ಬೆಂಗಳೂರು: ಕಾನೂನು ಸುವ್ಯವಸ್ಥೆ ದೃಷ್ಠಿಯಿಂದ ಎರಡು ದಿನಗಳ ಕಾಲ ನಗರದಲ್ಲಿ ಬಾರ್, ವೈನ್ ಸ್ಟೋರ್ ಹಾಗೂ ಪಬ್ಗಳನ್ನು ಮುಚ್ಚುವಂತೆ ಹೇರಿದ್ದ ನಿರ್ಬಂಧವನ್ನು ಒಂದು ದಿನಕ್ಕಿಳಿಸಲಾಗಿದೆ.
ಇಲ್ಕೇಳ್ರೀ ಸ್ವಲ್ಪ.. ಬಾರ್, ವೈನ್ಸ್ಟೋರ್ ರೀ ಒಪನ್.. ಆದರೆ, ನಾಳೆವರೆಗೂ 144 ಸೆಕ್ಷನ್ ಜಾರಿ - alok kumara
ಇಂದು ಸಂಜೆ ಆರು ಗಂಟೆ ನಂತರ ಬಾರ್, ವೈನ್ ಸ್ಟೋರ್, ಪಬ್ಗಳನ್ನ ತೆರೆಯಲು ಅನುಮತಿ ನೀಡಲಾಗಿದ್ದು, 144 ಸೆಕ್ಷನ್ ನಾಳೆವರೆಗೂ ಮುಂದುವರೆಯಲಿದೆ ಎಂದು ನಗರ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
ಬಾರ್, ವೈನ್ಸ್ಟೋರ್ ರೀ ಒಪನ್, ಆದ್ರೆ 144 ಸೆಕ್ಷೆನ್ ನಾಳೆವರೆಗೂ
ನಗರ ಪೊಲೀಸ್ ಆಯುಕ್ತ ಅಲೋಕ್ ಕುಮಾರ್, ರಾಜಕೀಯ ಸಂಘರ್ಷ ಹಿನ್ನೆಲೆಯಲ್ಲಿ ನಗರದಲ್ಲಿ ಮುಂಜಾಗ್ರತಾ ಕ್ರಮವಾಗಿ ಬಾರ್, ಕ್ಲಬ್ಗಳನ್ನು ಜುಲೈ 23 ಸಂಜೆ 6 ರಿಂದ 25ರ ಸಂಜೆ 6 ಗಂಟೆವರೆಗೆ ಮುಚ್ಚುವಂತೆ ಆದೇಶಿಸಿದ್ದೆವು. ಆದರೆ, ಇಂದು ಪರಿಸ್ಥಿತಿಗೆ ಅನುಗುಣವಾಗಿ ಹೊರಡಿಸಿದ್ದ ಆದೇಶವನ್ನ ಒಂದು ದಿನಕ್ಕೆ ಮಾತ್ರ ಸೀಮಿತವಾಗಿರಿಸಲಾಗಿದೆ ಎಂದು ತಿಳಿಸಿದರು.
ಈ ಮೂಲಕ ಇಂದು ಸಂಜೆ ಆರು ಗಂಟೆ ನಂತರ ಬಾರ್, ವೈನ್ ಸ್ಟೋರ್, ಪಬ್ಗಳನ್ನ ತೆರೆಯಲು ಅನುಮತಿ ನೀಡಲಾಗಿದೆ. ಆದರೆ, 144 ಸೆಕ್ಷನ್ ನಾಳೆವರೆಗೂ ಮುಂದುವರೆಯಲಿದೆ ಎಂದು ಆಯುಕ್ತರು ತಿಳಿಸಿದ್ದಾರೆ.
Last Updated : Jul 24, 2019, 10:42 PM IST