ಕರ್ನಾಟಕ

karnataka

ETV Bharat / state

ಮುಂದಿನ ವಾರ 2 ದಿನ ಮಾತ್ರ ಬ್ಯಾಂಕ್ ಓಪನ್: ಈ ವಾರದಲ್ಲೇ ಎಲ್ಲ ಕೆಲಸ ಮುಗಿಸಿಕೊಳ್ಳಿ - ಬ್ಯಾಂಕ್ ನೌಕರರ ಮುಷ್ಕರ

ಮುಂದಿನ ವಾರ ಬ್ಯಾಂಕ್ ಕೆಲಸ ಮುಗಿಸಿಕೊಳ್ಳಬೇಕು ಎಂದು ನೀವೇನಾದರೂ ಪ್ಲಾನ್ ಮಾಡಿದ್ದರೆ ಅದು ಖಂಡಿತ ಸಾಧ್ಯವಿಲ್ಲ. ಯಾಕೆಂದರೆ ಮುಂದಿನ ವಾರ ಎರಡು ದಿನ ಮಾತ್ರ ಬ್ಯಾಂಕ್ ಓಪನ್ ಇರಲಿದೆ. ಹಾಗಾಗಿ, ಈ ವಾರದಲ್ಲೇ ಬ್ಯಾಂಕ್​ನ ಕೆಲಸ ಕಾರ್ಯಗಳನ್ನ ಮುಗಿಸಿಕೊಳ್ಳುವುದು ಒಳ್ಳೆಯದು.

Bank
Bank

By

Published : Mar 23, 2022, 12:38 PM IST

ಬೆಂಗಳೂರು: ಮುಂದಿನ ವಾರ ಬ್ಯಾಂಕ್ ಸೇವೆಯಲ್ಲಿ ಭಾರಿ ವ್ಯತ್ಯಯ ಉಂಟಾಗಲಿದೆ. ವಾರದಲ್ಲಿ 2 ದಿನ ಮಾತ್ರ ಬ್ಯಾಂಕ್‌ಗಳು ಓಪನ್ ಇರಲಿದೆ. ಹೀಗಾಗಿ, ಈ ವಾರದಲ್ಲೇ ಬ್ಯಾಂಕ್​ನ ಕೆಲಸ ಕಾರ್ಯಗಳನ್ನ ಮುಗಿಸಿಕೊಳ್ಳುವುದು ಒಳ್ಳೆಯದು. ಬ್ಯಾಂಕ್ ನೌಕರರ ಮುಷ್ಕರ, ವೀಕೆಂಡ್, ಯುಗಾದಿ ಹಬ್ಬ ಇರುವ ಕಾರಣ ಮುಂದಿನ ವಾರ ಎರಡು ದಿನ ಮಾತ್ರ ಬ್ಯಾಂಕ್​ಗಳು ಕಾರ್ಯ ನಿರ್ವಹಿಸಲಿವೆ.

ಬ್ಯಾಂಕ್​ಗಳ ಖಾಸಗೀಕರಣ, ನೌಕರರ ವಿರುದ್ಧದ ನೀತಿಗಳನ್ನ ವಿರೋಧಿಸಿ ಬ್ಯಾಂಕ್ ನೌಕರರು ದೇಶ್ಯಾದ್ಯಂತ ಮಾ. 27 ಮತ್ತು 29 ರಂದು ಮುಷ್ಕರ ನಡೆಸಲಿದ್ದಾರೆ. 11 ಬ್ಯಾಂಕಿಂಗ್ ಯೂನಿಯನ್​ಗಳ ಪೈಕಿ CPI ಹಾಗೂ CPIM ಬೆಂಬಲಿತ ಯೂನಿಯನ್​ಗಳು ಮುಷ್ಕರ ನಡೆಸಲಿವೆ. ಎರಡು ದಿನ AIBEA, AIBOA, BEFI, INBES ಯೂನಿಯನ್​ಗಳು ಪ್ರತಿಭಟನೆ ನಡೆಸಲಿದೆ.

ಬ್ಯಾಂಕ್ ನೌಕರರ ಮುಷ್ಕರದ ಕುರಿತಾದ ಪ್ರಕಟಣೆ

ಯಾವ ದಿನ ಬ್ಯಾಂಕ್ ಬಂದ್​: ಮಾರ್ಚ್ 27 ರಿಂದ 29ರ ವರೆಗೆ ಬ್ಯಾಂಕ್ ನೌಕರರ ಮುಷ್ಕರ ಇರಲಿದೆ. ಹೀಗಾಗಿ ಸೋಮವಾರ, ಮಂಗಳವಾರ ಬ್ಯಾಂಕ್ ಕ್ಲೋಸ್ ಆಗಿರಲಿದೆ. ಇನ್ನು ಮಾರ್ಚ್ 30 ಮತ್ತು 31 ರಂದು ಬ್ಯಾಂಕ್ ಓಪನ್ ಇರಲಿದೆ. ಬಳಿಕ ಮತ್ತೆ ಏಪ್ರಿಲ್ 1 ರಂದು ಹೊಸ ಆರ್ಥಿಕ ವರ್ಷ ಆರಂಭ ಹಿನ್ನೆಲೆ ಗ್ರಾಹಕ ಸೇವೆ ಲಭ್ಯ ಇರುವುದಿಲ್ಲ. ಏಪ್ರಿಲ್ 1 ರಂದು ಹೊಸ ಆರ್ಥಿಕ ವರ್ಷ ಆರಂಭ ಆದ್ದರಿಂದ ಬ್ಯಾಂಕ್ ಓಪನ್ ಇದ್ದರೂ ಗ್ರಾಹಕ ಸೇವೆ ಲಭ್ಯ ಇರುವುದಿಲ್ಲ. ಮತ್ತೆ ಏಪ್ರಿಲ್ 2 ರಂದು ಯುಗಾದಿ ಹಿನ್ನೆಲೆ ಬ್ಯಾಂಕ್‌ಗೆ ರಜೆ ಇರಲಿದೆ.

ಇದನ್ನೂ ಓದಿ:ಧಾರ್ಮಿಕ ಭಾವನೆಗಳಿಗೆ ಧಕ್ಕೆ ಆರೋಪ: ಯೋಗಿ ಆದಿತ್ಯನಾಥ್​ಗೆ ನೋಟಿಸ್​ ಜಾರಿ

ABOUT THE AUTHOR

...view details