ಮಹದೇವಪುರ/ಬೆಂಗಳೂರು:ದೀಪಾವಳಿ ಹಬ್ಬದ ಹಿನ್ನೆಲೆ ಈ ಬಾರಿ ಕೇವಲ ಹಸಿರು ಪಟಾಕಿಗಳನ್ನು ಮಾತ್ರ ಮಾರಾಟ ಮಾಡಲು ಮತ್ತು ಸಿಡಿಸಲು ಸರ್ಕಾರ ಅನುಮತಿ ನೀಡಿದೆ.
ಹೊರಗೆ ಹಸಿರು ಪಟಾಕಿ ನಾಮಫಲಕ, ಒಳಗೆ ನಿಷೇಧಿತ ಪಟಾಕಿ ಮಾರಾಟ: ಕಣ್ಮುಚ್ಚಿ ಕುಳಿತ್ರಾ ಅಧಿಕಾರಿಗಳು? - traders sells banned crackers news
ಬೆಂಗಳೂರಿನ ಮಹದೇವಪುರ, ವೈಟ್ ಫೀಲ್ಡ್, ಕಾಡುಗೋಡಿ ಸಮೀಪ ಕೆಲವು ಮಳಿಗೆಗಳ ಮುಂದೆ ಹಸಿರು ಪಟಾಕಿ ಮಾರಾಟ ಎಂದು ದೊಡ್ಡ ಗಾತ್ರದ ಬೋರ್ಡ್ ಹಾಕಿಕೊಂಡು, ಒಳಗೆ ಅಕ್ರಮವಾಗಿ ನಿಷೇಧಿತ ಪಟಾಕಿಗಳನ್ನು ಮಾರಾಟ ಮಾಡುತ್ತಿರುವ ಆರೋಪ ಕೇಳಿಬಂದಿದೆ. ಅಧಿಕಾರಿಗಳು ಮಳಿಗೆಗಳ ವಿರುದ್ಧ ಮತ್ತು ನಿಷೇಧಿತ ಪಟಾಕಿಗಳ ಅಕ್ರಮ ಮಾರಾಟದ ಬಗ್ಗೆ ಕ್ರಮಕೈಗೊಳ್ಳುತ್ತಿಲ್ಲ ಎನ್ನಲಾಗ್ತಿದೆ.
ನಿಷೇಧಿತ ಪಟಾಕಿ ಮಾರಾಟ
ಆದರೆ ಬೆಂಗಳೂರಿನ ಮಹದೇವಪುರ, ವೈಟ್ ಫೀಲ್ಡ್, ಕಾಡುಗೋಡಿ ಸಮೀಪ ನಿರ್ಮಿಸಿರುವ ದೊಡ್ಡ ದೊಡ್ಡ ಶೆಡ್ಗಳಲ್ಲಿ ರಾಜಾರೋಷವಾಗಿ ನಿಷೇಧಿತ ಪಟಾಕಿಗಳ ಮಾರಾಟ ಅವ್ಯಾಹತವಾಗಿ ನಡೆಯುತ್ತಿದೆ. ಮಳಿಗೆಗಳ ಮುಂದಿನ ಸಾಲಿನಲ್ಲಿ ಮಾತ್ರ ಹಸಿರು ಪಟಾಕಿಗಳನ್ನು ಇಟ್ಟು ಹಿಂದಿನ ಸಾಲಿನಲ್ಲಿ ಮತ್ತು ದೊಡ್ಡ ದೊಡ್ಡ ಕಾಟನ್ ಬಾಕ್ಸ್ಗಳಲ್ಲಿ ಅಕ್ರಮವಾಗಿ ನಿಷೇಧಿತ ಸಿಡಿಮದ್ದುಗಳನ್ನು ಮಾರಾಟ ಮಾಡುತ್ತಿರುವ ಆರೋಪ ಕೇಳಿಬಂದಿದೆ.