ಬೆಂಗಳೂರು:ಸಿಲಿಕಾನ್ ಸಿಟಿಯಲ್ಲಿ ತಡರಾತ್ರಿ ನಡೆದ ಮನೀಶ್ ಶೆಟ್ಟಿ ಶೂಟೌಟ್ ಪ್ರಕರಣದ ತನಿಖೆಯನ್ನು ಕೇಂದ್ರ ವಿಭಾಗದ ಡಿಸಿಪಿ ಅನುಚೇತ್ ನೇತೃತ್ವದಲ್ಲಿ ಒಂಬತ್ತು ವಿಶೇಷ ಪೊಲೀಸ್ ತಂಡಗಳು ಕೈಗೆತ್ತಿಕೊಂಡಿದ್ದು, ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಸುತ್ತಿದೆ.
ಈ ವಿಶೇಷ ತಂಡಗಳು ಘಟನಾ ಸ್ಥಳದಲ್ಲಿನ ಮಾಹಿತಿ ಆಧರಿಸಿ, ಕೃತ್ಯ ನಡೆದ ಸ್ಥಳದಲ್ಲಿನ ಸಿಸಿಟಿವಿಯನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಗಳು ಮುಖಕ್ಕೆ ಮಂಕಿ ಕ್ಯಾಪ್ ಹಾಗೂ ಜಾಕೆಟ್ ಧರಿಸಿದ್ದ ಕಾರಣ ಚಹರೆ ಕೊಂಚ ಕಾಣುತ್ತದೆ. ಜೊತೆಗೆ, ಆರೋಪಿಗಳು ಪರಾರಿಯಾದ ಹೆಜ್ಜೆ ಗುರುತನ್ನಾಧರಿಸಿ ತನಿಖಾಧಿಕಾರಿಗಳು ನೆಟ್ವರ್ಕ್ ಟ್ರ್ಯಾಪ್ ಮಾಡುತ್ತಿದ್ದಾರೆ. ಹಾಗೆಯೇ ಟೆಕ್ನಿಕಲ್ ಮಾಹಿತಿಗಳನ್ನಾಧರಿಸಿ ಈ ತಂಡಗಳು ಶೋಧ ಕಾರ್ಯ ನಡೆಸುತ್ತಿದೆ. ಈಗಾಗಲೇ ಆರೋಪಿಗಳು ಕೃತ್ಯಕ್ಕೆ ಬಳಸಿದ ಬೈಕ್, ಮಾರಕಾಸ್ತ್ರ ಸ್ಥಳದಲ್ಲೇ ಬಿಟ್ಟು ಹೋಗಿದ್ದಾರೆ. ಇದ್ರಿಂದ ಈಗಾಗಲೇ ಸಾಕಷ್ಟು ಸಾಕ್ಷ್ಯಾಧಾರಗಳು ಪೊಲೀಸರಿಗೆ ಲಭ್ಯವಾಗಿದೆ.