡೆಯುತ್ತಿದೆ ಎಂದು ಇಸ್ರೋ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದರು.

ABOUT THE AUTHOR

...view details