ಬೆಂಗಳೂರು: ನಗರದಲ್ಲಿ ಕೊರೊನಾ ಲಾಕ್‌ಡೌನ್ ಇದ್ದರೂ ಜನ ಹೆಚ್ಚಾಗಿ ಓಡಾಟ ಮಾಡ್ತಿದ್ದಾರೆ. ಹೀಗಾಗಿ ಇಂದು ನಗರದ ಕೆಲ ರಸ್ತೆಗಳನ್ನ ಪೊಲೀಸರು ಸೀಲ್‌ಡೌನ್ ಮಾಡಲು ನಿರ್ಧಾರ ಮಾಡಿದ್ದಾರೆ.
ಸಿಲಿಕಾನ್ ಸಿಟಿಯ ಕೆಲ ರಸ್ತೆಗಳನ್ನ ಸೀಲ್‌ಡೌನ್ ಮಾಡಲು ನಿರ್ಧಾರ.. ಪ್ರಮುಖ ಅಡ್ಡ ರಸ್ತೆಗಳು ಬಂದ್ - subways seal down
ಕೊರೊನಾ ಲಾಕ್‌ಡೌನ್ ಉಲ್ಲಂಘನೆ ಹೆಚ್ಚಾಗಿರುವ ಬೆಂಗಳೂರಿನ ಕೆಲ ರಸ್ತೆಗಳನ್ನು ಸೀಲ್‌ಡೌನ್ ಮಾಡಲು ಪೊಲೀಸ್ ಇಲಾಖೆ ನಿರ್ಧರಿಸಿದೆ.
ಅತಿಯಾಗಿ ಓಡಾಟ ಹಾಗೂ ಹೆಚ್ಚಾಗಿ ಸೋಂಕು ಇರುವ ಸ್ಥಳಗಳನ್ನ ಗುರುತಿಸಿದ್ದಾರೆ. ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಗೆ ಹೋಲಿಕೆ ಮಾಡಿದ್ರೆ ಬೆಂಗಳೂರು ನಗರ ಸೋಂಕಿತರ ಸಂಖ್ಯೆ ಹೆಚ್ಚಿದೆ. ಹೀಗಾಗಿ ನಗರ ಪೊಲೀಸರು ಎಲ್ಲಾ ಏರಿಯಾಗಳ ಸಬ್‌ವೇಗಳನ್ನು ಬಂದ್ ಮಾಡುತ್ತಿದ್ದಾರೆ. ಏರಿಯಾದಿಂದ ಏರಿಯಾಗೆ ಇರೋ ಸಂಪರ್ಕ ಕಡಿತ ಮಾಡಿ ಮೈನ್‌ರೋಡ್ ಮೂಲಕ ಮಾತ್ರ ವಾಹನ ಸಂಚಾರ ಮಾಡುವಂತೆ ಪ್ಲಾನ್ ಮಾಡಿದ್ದಾರೆ. ಹೀಗಾಗಿ ರಸ್ತೆಗಳು ಸಂಪೂರ್ಣ ಸೀಲ್‌ಡೌನ್ ಆಗಿ ಸ್ತಬ್ಧವಾಗಲಿದೆ.
ಸೀಲ್‌ಡೌನ್ ಆದ್ರೆ ಯಾರೊಬ್ಬರೂ ಹೊರಗೆ ಬರೋ ಹಾಗಿಲ್ಲ. ಮೆಡಿಕಲ್, ತರಕಾರಿ ಅಂತಾ ಸುಮ್ಮನೆ ಹೊರಗಡೆ ಬರೋಕು ಆಗಲ್ಲ. ತೀರಾ ಎಮರ್ಜೆನ್ಸಿ ಇದ್ರೇ ಮಾತ್ರ ಅಂತವರಿಗೆ ಹೊರಗೆ ಬರೋಕೆ ಅವಕಾಶ ಇರುತ್ತೆ. ಯಾವುದೇ ವಾಹನ ಹೊರಗಡೆ ಬಂದ್ರೆ ಮುಖ್ಯ ರಸ್ತೆಗೆ ಬರಲೇಬೇಕು ಅನ್ನೋದು ಖಾಕಿ ಪ್ಲ್ಯಾನ್.