ಬೆಂಗಳೂರು: ದೇಶ ಸೇರಿದಂತೆ ಮಹಾನಗರಗಳಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚಾಗ್ತಿದ್ದು, ಇದೀಗ ಎನ್ಸಿಆರ್ಬಿ ಬಿಡುಗಡೆ ಮಾಡಿರುವ ಅಂಕಿಅಂಶಗಳು ದೆಹಲಿ ಮತ್ತು ಬೆಂಗಳೂರಿಗೆ ಸೇಫ್ ಅಲ್ಲ ಅನ್ನೋ ಆತಂಕಕಾರಿ ಸಂಗತಿ ಬಯಲಾಗಿದೆ.
ಸಿಲಿಕಾನ್ ಸಿಟಿ ಕೂಡ ಸುರಕ್ಷಿತವಲ್ಲ: ಎನ್ಸಿಆರ್ಬಿ ವರದಿ ಹೇಳುವುದೇನು?
ಇತ್ತಿಚೀನ ದಿನಗಳಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣಗಳು ದಿನೇ ದಿನೇ ಹೆಚ್ಚಾಗ್ತಿದ್ದು, ಇದೀಗ ಎನ್ಸಿಆರ್ಬಿ ಬಿಡುಗಡೆ ಮಾಡಿರುವ ಅಂಕಿಅಂಶಗಳಲ್ಲಿ ದೆಹಲಿ ಮತ್ತು ಬೆಂಗಳೂರಿಗೆ ಸುರಕ್ಷಿತವಲ್ಲ ಅನ್ನೋ ಆತಂಕಕಾರಿ ವಿಚಾರ ಬಹಿರಂಗವಾಗಿದೆ.
ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ ತಡೆಗಟ್ಟಲು ಪೊಲೀಸ್ ಇಲಾಖೆ, ಸರ್ಕಾರ ಹಾಗೂ ನ್ಯಾಯಾಲಯ ಹರಸಾಹಸ ಪಟ್ಟು ಹಲವು ರೀತಿಯಲ್ಲಿ ಜಾಗೃತಿ ಮೂಡಿಸಿ, ದುಷ್ಕರ್ಮಿಗಳಿಗೆ ಶಿಕ್ಷೆ ವಿಧಿಸುತ್ತವೆ. ಆದರೆ ವರದಿಯನ್ನು ನೋಡುವಾಗ ಮತ್ತಷ್ಟು ಆತಂಕ ಶುರುವಾಗಿದೆ. ಯಾಕಂದ್ರೆ, 2018ರಲ್ಲಿ ನಡೆದ ಮಹಿಳೆಯ ಮೇಲಿನ ದೌರ್ಜನ್ಯ ಪ್ರಕರಣದಲ್ಲಿ ದೆಹಲಿ ಮೊದಲ ಸ್ಥಾನದಲ್ಲಿದ್ದು, ಅತೀ ಹೆಚ್ಚು ಮಹಿಳೆಯರ ಮೇಲೆ ಅತ್ಯಾಚಾರ ಕೇಸ್ಗಳು ದಾಖಲಾಗಿವೆ.
ಹಾಗೆಯೇ ಉದ್ಯಾನನಗರಿ ಬೆಂಗಳೂರು 3ನೇ ಸ್ಥಾನದಲ್ಲಿದೆ. ಸುಮಾರು 3 ಸಾವಿರಕ್ಕೂ ಹೆಚ್ಚು ಅತ್ಯಾಚಾರ ಪ್ರಕರಣಗಳು ಬೆಂಗಳೂರಿನಲ್ಲಿ ದಾಖಲಾಗಿವೆ. ಮುಂಬೈನಲ್ಲಿ 6 ಸಾವಿರ, ಲಕ್ನೋದಲ್ಲಿ 2 ಸಾವಿರ ಹಾಗೂ ಹೈದರಾಬಾದ್ನಲ್ಲಿ 2 ಸಾವಿರ ಪ್ರಕರಣ ದಾಖಲಾಗಿದೆ.