ಕರ್ನಾಟಕ ಗ್ರಾಮೀಣ ಬ್ಯಾಂಕ್ ಮತ್ತು ಕರ್ನಾಟಕ ವಿಕಾಸ್ ಗ್ರಾಮೀಣ ಬ್ಯಾಂಕ್ ಸೇರಿದಂತೆ ದೇಶದ ವಿವಿಧ ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ಗಳ ನೇಮಕಾತಿಗೆ ಖಾಲಿ ಇರುವ ಹುದ್ದೆಗಳ ಭರ್ತಿಗೆ ಐಬಿಪಿಎಸ್ ನೇಮಕಾತಿ ಅಧಿಸೂಚನೆ ಹೊರಡಿಸಿದೆ. ಆರ್ಆರ್ಬಿಯ (ಪ್ರಾದೇಶಿಕ ಗ್ರಾಮೀಣ ಬ್ಯಾಂಕ್)ನ ಗ್ರೂಪ್ ಎ ಅಧಿಕಾರಿಗಳು ಗ್ರೂಪ್ ಬಿ ಅಧಿಕಾರಿಗಳ ನೇಮಕಾತಿಗೆ ಐಪಿಬಿಎಸ್ ಮುಂದಾಗಿದೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಹುದ್ದೆ ಆಸಕ್ತಿ ಹೊಂದಿರುವ ಪದವೀಧರ ಅಭ್ಯರ್ಥಿಗಳು ಈ ಪರೀಕ್ಷೆಗೆ ಹೆಸರು ನೋಂದಾಯಿಸಬಹುದು.
ಹುದ್ದೆಗಳ ವಿವರ: ಇನ್ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್ ವತಿಯಿಂದ ಈ ನೇಮಕಾತಿ ನಡೆಯಲಿದೆ. ಇದರಲ್ಲಿ ಕರ್ನಾಟಕ ಗ್ರಾಮೀಣ ಬ್ಯಾಂಕ್ಗೆ 606 ಮತ್ತು ಕರ್ನಾಟಕ ವಿಕಾಸ್ ಗ್ರಾಮೀಣ ಬ್ಯಾಂಕ್ಗೆ 200 ಹುದ್ದೆಗಳು ಸೇರಿದಂತೆ ಒಟ್ಟಾರೆ 8,812 ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ. ಆಫೀಸರ್ ಅಸಿಸ್ಟೆಂಟ್ (ಮಲ್ಟಿಪರ್ಪಸ್, ಆಫೀಸರ್ ಸ್ಕೇ 2, 3ನಲ್ಲಿ ವಿವಿಧ ವಿಭಾಗಗಳಿಗೆ ನೇಮಕಾತಿ ನಡೆಯಲಿದೆ.
ವಿದ್ಯಾರ್ಹತೆ: ಆಫೀಸ್ ಅಸಿಸ್ಟೆಂಟ್, ಆಫೀಸರ್ ಸ್ಕೇಲ್-1 (ಅಸಿಸ್ಟಂಟ್ ಮ್ಯಾನೇಜರ್), ಆಫೀಸರ್ ಸ್ಕೇಲ್-1 (ಅಗ್ರಿಕಲ್ಚರ್ ಆಫೀಸರ್), ಆಫೀಸರ್ ಸ್ಕೇಲ್ 2(ಐಟಿ), ಆಫೀಸರ್ ಸ್ಕೇಲ್ 3 ಹುದ್ದೆಗೆ ಪದವಿ ಪೂರ್ಣಗೊಳಿಸಿರಬೇಕು. ಉಳಿದ ಹುದ್ದೆಗಗಳಿಗೆ ಎಂಬಿಎ, ಸಿಎ ಪದವಿ ಹೊಂದಿರಬೆಕು. ಆಫೀಸರ್ ಸ್ಕೇಲ್-2 (ಕಾನೂನು) ಎಲ್ಎಲ್ಬಿ ಪದವಿ ಆಗಿರಬೇಕು.
ವಯೋಮಿತಿ: ಹುದ್ದೆಗಳಿಗೆ ಅನುಸಾರವಾಗಿ ವಯೋಮಿತಿ ದಾಖಲಿಸಲಾಗಿದ್ದು, ಕನಿಷ್ಟ 18 ರಿಂದ ಗರಿಷ್ಟ 40 ವರ್ಷ ವಯೋಮಿತಿ ಹೊಂದಿರಬೇಕು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ 5 ವರ್ಷ, ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ವಿಕಲಚೇತನ ಅಭ್ಯರ್ಥಿಗಳಿಗೆ 10 ವರ್ಷ ವಯೋಮಿತಿ ಸಡಿಲಿಕೆ ಇದೆ.
ಅರ್ಜಿ ಸಲ್ಲಿಕೆ: ಈ ಹುದ್ದೆಗಳಿಗೆ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಪ.ಜಾ, ಪ.ಪಂ, ವಿಕಲಚೇತನ ಅಭ್ಯರ್ಥಿಗೆ 175 ರೂ ಅರ್ಜಿ ಶುಲ್ಕ ವಿಧಿಸಲಾಗಿದೆ. ಇತರೆ ಅಭ್ಯರ್ಥಿಗಳಿಗೆ 850 ರೂ ಅರ್ಜಿ ಶುಲ್ಕ ವಿಧಿಸಲಾಗಿದೆ.