ಕರ್ನಾಟಕ

karnataka

ETV Bharat / state

ಬಾಂಗ್ಲಾ ಯುವತಿ ಅತ್ಯಾಚಾರ ಕೇಸ್​: ಬಂಧಿತ ಆರೋಪಿಗಳಲ್ಲಿ‌ ಓರ್ವನಿಗೆ ಕೊರೊನಾ - ಬಾಂಗ್ಲಾ ಯುವತಿ ರೇಪ್​ ಕೇಸ್​

ಬೆಂಗಳೂರಿನಲ್ಲಿ ಬಾಂಗ್ಲಾ ಯುವತಿ ಮೇಲಿನ ಗ್ಯಾಂಗ್​ರೇಪ್​ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಮಂದಿಯ ಬಂಧನ ಮಾಡಲಾಗಿದ್ದು, ಅದರಲ್ಲಿ ಓರ್ವನಿಗೆ ಕೊರೊನಾ ದೃಢಪಟ್ಟಿದೆ.

Bangladeshi girl rape case
Bangladeshi girl rape case

By

Published : May 28, 2021, 11:31 PM IST

ಬೆಂಗಳೂರು:ಬಾಂಗ್ಲಾ ಯುವತಿ ಮೇಲೆ‌ ಲೈಂಗಿಕ ದೌರ್ಜನ್ಯ ನಡೆಸಿರುವ ಆರೋಪದಡಿ ಬಂಧನಕ್ಕೊಳಗಾಗಿರುವ ಆರು ಮಂದಿ ಆರೋಪಿಗಳಲ್ಲಿ ಓರ್ವನಿಗೆ ಕೊರೊನಾ ಇರುವುದು ದೃಢಗೊಂಡಿದೆ.

ಬಾಂಗ್ಲಾದೇಶದ ಯುವತಿ ಮೇಲೆ ಗ್ಯಾಂಗ್​ರೇಪ್​ ಪ್ರಕರಣದಲ್ಲಿ ರಾಮಮೂರ್ತಿ ನಗರ ಪೊಲೀಸರು ಇಬ್ಬರು ಮಹಿಳೆಯರು ಸೇರಿದಂತೆ 6 ಮಂದಿಯನ್ನ ಬಂಧಿಸಿದ್ದಾರೆ. ಬಂಧಿತ ಆರೋಪಿಗಳ ಪೈಕಿ ಓರ್ವನಾದ ಮೊಹಮ್ಮದ್​ ಬಾಬು ಶೇಕ್​ಗೆ ಕೊರೊನಾ ದೃಢಪಟ್ಟಿದೆ. ಹೀಗಾಗಿ ಆತನ ಬಂಧನ ಮಾಡಿರುವ ಪೊಲೀಸರಲ್ಲಿ ಇದೀಗ ಕೊರೊನಾ ಭೀತಿ ಶುರುವಾಗಿದೆ.

ಇದನ್ನೂ ಓದಿ: ಬೆಂಗಳೂರಲ್ಲಿ ಯುವತಿಗೆ ಸ್ನೇಹಿತರಿಂದಲೇ ಲೈಂಗಿಕ ಕಿರುಕುಳ.. ವಿಡಿಯೋ ಮಾಡಿ ವಿಕೃತಿ ಮೆರೆದವರು ಅರೆಸ್ಟ್

ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಮೂವರು ಆರೋಪಿಗಳನ್ನು ವಸಂತನಗರದ ಗುರುನಾನಕ್ ಭವನದ ನ್ಯಾಯಾಲಯಕ್ಕೆ ಹಾಜರುಪಡಿಸಿ 14 ದಿನಗಳ ಕಾಲ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಇದಕ್ಕೂ ಮುನ್ನ ಆರೋಪಿಗಳು ವೈದ್ಯಕೀಯ ಪರೀಕ್ಷೆಗೊಳಪಟ್ಟಿದ್ದಾರೆ. ಆರ್​​ಟಿಪಿಸಿಆರ್​​ ಪರೀಕ್ಷೆಯಲ್ಲಿ ಆರೋಪಿ ಮೊಹಮ್ಮದ್ ಬಾಬು ಶೇಖ್​ಗೆ ಕೊರೊನಾ ಸೋಂಕಿರುವುದು ಗೊತ್ತಾಗಿದೆ. ಸದ್ಯ ಆತನನ್ನು‌ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದು ಕ್ವಾರಂಟೈನ್​ಗೊಳಪಡಿಸಲಾಗಿದೆ.

ಪ್ರಾಥಮಿಕ‌ ಸಂಪರ್ಕದಲ್ಲಿರುವ ಪೊಲೀಸರು ಪರೀಕ್ಷೆಗೊಳಪಡುವಂತೆ ಮೇಲಾಧಿಕಾರಿಗಳು ಸೂಚನೆ ನೀಡಿದ್ದಾರೆ.

ABOUT THE AUTHOR

...view details