ಕರ್ನಾಟಕ

karnataka

ETV Bharat / state

ಮಾಜಿ ಮೇಯರ್ ಸಂಪತ್​ ರಾಜ್ ನಾಪತ್ತೆಗೆ ಸಹಾಯ: ಸಿಸಿಬಿ ವಿಚಾರಣೆಗೆ ಹಾಜರಾದ ಬ್ಯಾಪ್ಟಿಸ್ಟ್ ಆಸ್ಪತ್ರೆ ವೈದ್ಯರ ತಂಡ

ಮಾಜಿ ಮೇಯರ್ ಸಂಪತ್ತ್ ರಾಜ್ ನಾಪತ್ತೆಯಾದ ಹಿನ್ನೆಲೆ ಸಿಸಿಬಿ ಪೊಲೀಸರು ಬ್ಯಾಪಿಸ್ಟ್ ಆಸ್ಪತ್ರೆ ಸಿಬ್ಬಂದಿಗೆ ನೋಟಿಸ್​ ನೀಡಿ ಸ್ಪಷ್ಟನೆ ಕೊಡುವಂತೆ ತಿಳಿಸಿತ್ತು. ಹೀಗಾಗಿ ಇಂದು ಬ್ಯಾಪಿಸ್ಟ್ ಆಡಳಿತ ಮಂಡಳಿ ಮತ್ತು ವೈದ್ಯರು ಚಾಮರಾಜಪೇಟೆ ಸಿಸಿಬಿ ಕಚೇರಿಗೆ ಆಗಮಿಸಿದೆ.

CCB inquiry
ಸಿಸಿಬಿ ವಿಚಾರಣೆಗೆ ಹಾಜರಾದ ಬ್ಯಾಪ್ಟಿಸ್ಟ್ ಆಸ್ಪತ್ರೆಯ ವೈದ್ಯರ ತಂಡ

By

Published : Nov 2, 2020, 11:22 AM IST

ಬೆಂಗಳೂರು:ಮಾಜಿ ಮೇಯರ್ ಸಂಪತ್ತ್ ರಾಜ್ ಎಸ್ಕೇಪ್ ಆಗಲು ಸಹಾಯ ಮಾಡಿರುವ ಬ್ಯಾಪ್ಟಿಸ್ಟ್ ಆಸ್ಪತ್ರೆಯ ವೈದ್ಯರ ತಂಡ ಸಿಸಿಬಿ ಕಚೇರಿಗೆ ಆಗಮಿಸಿದೆ.

ಡಿ.ಜೆ ಹಳ್ಳಿ ಪ್ರಕರಣದಲ್ಲಿ ಆರೋಪಿಯಾಗಿರುವ ಸಂಪತ್ತ್ ರಾಜ್ ಕೊರೊನಾ ಸೋಂಕು ಇದೆ ಎಂದು ಹೇಳಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಸಿಸಿಬಿ ಪೊಲೀಸರು ಆಸ್ಪತ್ರೆ ಆಡಳಿತ ಮಂಡಳಿಗೆ ಗಲಭೆಯ ಗಂಭೀರತೆ ಕುರಿತು ವಿಚಾರ ತಿಳಿಸಿದ್ದರು. ವಿಚಾರ ಗೊತ್ತಿದ್ದರೂ‌ ಬ್ಯಾಪಿಸ್ಟ್ ಆಸ್ಪತ್ರೆಯ ಆಡಳಿತ ಮಂಡಳಿ ಸಂಪತ್ ರಾಜ್ ಅವರನ್ನ ಡಿಸ್ಚಾರ್ಚ್ ಮಾಡಿದ್ದರು. ಡಿಸ್ಚಾರ್ಜ್ ಬಳಿಕ ಸಿಸಿಬಿಗೆ ವಿಚಾರವನ್ನೇ ತಿಳಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಬ್ಯಾಪಿಸ್ಟ್ ಆಸ್ಪತ್ರೆಯ ಸಿಬ್ಬಂದಿಗೆ ನೋಟಿಸ್​ ನೀಡಿ ಸ್ಪಷ್ಟನೆ ಕೊಡುವಂತೆ ತಿಳಿಸಲಾಗಿತ್ತು. ಹೀಗಾಗಿ ಇಂದು ಬ್ಯಾಪಿಸ್ಟ್ ಆಡಳಿತ ಮಂಡಳಿ ಮತ್ತು ವೈದ್ಯರು ಚಾಮರಾಜಪೇಟೆ ಸಿಸಿಬಿ ಕಚೇರಿಗೆ ಆಗಮಿಸಿದೆ.

ಸಿಸಿಬಿ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ಆಸ್ಪತ್ರೆ ಆಡಳಿತ ವರ್ಗ ಹಾಗೂ ವೈದ್ಯಕೀಯ ಸಿಬ್ಬಂದಿಯಿಂದ ಮಾಜಿ ಮೇಯರ್ ಸಂಪತ್ ರಾಜ್ ನಾಪತ್ತೆ ಪ್ರಕರಣದ ಮಾಹಿತಿ ಪಡೆಯಲಿದ್ದಾರೆ.

ABOUT THE AUTHOR

...view details