ಬೆಂಗಳೂರು: ಆನೇಕಲ್ ಉಪವಿಭಾಗದ ಸೂರ್ಯಸಿಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾರದ ಹಿಂದೆ ನಡೆದಿದ್ದ ಮಹಿಳೆಯ ಕೊಲೆ ಪ್ರಕರಣ ಭೇದಿಸುವಲ್ಲಿ ಸೂರ್ಯಸಿಟಿ ಪೊಲೀಸರು ಯಶಸ್ವಿಯಾಗಿದ್ದಾರೆ.
ನೂತನವಾಗಿ ವರ್ಗಾವಣೆಗೊಂಡು ಬಂದಿರುವ ಎಸ್ಪಿ ಮಲ್ಲಿಕಾರ್ಜುನ ಬಾಲದಂಡೆ, ಎಎಸ್ಪಿ ಪುರುಷೋತ್ತಮ್, ಡಿವೈಎಸ್ಪಿ ಲಕ್ಷ್ಮಿ ನಾರಾಯಣ್ ಮಾರ್ಗದರ್ಶನದಲ್ಲಿ ಸೂರ್ಯನಗರ ಪಿಐ ರಾಘವ್ ಎಸ್ ಗೌಡ ಮತ್ತು ಸಿಬ್ಬಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಆನೇಕಲ್ ತಾಲೂಕಿನ ವಣಕನಹಳ್ಳಿ ವಾಸಿ ಪೈಂಟಿಂಗ್/ಗಾರೆ ಕೆಲಸ ಮಾಡಿಕೊಂಡಿದ್ದ 26 ವರ್ಷದ ಮಣಿಕಂಠ(ಮಣಿ) ಮತ್ತು ಹಳೇ ಚಂದಾಪುರದ ಲಕ್ಷ್ಮಿ ಸಾಗರದ ವಾಸಿ ಚೇತನ್/ಅಭಿ ಬಂಧಿತ ಕೊಲೆ ಆರೋಪಿಗಳು.
ಮಹಿಳೆ ಹತ್ಯೆ ಪ್ರಕರಣದ ಆರೋಪಿಗಳು ಅರೆಸ್ಟ್ ಕಳೆದ ವಾರ ತಮಿಳುನಾಡು ಮೂಲದ ಮಾದಮ್ಮ ಲಕ್ಷ್ಮಿ ಸಾಗರದ ಸುತ್ತ ತೋಟದ ಕೆಲಸ ಮಾಡುತ್ತಿದ್ದರು. ಮಾದಮ್ಮರಿಗೂ ಮಣಿಗೂ ಅನೈತಿಕ ಸಂಬಂಧವಿತ್ತು. ಈ ನಡುವೆ ಮಾದಮ್ಮರಿಗೆ ತನ್ನ ಸಂಬಂಧಿಕರಿಂದ 10 ಸಾವಿರ ಹಣ ಬಂದಿದ್ದು, ಮಣಿಗೆ ಹೇಳದೇ ಬಳಸಿಕೊಂಡಿದ್ದರು. ಇದೇ ವಿಷಯ ಮಾದಮ್ಮರ ಕೊಲೆಗೆ ಕಾರಣವಾಗಿತ್ತು.
ಇದನ್ನೂ ಓದಿ:ಖಾಸಗಿ ಬಸ್ ಪಲ್ಟಿ: 9ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯ
ಖರ್ಚಿನ ವಿಷಯ ಮಣಿಗೆ ತಿಳಿಸಲಿಲ್ಲ ಎಂಬ ಕಾರಣಕ್ಕೆ ಇಬ್ಬರು ಕುಡಿದು ಜಗಳವಾಡಿದ್ದರು. ಇವರ ನಡುವೆ ಇನ್ನೊಬ್ಬ ಕುಡುಕ ಚೇತನ್ ಅಲಿಯಾಸ್ ಅಭಿ ಸೇರಿ ಮಾದಮ್ಮರನ್ನು ಕ್ರೂರವಾಗಿ ಹೊಡೆದು ಕೊಲೆ ಮಾಡಿದ್ದರು. ಕೊಲೆ ಮಾಡಿ ಪರಾರಿಯಾಗಿದ್ದ ಈ ಇಬ್ಬರನ್ನು ಪತ್ತೆ ಹಚ್ಚಿರುವ ಪೊಲೀಸರು ಆರೋಪಿಗಳನ್ನು ಜೈಲಿಗಟ್ಟಿದ್ದಾರೆ.