ಕರ್ನಾಟಕ

karnataka

ETV Bharat / state

ಕೊರೊನಾ ಆತಂಕದಲ್ಲಿದ್ದ ಸಿಸಿಬಿ ಪೊಲೀಸರಿಗೆ ಬಿಗ್ ರಿಲೀಫ್.. ಎಲ್ಲರ ವರದಿ ನೆಗೆಟಿವ್ - ಸಿಸಿಬಿ ಪೊಲೀಸ್​‘

ಇನ್ಸೆಂಟಿವ್ ಆಸೆಗೆ ಕೆಲಸ ನೀಡಿದ ಓಲಾ ಕಂಪನಿಗೆ ವಂಚಿಸುತ್ತಿದ್ದ ನಾಲ್ವರು ಚಾಲಕರನ್ನ ಜೂನ್ 11ರಂದು ಸಿಸಿಬಿ ಪೊಲೀಸರು ಬಂಧಿಸಿದ್ದರು. 50ಕ್ಕೂ ಹೆಚ್ಚು ಟ್ರಿಪ್ ಮಾಡಿದರೆ ಇನ್ಸೆಂಟಿವ್ ಸಿಗುತ್ತೆ ಎಂದು ಅಡ್ಡ ದಾರಿ ಹಿಡಿದಿದ್ದ ಬಂಧಿತರು ತಾವೇ ಬೇರೆ ಬೇರೆ ನಂಬರ್​ನಿಂದ ಕ್ಯಾಬ್ ಬುಕ್ ಮಾಡ್ತಿದ್ರು.

ಕೊರೊನಾ ಆತಂಕದಲ್ಲಿದ್ದ ಸಿಸಿಬಿ ಪೊಲೀಸರಿಗೆ ಬಿಗ್ ರಿಲೀಫ್

By

Published : Jun 14, 2020, 6:38 PM IST

ಬೆಂಗಳೂರು: ಜೂನ್ 12ರಂದು ಸ್ವಾಬ್ ಟೆಸ್ಟ್​ಗೆ ಒಳಪಟ್ಟಿದ್ದ 50 ಜನ ಸಿಸಿಬಿ ಸಿಬ್ಬಂದಿ ಕೊರೊನಾ ಪರೀಕ್ಷಾ ವರದಿ ನೆಗೆಟಿವ್ ಬಂದಿದೆ. ಆದರೆ, ಅಧಿಕೃತ ಮಾಹಿತಿ ಹೊರ ಬೀಳಬೇಕಿದೆ.

ಜೂನ್ 11ರಂದು ಓಲಾ ಕಂಪನಿಗೆ ವಂಚಿಸಿದ್ದ ನಾಲ್ವರನ್ನ ಸಿಸಿಬಿ ಪೊಲೀಸರು ಬಂಧಿಸಿದ್ದರು. ಈ ಪೈಕಿ ಓರ್ವನಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಸಿಸಿಬಿ ಸಿಬ್ಬಂದಿಗೆ ಆತಂಕ ಎದುರಾಗಿತ್ತು. ತಕ್ಷಣ ಸಿಸಿಬಿ ಕಚೇರಿಗೆ ಸ್ಯಾನಿಟೈಜ್ ಮಾಡಿ ತಾತ್ಕಾಲಿಕವಾಗಿ ಸೀಲ್‌ಡೌನ್ ಮಾಡಲಾಗಿತ್ತು. ಬಳಿಕ ಇಡೀ ಕಾರ್ಯಾಚರಣೆಯಲ್ಲಿ‌ ಭಾಗಿಯಾಗಿದ್ದವರು ಹಾಗೂ ಪ್ರಾಥಮಿಕ ಸಂಪರ್ಕದಲ್ಲಿದ್ದ 50 ಜನ ಸಿಬ್ಬಂದಿಗೆ ಮಲ್ಲೇಶ್ವರಂನ ಕೆ ಸಿ ಜನರಲ್ ಆಸ್ಪತ್ರೆಯಲ್ಲಿ ಸ್ವಾಬ್ ಟೆಸ್ಟ್‌ಗೆ ಒಳಪಡಿಸಲಾಗಿತ್ತು. ಸದ್ಯ ಪರೀಕ್ಷಾ ವರದಿ ನೆಗೆಟಿವ್ ಬಂದಿದೆ ಎನ್ನಲಾಗಿದೆ. ನಾಳೆ ಅಧಿಕೃತ ಮಾಹಿತಿ ಹೊರ ಬೀಳಬೇಕಿದೆ.

ಇನ್ಸೆಂಟಿವ್ ಆಸೆಗೆ ಕೆಲಸ ನೀಡಿದ ಓಲಾ ಕಂಪನಿಗೆ ವಂಚಿಸುತ್ತಿದ್ದ ನಾಲ್ವರು ಚಾಲಕರನ್ನ ಜೂನ್ 11ರಂದು ಸಿಸಿಬಿ ಪೊಲೀಸರು ಬಂಧಿಸಿದ್ದರು. 50ಕ್ಕೂ ಹೆಚ್ಚು ಟ್ರಿಪ್ ಮಾಡಿದರೆ ಇನ್ಸೆಂಟಿವ್ ಸಿಗುತ್ತೆ ಎಂದು ಅಡ್ಡ ದಾರಿ ಹಿಡಿದಿದ್ದ ಬಂಧಿತರು ತಾವೇ ಬೇರೆ ಬೇರೆ ನಂಬರ್​ನಿಂದ ಕ್ಯಾಬ್ ಬುಕ್ ಮಾಡ್ತಿದ್ರು. ಬಳಿಕ Moc location ಎಂಬ ಆ್ಯಪ್ ಬಳಸಿ ಕ್ಯಾಬ್ ಟ್ರಿಪ್ ನಿರ್ವಹಿಸಿದೆ ಎಂದು ಕಿಲೋಮೀಟರ್​ಗಳನ್ನ ಸ್ಕಿಪ್ ಮಾಡುತ್ತಿದ್ದರು.

ಹೀಗೆ ಲಕ್ಷಾಂತರ ರೂ. ವಂಚಿಸಿದ್ದವರನ್ನ ಕಾರ್ಯಾಚರಣೆ ಮೂಲಕ ಖೆಡ್ಡಾಕ್ಕೆ ಕೆಡವಿದ್ದ ಸಿಸಿಬಿ ಪೊಲೀಸರು 500 ಸಿಮ್ ಕಾರ್ಡ್, 2 ಇನ್ನೋವಾ, ಒಂದು ಸ್ವಿಫ್ಟ್ ಕಾರು ವಶಪಡಿಸಿಕೊಂಡಿದ್ದರು. ಈ ಪೈಕಿ ಓರ್ವನಿಗೆ ಸೋಂಕು ದೃಢವಾಗಿತ್ತು. ಆತನ ಜೊತೆಗೆ ಸಂಪರ್ಕದಲ್ಲಿದ್ದ 7 ಜನ ಕ್ವಾರಂಟೈನ್​ಗೊಳಗಾಗಿದ್ದರು.

ABOUT THE AUTHOR

...view details