ಮಂಗಳೂರು: ಶಾಂಭವಿ ನದಿಗೆ ಈಜಾಡಲು ಇಳಿದ ಬೆಂಗಳೂರು ಮೂಲದ ನಿವಾಸಿಯೋರ್ವರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ನಗರದ ಕಿನ್ನಿಗೋಳಿ ಸಮೀಪದ ಕರ್ನಿರೆ ಎಂಬಲ್ಲಿ ನಡೆದಿದೆ.
ಶಾಂಭವಿ ನದಿಯಲ್ಲಿ ಮುಳುಗಿ ಬೆಂಗಳೂರಿನ ಯುವಕ ಸಾವು - ಕಿನ್ನಿಗೋಳಿ ಶಾಂಭವಿ ನದಿ
ಈಜಾಡಲು ಶಾಂಭವಿ ನದಿಗೆ ಇಳಿದಿದ್ದ ಬೆಂಗಳೂರು ಯುವಕನೋರ್ವ ನೀರಿನ ಸೆಳೆತಕ್ಕೆ ಸಿಲುಕಿ ಸಾವಿಗೀಡಾದ ಘಟನೆ ನಡೆದಿದೆ.
![ಶಾಂಭವಿ ನದಿಯಲ್ಲಿ ಮುಳುಗಿ ಬೆಂಗಳೂರಿನ ಯುವಕ ಸಾವು Bangalore youth drowns in Shambhavi river water and death](https://etvbharatimages.akamaized.net/etvbharat/prod-images/768-512-8704180-thumbnail-3x2-dkdk.jpg)
ಶಾಂಭವಿ ನದಿ
ಅನಿಲ್ (32) ಮೃತಪಟ್ಟ ದುರ್ದೈವಿ. ಬೆಂಗಳೂರಿನಿಂದ ಆಗಮಿಸಿದ್ದ 7 ಮಂದಿ ಯುವಕರು ಶಾಂಭವಿ ನದಿಗೆ ಈಜಲೆಂದು ಇಳಿದಿದ್ದರು. ಈ ಸಂದರ್ಭದಲ್ಲಿ ನದಿ ಸೆಳೆತಕ್ಕೆ ತಂಡದಲ್ಲಿದ್ದ ಮೂವರು ಯುವಕರು ಸಿಲುಕಿದ್ದರು.
ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಮೂವರ ಪೈಕಿ ಇಬ್ಬರನ್ನು ಸ್ಥಳೀಯರು ರಕ್ಷಿಸಿದರು. ಆದರೆ ಅನಿಲ್ನನ್ನು ರಕ್ಷಿಸಲು ಪ್ರಯತ್ನಪಟ್ಟರೂ ಸಾಧ್ಯವಾಗಲಿಲ್ಲಿ. ಸ್ಥಳಕ್ಕೆ ಮುಲ್ಕಿ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಾಗಿದೆ.