ಕರ್ನಾಟಕ

karnataka

ETV Bharat / state

ಇಂದಿನ ರಾಜಕಾರಣಿಗಳಿಗೆ ಬಸವಣ್ಣ ಮಾದರಿ: ಬಸವ ಮರುಳಸಿದ್ದ ಸ್ವಾಮೀಜಿ - undefined

ಕಿರೀಟ ಧರಿಸಿರುವ ಬಸವಣ್ಣ ಈಗಿನ ರಾಜಕಾರಣಿಗಳಿಗೆ ಆದರ್ಶವಾಗಿದ್ದಾರೆ ಎಂದು ಬಸವ ಮರುಳ ಸಿದ್ದ ಸ್ವಾಮೀಜಿ ಹೇಳಿದ್ದಾರೆ.

ಬಸವಣ್ಣ ಈಗಿನ ರಾಜಕಾರಣಿಗಳಿಗೆ ಆದರ್ಶ:ಬಸವ ಮರುಳಸಿದ್ದ ಸ್ವಾಮೀಜಿ

By

Published : May 5, 2019, 5:13 AM IST

ಬೆಂಗಳೂರು/ದುಬೈ: ಭ್ರಷ್ಟಾಚಾರ ರಹಿತ ಅಧಿಕಾರ ನಡೆಸಿದ ಬಸವಣ್ಣ ಇಂದಿನ ರಾಜಕಾರಣಿಗಳಿಗೆ ಆದರ್ಶರಾಗಿದ್ದಾರೆ ಎಂದು ಶಿವಮೊಗ್ಗ ಬಸವ ಕೇಂದ್ರದ ಬಸವ ಮರುಳ ಸಿದ್ದ ಸ್ವಾಮೀಜಿ ಅಭಿಪ್ರಾಯಪಟ್ಟಿದ್ದಾರೆ.

ಬಸವ ಸಮಿತಿ ವತಿಯಿಂದ ದುಬೈನಲ್ಲಿ ಜೆಎಸ್​ಎಸ್​ ಇಂಟರ್ ನ್ಯಾಷನಲ್ ಪ್ರೈವೇಟ್ ಸ್ಕೂಲ್​ನಲ್ಲಿ ಏರ್ಪಡಿಸಿದ್ದ ವಿಶ್ವಗುರು ಬಸವಣ್ಣ ಅವರ 886 ನೇ ಜಯಂತಿ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಕಿರೀಟ ಧರಿಸಿರುವ ಬಸವಣ್ಣ ಒಬ್ಬ ರಾಜಕಾರಣಿಯಾಗಿ ಈಗಿನ ರಾಜಕಾರಣಿಗಳಿಗೆ ಆದರ್ಶವಾಗಿದ್ದಾರೆ. ಅನೇಕರು ಕಿರೀಟ ಹಾಕಿರುವ ಬಸವಣ್ಣನ ಮೂರ್ತಿ ಬಗ್ಗೆ ಆಕ್ಷೇಪ ವ್ಯಕ್ತಪಡಿಸುತ್ತಾರೆ. ಇಷ್ಟ ಲಿಂಗ ಪೂಜೆ ಮಾಡುವ ಬಸವಣ್ಣ ಧಾರ್ಮಿಕವಾಗಿ ಸರಳತೆ ಆಚರಣೆಯನ್ನು ತೋರಿಸಿಕೊಟ್ಟರು. ವಚನ ರಚನೆ ಮಾಡುವ ಮೂಲಕ ಕಠಿಣ ವಿಷಯಗಳನ್ನು ಸರಳ ಭಾಷೆಯಲ್ಲಿ ಹೇಳಿ ಎಲ್ಲರಿಗೂ ತಿಳಿಯುವಂತೆ ಮಾಡಿದರು ಎಂದರು.

ಬಸವಣ್ಣ ಕಾಯಕ ತತ್ವದ ಮೂಲಕ ಇಡೀ ವಿಶ್ವಕ್ಕೆ ಪ್ರೇರಣೆಯಾಗಿದ್ದಾರೆ. ಕಾಯಕ ತತ್ವ ಪಾಲಿಸಿದರೆ ಆತ್ಮವಿಶ್ವಾಸದಿಂದ ವಿಶ್ವದ ಯಾವುದೇ ದೇಶದಲ್ಲಿ ನೆಮ್ಮದಿಯಾಗಿ ಜೀವನ ಮಾಡಬಹುದು ಎಂದು ಹೇಳಿದರು. ಸದ್ಯದ ವಾತಾವರಣದಲ್ಲಿ ವಿಶ್ವದಲ್ಲಿ ನೀರಿನ ಸಮಸ್ಯೆ ದೊಡ್ಡದಾಗಿದ್ದು, ಜೀವ ಸೃಷ್ಟಿಗೆ ಕಾರಣವಾಗಿರುವ ನೀರನ್ನು ಉಳಿಸಿಕೊಳ್ಳುವುದು ಅತ್ಯಂತ ಅಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.

ಆನಂದಪುರ ಮುರುಘಾ ಮಠದ ಡಾ. ಮಲ್ಲಿಕಾರ್ಜುನ ಸ್ವಾಮೀಜಿಯವರು ಮಾತನಾಡಿ, ಸಾಗರದಾಚೆ ದುಬೈನಂತ ನಗರದಲ್ಲಿ ಬಸವಣ್ಣನ ಸಮಾನತೆ ತತ್ವ ಹಾಗೂ ಕನ್ನಡವನ್ನು ಜೀವಂತವಾಗಿಟ್ಟ ವಚನ ಸಾಹಿತ್ಯವನ್ನು ಬೆಳೆಸುತ್ತಿರುವುದು ಹೆಮ್ಮೆಯ ಸಂಗತಿ. ಇದು ಭಾರತದಲ್ಲಿರುವ ಬಸವಾಭಿಮಾನಿಗಳಿಗೂ ಮಾದರಿಯಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಜಡೆ ಸಂಸ್ಥಾನ ಮಠದ ಮಹಾಂತ ಸ್ವಾಮೀಜಿ ಯೋಗ ಪ್ರದರ್ಶನದ ಮೂಲಕ ಪ್ರೇಕ್ಷಕರ ಗಮನ ಸೆಳೆದರು. ದುಬೈ ಬಸವ ಸಮಿತಿ ಅಧ್ಯಕ್ಷ ಚಂದ್ರಶೇಖರ ಲಿಂಗದಳ್ಳಿ, ಸಂಗಮೇಶ್ ಬಿಸರಳ್ಳಿ, ಮಲ್ಲಿಕಾರ್ಜುನ ಮುಳ್ಳೂರು, ಸತೀಶ್ ಹಿಂಡೇರ್, ರುದ್ರಯ್ಯ ನವಲಿ ಹಿರೇಮಠ, ಮಮತಾ ರಡ್ಡೇರ್, ಜಗದೀಶ್ ಲಾಲಿ, ಮುರುಗೇಶ್ ಗಾಜರೆ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

For All Latest Updates

TAGGED:

ABOUT THE AUTHOR

...view details