ಬೆಂಗಳೂರು: ಬಾರ್ ಡ್ಯಾನ್ಸರ್ ಕೊಲೆ ಪ್ರಕರಣವನ್ನು ಭೇದಿಸುವಲ್ಲಿ ಆರ್.ಟಿ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ.
ಮಾ. 26 ರಂದು ಆರ್.ಟಿ ನಗರದ ನೃಪತುಂಗ ಲೇಔಟ್‌ನ ಮನೆಯಲ್ಲಿ ಬಾರ್ ಡ್ಯಾನ್ಸರ್ ಝರಾ (28) ಕೊಲೆಯಾಗಿದ್ದಳು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದ ಪೊಲೀಸರು ಝರಾ ಬಾವ ನವಾಜ್ ಪಾಷಾನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಆತನೇ ಝರಾಳನ್ನು ಕೊಲೆ ಮಾಡಿದ್ದಾಗಿ ಬಾಯ್ಬಿಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಝರಾಳನ್ನು ಕೊಂದಿದ್ದೇಕೆ?:
ಉತ್ತರ ಭಾರತ ಮೂಲದ ಝರಾ ಹಲವು ವರ್ಷಗಳ ಹಿಂದೆ ಸಹೋದರಿ ಹಾಗೂ ತಮ್ಮನ ಜತೆ ನಗರಕ್ಕೆ ಆಗಮಿಸಿದ್ದಳು. ಆಕೆಗೆ ತಂದೆ ತಾಯಿ ಯಾರು ಇರಲಿಲ್ಲ. ಕೆಲ ತಿಂಗಳ ಹಿಂದೆ ಸಹೋದರಿಗೆ ಜಾಲಹಳ್ಳಿಯ ನವಾಜ್ ಷಾಷಾನ ಜತೆ ಮದುವೆ ಆಗಿತ್ತು. ಅವರಿಬ್ಬರು ಅಲ್ಲಿಯೇ ವಾಸವಿದ್ದರು. ಝರಾ ಒಬ್ಬಳೆ ನೃಪತುಂಗ ಲೇಔಟ್‌ನಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಳು.
ಬಾವ ನವಾಜ್ ಈ ಹಿಂದೆ ಝರಾ ಜತೆ ಅನೂನ್ಯವಾಗಿದ್ದ. ಆದರೆ ಇತ್ತೀಚೆಗೆ ಜರಾಳಿಗೆ ಬೇರೊಬ್ಬ ಅಸ್ಸೋಂ ಮೂಲದ ಯುವಕನ ಜತೆ ಮದುವೆ ನಿಶ್ಚಯವಾಗಿತ್ತು. ಈ ಮದುವೆ ನವಾಜ್ಗೆ ಇಷ್ಟವಿರಲಿಲ್ಲ. ಆದ್ದರಿಂದ ಕೊಲೆ ಮಾಡಿರುವುದಾಗಿ ಆರೋಪಿ ಪೊಲೀಸರಿಗೆ ತಿಳಿಸಿದ್ದಾನೆ.
ಕೊಲೆ ನಡೆದದ್ದು ಹೇಗೆ ?:
ಮಾ. 26 ರ ರಾತ್ರಿ 8 ಗಂಟೆಯಲ್ಲಿ ಝರಾ ಮನೆಗೆ ಹೋಗಿದ್ದ ನವಾಜ್ ಆಕೆ ಮದುವೆ ವಿಚಾರಕ್ಕೆ ಜಗಳ ಆರಂಭಿಸಿದ್ದ. ಅದು ವಿಕೋಪಕ್ಕೆ ತಿರುಗಿದಾಗ ಆರೋಪಿ ಚಾಕುವಿನಿಂದ ಬರ್ಬರವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಿದ್ದ. ಬಳಿಕ ಮನೆ ಡೋರ್ ಮತ್ತು ಗೇಟ್ ಲಾಕ್ ಮಾಡಿಕೊಂಡು ಹೋಗಿದ್ದ.
ಮರುದಿನ ಮಧ್ಯಾಹ್ನ 12 ಗಂಟೆ ಯುವತಿ ಸಹೋದರ ಮುಸ್ತಾಫ್ ಮನೆಗೆ ಬಂದಾಗ ಪ್ರಕರಣ ದಾಖಲಿಸಿಕೊಂಡ ಆರ್ ಟಿ ನಗರ ಪೊಲೀಸರಿಗೆ ಪರಿಚಿತರ ಕೈವಾಡ ಇರುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿತ್ತು. ಆದರೆ, ಸಾಕ್ಷಿಗಳನ್ನು ಸಂಗ್ರಹಿಸುತ್ತಿದ್ದಾಗ ನವಾಜ್ ಆರೋಪಿ ಎಂದು ಖಚಿತವಾದಾಗ ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ತನಿಖೆ ದಾರಿ ತಪ್ಪಿಸಿದ್ದ ಹಂತಕ :
ಡಾನ್ಸ್ ಗರ್ಲ್ ಜರಾ ಕೊಲೆ ಬಳಿಕ ಘಟನಾ ಸ್ಥಳಕ್ಕೆ ಬಂದಿದ್ದ ನವಾಜ್ ಪಾಷಾ, ತನಗೆ ಏನೂ ತಿಳಿದಿಲ್ಲ ಎಂಬಂತೆ ವರ್ತಿಸಿದ್ದ. ದೂರು ಕೊಡಲು ಪತ್ನಿ, ಬಾಮೈದುನ ಜೊತೆಗೆ ಠಾಣೆಗೆ ಬಂದು ಅಮಾಯಕನಂತೆ ಬೇರೆಯವರ ಮೇಲೆ ಶಂಕೆ ಇರುವುದಾಗಿ ತನಿಖಾಧಿಕಾರಿಗಳಿಗೆ ದಾರಿ ತಪ್ಪಿಸಿದ್ದ.
ಆದರೆ, ಝರಾ ಮೊಬೈಲ್ ಕರೆಗಳ ಪರಿಶೀಲಿಸಿದಾಗ ಅತಿಹೆಚ್ಚು ಬಾರಿ ನವಾಜ್ ಸಂಭಾಷಣೆ ನಡೆಸಿರುವುದು ಬೆಳಕಿಗೆ ಬಂದಿತ್ತು. ಜೊತೆಗೆ ಮನೆ ಸಮೀಪ ಕೊಲೆ ನೆಡೆದ ಸಂದರ್ಭದಲ್ಲಿ ಆರೋಪಿಯ ಮೊಬೈಲ್ ಇದಿದ್ದು ಪತ್ತೆಯಾಗಿತ್ತು. ಈ ಎಲ್ಲ ಸಾಕ್ಷ್ಯಾಧಾರಗಳ ಮೇಲೆ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆರೋಪಿ ತಪೋಪ್ಪಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಓದಿ:ಬೆಂಗಳೂರಲ್ಲಿ ಮುಂಬೈ ಮೂಲದ ಬಾರ್ ಡ್ಯಾನ್ಸರ್ ಬರ್ಬರ ಹತ್ಯೆ!