ಬೆಂಗಳೂರು: ಮೊದಲ ಬಾರಿಗೆ ಏರ್ಪೋರ್ಟ್ನಲ್ಲಿ ಡಿ.ಕೆ ಶಿವಕುಮಾರ್ ಬೆಂಬಲಿಗರು ಹಾಗೂ ಕೈ ಕಾರ್ಯಕರ್ತರನ್ನು ನಿಯಂತ್ರಿಸಲು ಬ್ಯಾರಿಕೇಡ್ ಹಾಕಲಾಗಿದೆ.
ಡಿಕೆಶಿ ಬೆಂಬಲಿಗರನ್ನು ತಡೆಯಲು ಏರ್ಪೋರ್ಟ್ನಲ್ಲಿ ಬ್ಯಾರಿಕೇಡ್ ವ್ಯವಸ್ಥೆ - DKS news
ಡಿ.ಕೆ ಶಿವಕುಮಾರ್ ದೆಹಲಿಯಿಂದ ಜಾಮೀನು ಪಡೆದು ಬೆಂಗಳೂರಿಗೆ ಆಗಮಿಸುತ್ತಿರುವ ಹಿನ್ನೆಲೆ ಮೊದಲ ಬಾರಿಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬ್ಯಾರಿಕೇಡ್ ವ್ಯವಸ್ಥೆ ಮಾಡಲಾಗಿದೆ.
![ಡಿಕೆಶಿ ಬೆಂಬಲಿಗರನ್ನು ತಡೆಯಲು ಏರ್ಪೋರ್ಟ್ನಲ್ಲಿ ಬ್ಯಾರಿಕೇಡ್ ವ್ಯವಸ್ಥೆ](https://etvbharatimages.akamaized.net/etvbharat/prod-images/768-512-4876111-thumbnail-3x2-dks.jpg)
ಡಿ.ಕೆ ಶಿವಕುಮಾರ್ ದೆಹಲಿಯಿಂದ ಜಾಮೀನು ಪಡೆದು ಬೆಂಗಳೂರಿಗೆ ಆಗಮಿಸುತ್ತಿರುವ ಹಿನ್ನೆಲೆ ಅವರ ಬೆಂಬಲಿಗರು ಹಾಗೂ ಕೈ ಕಾರ್ಯಕರ್ತರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದ್ದು, ಪ್ರಯಾಣಿಕರಿಗೆ ತೊಂದರೆ ಉಂಟಾಗುತ್ತದೆ ಅನ್ನೋ ಆತಂಕದಿಂದ ಏರ್ಪೋರ್ಟ್ ಒಳಗೆ ಕಾರ್ಯಕರ್ತರಿಗೆ ನಿಷೇಧವನ್ನು ಹೇರಲಾಗಿತ್ತು.
ಆದರೂ ಪೊಲೀಸರ ಕಣ್ಣು ತಪ್ಪಿಸಿ ಏರ್ಪೋರ್ಟ್ ಒಳಗೆ ಸುಮಾರು ಐನೂರಕ್ಕು ಅಧಿಕ ಬೆಂಬಲಿಗರು ಹಾಗೂ ಕಾರ್ಯಕರ್ತರು ಸೇರಿದ್ದು, ಅವರನ್ನು ನಿಯಂತ್ರಿಸಲು ಪೊಲೀಸರು ಏರ್ಪೋರ್ಟ್ನಲ್ಲಿ ಬ್ಯಾರಿಕೇಡ್ ಹಾಕಿದ್ದಾರೆ. ಇದರಿಂದ ಕೆಲವು ಪ್ರಯಾಣಿಕರಿಗೆ ಕಿರಿಕಿರಿ ಉಂಟಾಗಿದ್ದು, ಕಾರ್ಯಕರ್ತರನ್ನು ನಿಯಂತ್ರಿಸಲು ಪೊಲೀಸರು ಪರದಾಡುವಂತಾಗಿದೆ.