ಕರ್ನಾಟಕ

karnataka

ETV Bharat / state

ನಾಮ ಫಲಕದಲ್ಲಿ ಕನ್ನಡ ಕಡ್ಡಾಯಗೊಳಿಸಿ ಬಿಬಿಎಂಪಿ ನೋಟಿಸ್.. ಫಲಿತಾಂಶ ಮಾತ್ರ ಶೂನ್ಯ.. - ನಾಮಫಲಕದಲ್ಲಿ ಕನ್ನಡ ಕಡ್ಡಾಯ

ನವೆಂಬರ್ 30ರೊಳಗೆ ಎಲ್ಲಾ ಅಂಗಡಿಗಳ ನಾಮಫಲಕದಲ್ಲಿ ಕನ್ನಡ ಕಡ್ಡಾಯಗೊಳಿಸಿ ಬಿಬಿಎಂಪಿ ನೋಟಿಸ್​ ನೀಡಿದ್ದರೂ ಯಾವುದೇ ಬದಲಾವಣೆ ಕಂಡು ಬಂದಿಲ್ಲ.

Kannada Mandatory BBMP Notice, ಕನ್ನಡ ಕಡ್ಡಾಯಗೊಳಿಸಿ ಬಿಬಿಎಂಪಿ ನೋಟಿಸ್
ಬಿಬಿಎಂಪಿ ನೋಟಿಸ್

By

Published : Nov 27, 2019, 7:28 PM IST

ಬೆಂಗಳೂರು:ಕನ್ನಡ ನಾಮಫಲಕ ಕಡ್ಡಾಯ ಮಾಡಿ ಪಾಲಿಕೆ ಹೊರಡಿಸಿದ ನೋಟಿಸ್​ಗೆ ಅಂಗಡಿ ಮುಂಗಟ್ಟುಗಳ ಮಾಲೀಕರು ಮಾತ್ರ ಕೇರ್​ ಮಾಡುತ್ತಿಲ್ಲ.

ಬಿಬಿಎಂಪಿ ಈವರೆಗೆ 22 ಸಾವಿರ ಅಂಗಡಿ ಮಳಿಗೆಗಳಿಗೆ ನೋಟಿಸ್​ ನೀಡಿದೆ. ಆದರೂ ಶೇ.60ರಷ್ಟು ಕನ್ನಡ, 40 ರಷ್ಟು ಬೇರೆ ಭಾಷೆಗಳ ಅಳವಡಿಕೆ ಇರಬೇಕು ಎಂಬ ನಿಯಮ ಎಲ್ಲಿಯೂ ಜಾರಿಗೆ ಬಂದಿಲ್ಲ. ಮೊದಲು ನವೆಂಬರ್ ಒಂದಕ್ಕೆ ಕಡ್ಡಾಯ ಮಾಡಿದ್ದ ಪಾಲಿಕೆ, ನವೆಂಬರ್ 30ರವರೆಗೆ ಗಡುವು ಮುಂದೂಡಿಕೆ ಮಾಡಿತ್ತು. ಇದೀಗ ಡಿಸೆಂಬರ್ ತಿಂಗಳಿಗೂ ಈ ಗಡುವು ವಿಸ್ತರಿಸುವ ಸಾಧ್ಯತೆ ಇದೆ.

ಮುನೀಂದ್ರ ಕುಮಾರ್, ಪಾಲಿಕೆ ಆಡಳಿತ ಪಕ್ಷದ ನಾಯಕ

ಈ ಬಗ್ಗೆ ಮುಖ್ಯ ಆರೋಗ್ಯ ಅಧಿಕಾರಿ ವಿಜಯೇಂದ್ರ ಮಾತನಾಡಿ, ಆಯುಕ್ತರು ತಿಳಿಸಿದಂತೆ ಮಾಡಲಾಗುವುದು. ಆಯುಕ್ತರು ತಿಳಿಸಿದ್ರೆ ಡಿಸೆಂಬರ್ ಒಂದರಿಂದ ಫೀಲ್ಡ್​ಗಿಳಿದು ಲೈಸೆನ್ಸ್ ರದ್ದು ಮಾಡಲಾಗುವುದು ಎಂದಿದ್ದಾರೆ.ಸಾಕಷ್ಟು ಸಂಘ ಸಂಸ್ಥೆಗಳು ಪಾಲಿಕೆಗೆ ಸಮಯಾವಕಾಶ ಕೇಳಿ ಮನವಿ ಮಾಡಿರುವ ಹಿನ್ನೆಲೆ, ಅವಕಾಶ ನೀಡಲಾಗುತ್ತಿದೆ. ಆದರೆ, ಅಧಿಕಾರಿಗಳೊಂದಿಗೆ ನಿರಂತರ ಸಭೆ ನಡೆಸಿ, ಕಟ್ಟುನಿಟ್ಟಿನ ಜಾರಿಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪಾಲಿಕೆ ಆಡಳಿತ ಪಕ್ಷದ ನಾಯಕ ಮುನೀಂದ್ರ ಕುಮಾರ್ ತಿಳಿಸಿದರು.

ಒಟ್ಟಿನಲ್ಲಿ ನವೆಂಬರ್ 1ರಂದು ಪಾಲಿಕೆ, ಕನ್ನಡ ನಾಮಫಲಕ ಕಡ್ಡಾಯ ಎಂದು ಆದೇಶ ಹೊರಡಿಸಿತ್ತಾದರೂ, ಜಾರಿಗೆ ತರುವಲ್ಲಿ ವಿಳಂಬ ಧೋರಣೆ ತಾಳಿದೆ.

ABOUT THE AUTHOR

...view details