ಕರ್ನಾಟಕ

karnataka

ETV Bharat / state

ಪ್ರಜಾಪ್ರಭುತ್ವದ ಉಳಿವಿಗೆ ಬೇಕಿರುವ ಕಣ್ಣು-ಕಿವಿಗಳ ಬದಲು ಹರಿತ ನಾಲಿಗೆಗಳೇ ಕಾಣುತ್ತಿವೆ; ಬರಗೂರು ರಾಮಚಂದ್ರಪ್ಪ ವಿಷಾದ - Baraguru Ramachandrappa Reactions

ಪ್ರಜಾಪ್ರಭುತ್ವದ ಉಳಿವಿಗೆ ಬೇಕಿರುವುದು ಕಣ್ಣು ಮತ್ತು ಕಿವಿ ಮಾತ್ರ. ಆದರೆ, ಇವತ್ತು ಕಣ್ಣು ಮತ್ತು ಕಿವಿಗಳ ಬದಲು ಹರಿತ ನಾಲಿಗೆಗಳೇ ಕಾಣುತ್ತಿವೆ ಎಂದು ಖ್ಯಾತ ಸಾಹಿತಿ ಬರಗೂರು ರಾಮಚಂದ್ರಪ್ಪ ವಿಷಾದ ವ್ಯಕ್ತಪಡಿಸಿದರು.

Baraguru Ramachandrappa's 'Kasturba V/s Gandhi' Book Release
'ಕಸ್ತೂರ್ ಬಾ vs ಗಾಂಧಿ' ಕೃತಿ ಬಿಡುಗಡೆ

By

Published : Dec 26, 2020, 3:07 AM IST

ಬೆಂಗಳೂರು:ಖ್ಯಾತ ಸಾಹಿತಿ ಬರಗೂರು ರಾಮಚಂದ್ರಪ್ಪ ಅವರ 'ಕಸ್ತೂರ್ ಬಾ vs ಗಾಂಧಿ' ಕೃತಿಯನ್ನು ನಾಡೋಜ ಕಮಲಾ ಹಂಪನಾ ಅವರು ಬಿಡುಗಡೆ ಮಾಡಿದರು‌.

ಬಳಿಕ ಮಾತನಾಡಿದ ಬರಗೂರು ರಾಮಚಂದ್ರಪ್ಪ, ಒಂದು ಪ್ರಜಾಪ್ರಭುತ್ವದ ಉಳಿವಿಗೆ ಬೇಕಿರುವುದು ಕಣ್ಣು ಮತ್ತು ಕಿವಿ. ಇವೆರಡೂ ಸರಿಯಾಗಿದ್ದರೆ ಪ್ರಜಾಸತ್ತಾತ್ಮಕ ಮೌಲ್ಯಗಳು ಹೆಚ್ಚು ಗಟ್ಟಿಯಾಗುತ್ತವೆ. ಆತ್ಮ ನಿರೀಕ್ಷೆ ಬರುತ್ತದೆ. ಈ ಆತ್ಮನಿರೀಕ್ಷೆಯ ಅಭಾವ ಪ್ರಜಾಪ್ರಭುತ್ವಕ್ಕೆ ಕೊಡಲಿಯೇಟು ನೀಡುತ್ತದೆ. ಇವತ್ತು ಕಣ್ಣು ಮತ್ತು ಕಿವಿಗಳ ಬದಲು ಹರಿತ ನಾಲಿಗೆಗಳೇ ಕಾಣುತ್ತಿವೆ ಎಂದು ಟೀಕಿಸಿದರು.

ಇದನ್ನೂ ಓದಿ : ಅನುದಾನ ತಡೆ ಹಿಡಿದ ಸಚಿವರಿಗೆ 'ಅಕ್ಷರಗಳಲ್ಲಿ' ತಿವಿದ ಪ್ರೊ.ಬರಗೂರು, ಚಂಪಾ!

ಗಾಂಧಿ ಮತ್ತು ಕಸ್ತೂರ್ ಬಾ ಇಬ್ಬರಲ್ಲೂ ಈ ಆತ್ಮ ನಿರೀಕ್ಷೆ ಇತ್ತು ಎನ್ನುವ ಕಾರಣಕ್ಕೆ ಅವರು ನನಗೆ ಮುಖ್ಯವಾದರು. ಇದು ಅವರಿಬ್ಬರ ಆತ್ಮ ನಿರೀಕ್ಷೆ ಮಾತ್ರವಲ್ಲ, ಸಮಾಜದ, ಪ್ರಜಾಪ್ರಭುತ್ವದ ಆತ್ಮ ನಿರೀಕ್ಷೆಯಾಗಿತ್ತು ಎಂದರು.

'ಕಸ್ತೂರ್ ಬಾ vs ಗಾಂಧಿ' ಕೃತಿ ಬಿಡುಗಡೆ

ಕೃತಿ ಬಿಡುಗಡೆ ಮಾಡಿ ಮಾತನಾಡಿದ ನಾಡೋಜ ಕಮಲಾ ಹಂಪನಾ, ಇದು ಕಸ್ತೂರ್ ಬಾ ಅವರ ಒಳಗಣ್ಣಿನಿಂದ ಗಾಂಧಿಯನ್ನು ನೋಡುವ ಕೃತಿ. ಕಸ್ತೂರ್ ಬಾ ಅವರ ಮೂಲಕ ಗಾಂಧಿಯನ್ನು ನೋಡಿದಾಗ ಗಾಂಧಿಯವರ ನಿಜ ಅಂತರಂಗ, ಭಾವ, ಚಿಂತನೆ ನೋಡಲು ಸಾಧ್ಯವಾಗುತ್ತದೆ. ಬರಗೂರು ಅವರ ಈ ಕೃತಿ ಚಂಪೂ ಕಾವ್ಯದಂತೆ. ಇದು ಗದ್ಯ ಹಾಗೂ ಪದ್ಯ ಎರಡೂ ಹೌದು. ಗ್ರೀಕ್ ನಾಟಕಗಳಂತೆ ಹೊಸ ರೀತಿಯ ತಂತ್ರವನ್ನು ಅಳವಡಿಸಿರುವ ಕೃತಿ ಇದು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕೃತಿ ಕುರಿತು ಮಾತನಾಡಿದ ಹಿರಿಯ ವಿಮರ್ಶಕ ಪ್ರೊ ಬಸವರಾಜ ಕಲ್ಗುಡಿ ಒಂದು ನೆರಳಿನಲ್ಲಿದ್ದು ಅದರಿಂದ ಆಚೆ ಬಂದು ತಮ್ಮದೇ ಪರಿಪೂರ್ಣ ವ್ಯಕ್ತಿತ್ವ ಕಟ್ಟಿಕೊಂಡ ಕಸ್ತೂರ್ ಬಾ ಕುರಿತ ಅಪರೂಪದ ಕಾದಂಬರಿ ಇದು. ಕನ್ನಡದಲ್ಲಿ ಇಂತಹ ಬರವಣಿಗೆ ಕಡಿಮೆ. ಸಂಬಂಧದ ಸೂಕ್ಷ್ಮ, ಹೋರಾಟದ ವಿನ್ಯಾಸ ಎರಡನ್ನೂ ಸಮರ್ಪಕವಾಗಿ ಈ ಕೃತಿ ಕಟ್ಟಿಕೊಡುತ್ತದೆ ಎಂದು ಅಭಿಪ್ರಾಯಪಟ್ಟರು.

ABOUT THE AUTHOR

...view details